ETV Bharat / bharat

’’ಹಮ್​​ ದೋ ಹಮಾರೆ ದೋ...’’ ರಾಹುಲ್​ ಮಾತಿಗೆ ಬಿಜೆಪಿ ಆಕ್ಷೇಪ.. ಸದನದಲ್ಲಿ ಗದ್ದಲ! - ಲೋಕಸಭೆಯಲ್ಲಿ ರಾಹುಲ್ ಗಾಂಧಿ

ಕಾಂಗ್ರೆಸ್​, ಟಿಎಂಸಿ ಮತ್ತು ಡಿಎಂಕೆ ಪಕ್ಷದ ಸದಸ್ಯರು ಎರಡು ನಿಮಿಷಗಳ 200 ರೈತರ ಸಾವಿಗೆ ಶೋಕ ವ್ಯಕ್ತಪಡಿಸಿ ಮೌನಾಚರಣೆ ನಡೆಸಿದರು. ಈ ಬಳಿಕ ತಮ್ಮ ಭಾಷಣದಲ್ಲಿ ರೈತ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಮೋದಿ ಸರ್ಕಾರದ ವಿರುದ್ಧ ಹಮ್​ ದೋ ಹಮಾರೆ ದೋ ಎನ್ನುವ ಮೂಲಕ ಹರಿಹಾಯ್ದರು. ರೈತರ ಸಮಸ್ಯೆ ಪ್ರಸ್ತಾಪಿಸಿದರು. ಈ ವೇಳೆ ಬಿಜೆಪಿ ಸಂಸದರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಸದನದಲ್ಲಿ ಗದ್ದಲ ಏರ್ಪಟ್ಟಿತು.

Rahul
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ
author img

By

Published : Feb 11, 2021, 8:32 PM IST

ನವದೆಹಲಿ: ಬಜೆಟ್​ ಮೇಲಿನ ಭಾಷಣ ಆರಂಭಿಸಿದ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಸಂಸದ ರಾಹುಲ್​ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಎಂದಿನ ಶೈಲಿಯಲ್ಲಿ ಹರಿಹಾಯ್ದರು.

ಗಬ್ಬರ ಸಿಂಗ್​ ಟ್ಯಾಕ್ಸ್​, ರೈತರ ವಿರುದ್ಧದ ಸರ್ಕಾರದ ಧೋರಣೆ, ಕ್ಯಾಪಿಟಲಿಸ್ಟ್​ಗಳ ಪರ ಕೇಂದ್ರ ಬ್ಯಾಟಿಂಗ್​ ಬಗ್ಗೆ ಕೆಂಡ ಕಾರಿದರು. ಈ ಬಾರಿ ಗಬ್ಬರ ಸಿಂಗ್​ ಟ್ಯಾಕ್ಸ್​ ಉಚ್ಚಾರಣೆ ಜತೆಗೆ ಹಮ್​ ದೋ ಹಮಾರೇ ದೋ ಎಂಬ ಪದ ಬಳಕೆ ಮಾಡಿ ಮೋದಿಗೆ ಟಾಂಗ್​ ಕೊಟ್ಟರು.

