ETV Bharat / bharat

ಕೇಂದ್ರದ ಸುಳ್ಳು ಮತ್ತು ಖಾಲಿ ಘೋಷಣೆಗಳ ರಹಸ್ಯ ಇಲಾಖೆ ದಕ್ಷವಾಗಿದೆ: ರಾಹುಲ್ ಟೀಕೆ

author img

By

Published : Jun 13, 2021, 2:23 PM IST

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್​ ಮೂಲಕ ವಾಗ್ದಾಳಿ ಮುಂದುವರೆಸಿದ್ದು, ಸರ್ಕಾರ ಸುಳ್ಳು ಮತ್ತು ಖಾಲಿ ಘೋಷಣೆಗಳನ್ನು ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

Rahul Gandhi says Centre's most efficient ministry is of 'Lies and Empty slogans'
ಕೇಂದ್ರದ ಸುಳ್ಳು ಮತ್ತು ಖಾಲಿ ಘೋಷಣೆಗಳ ರಹಸ್ಯ ಇಲಾಖೆ ದಕ್ಷವಾಗಿದೆ: ರಾಹುಲ್ ಕಿಡಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವುದು ಮುಂದುವರೆದಿದೆ. ಟ್ವಿಟರ್​ನಲ್ಲಿ ಕೇಂದ್ರದ ವಿರುದ್ಧ ಹರಿಹಾಯ್ದಿರುವ ಅವರು, ಕೇಂದ್ರ ಸರ್ಕಾರ ಸುಳ್ಳು ಮತ್ತು ಖಾಲಿ ಘೋಷಣೆಗಳನ್ನು ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • - Which is GOI’s most efficient ministry?

    - The secret Ministry for Lies & Empty slogans

    — Rahul Gandhi (@RahulGandhi) June 13, 2021 " class="align-text-top noRightClick twitterSection" data=" ">

ಭಾರತ ಸರ್ಕಾರದಲ್ಲಿ ಸುಳ್ಳು ಮತ್ತು ಖಾಲಿ ಘೋಷಣೆ ಹೊರಡಿಸುವ ರಹಸ್ಯ ಇಲಾಖೆ ದಕ್ಷವಾಗಿದೆ ಎಂದು ಅವರು ಟೀಕಿಸಿದ್ದಾರೆ.

ಇದನ್ನೂ ಓದಿ: ನೀರು ಹರಿಯುತ್ತಿದ್ದ ರಸ್ತೆಯಲ್ಲಿ ಕುಳ್ಳಿರಿಸಿ ಗುತ್ತಿಗೆದಾರನ ಮೈಮೇಲೆ ಕಸ ಸುರಿಸಿದ ಶಿವಸೇನೆ ಶಾಸಕ!

ವಿವಿಧ ರಾಜ್ಯಗಳಲ್ಲಿ ಕಾಂಗ್ರೆಸ್ ಈಗಾಗಲೇ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನು ನಡೆಸುತ್ತಿದ್ದು, ಲಸಿಕೆ ಕೊರತೆ, ಜಿಎಸ್​ಟಿ ಮತ್ತು ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮುಂತಾದ ವಿಚಾರಗಳನ್ನು ಇಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ.

ಇದಕ್ಕೂ ಮೊದಲು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಆನ್​ಲೈನ್ ನೋಂದಣಿ ಸಾಕಾಗುವುದಿಲ್ಲ. ಎಲ್ಲರೂ ವ್ಯಾಕ್ಸಿನ್ ಸೆಂಟರ್ ಬಳಿಯೇ ನೇರವಾಗಿ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳಬೇಕು. ಇಂಟರ್​​ನೆಟ್​ ಇಲ್ಲದವರಿಗೂ ಕೂಡಾ ಬದುಕುವ ಹಕ್ಕಿದೆ ಎಂದು ರಾಹುಲ್ ಟ್ವೀಟ್ ಮಾಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.