ಈ ಪದ ಬಳಕೆ ಆಗುತ್ತಿದ್ದಂತೆ ಬಿಜೆಪಿ ಸಂಸದರು, ರಾಹುಲ್​ ಅವರೇ ಇದು ಬಜೆಟ್​ ಭಾಷಣ, ಬಜೆಟ್​ ಬಗ್ಗೆ ಮಾತನಾಡಿ ಎಂದು ಸದನದ ನಡಾವಳಿ ರೂಲ್ಸ್​ಗಳನ್ನ ಎತ್ತಿ ತೋರಿಸಿದರು. ಇದ್ಯಾವುದಕ್ಕೂ ಬಗ್ಗದ ರಾಹುಲ್​ ಗಾಂಧಿ, ತಮ್ಮ ಪಾಡಿಗೆ ತಾವು ಕೇಂದ್ರ ಸರ್ಕಾರ ಹಾಗೂ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಕೇಂದ್ರ ಕೃಷಿ ಸಚಿವರು, ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ್​ ಜೋಶಿ ರೂಲ್​ ಬುಕ್​ ಓದಿ ರಾಹುಲ್​ ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ರಾಹುಲ್​ ಗಾಂಧಿ ಬೆಂಬಲಕ್ಕೆ ಬಂದ ವಿಪಕ್ಷ ನಾಯಕ ಅಧೀರ್​ ರಂಜನ್​ ದಾಸ್​ ರಾಹುಲ್​ ಮಾತುಗಳನ್ನ ಸಮರ್ಥಿಸಿಕೊಂಡರು. ಆಗ ಮತ್ತೆ ಗದ್ದಲ ಏರ್ಪಟ್ಟಿತು. ಈ ವೇಳೆ ಸ್ಪೀಕರ್​ ಎರಡೂ ಕಡೆ ಸಂಸದರು ಹಾಗೂ ರಾಹುಲ್​ ಗಾಂಧಿಗೂ ನಿಯಮ ಪಾಲಿಸುವಂತೆ ಸೂಚಿಸಿದರು.

ಆದರೂ ರಾಹುಲ್​ ತಮ್ಮದೇ ರೀತಿಯಲ್ಲಿ ಮಾತು ಮುಂದುವರೆಸಿದರು, ದೆಹಲಿಯ ಗಡಿಯಲ್ಲಿ ರೈತರ ಪ್ರತಿಭಟನೆಗೆ ಕಾರಣವಾದ ಮೂರು ಕೃಷಿ ಕಾನೂನುಗಳನ್ನು ರಾಹುಲ್​ ವಿರೋಧಿಸಿದರು. ಈ ಶಾಸನಗಳು ಕೈಗಾರಿಕೋದ್ಯಮಿಗಳಿಗೆ ಅನಿಯಮಿತ ಪ್ರಮಾಣದ ಆಹಾರ ಧಾನ್ಯಗಳನ್ನು ಖರೀದಿಸಲು ಮತ್ತು ಅವುಗಳನ್ನು ಸಂಗ್ರಹಿಸಲು ಅವಕಾಶ ನೀಡುತ್ತದೆ ಎಂದು ಹೇಳಿದರು.

ಬಜೆಟ್​ ಕುರಿತು ಮಾತನಾಡಲು ರಾಹುಲ್​ ನಿರಾಕರಣೆ

ರೈತರ ಪ್ರತಿಭಟನೆಗೆ ತಮ್ಮ ಬೆಂಬಲವನ್ನು ನೀಡಿದ ಅವರು ಲೋಕಸಭೆಯಲ್ಲಿ ಇದು ಕೇವಲ ರೈತರ ಆಂದೋಲನವಲ್ಲ, ದೇಶದ ಆಂದೋಲನವಾಗಿದೆ ಮತ್ತು ಸರ್ಕಾರ ಕಾನೂನುಗಳನ್ನು ರದ್ದುಗೊಳಿಸಬೇಕಾಗುತ್ತದೆ ಎಂದು ಒತ್ತಾಯಿಸಿದರು.

"ಮೂರು ಕಾನೂನುಗಳ ಉದ್ದೇಶವು ಕೈಗಾರಿಕೋದ್ಯಮಿಗಳಿಗೆ ಅನಿಯಮಿತ ಪ್ರಮಾಣದ ಆಹಾರ ಧಾನ್ಯಗಳನ್ನು ಖರೀದಿಸಲು ಮತ್ತು ಅವರಿಗೆ ಬೇಕಾದಷ್ಟು ಸಂಗ್ರಹಿಸಲು ಅವಕಾಶ ನೀಡುವುದು" ಎಂದು ಅವರು ಆರೋಪಿಸಿದರು.

"ಹೊಸ ಕೃಷಿ ಕಾನೂನುಗಳು ಭಾರತದ ಆಹಾರ ಭದ್ರತಾ ವ್ಯವಸ್ಥೆಯನ್ನು ನಾಶಮಾಡುತ್ತವೆ ಮತ್ತು ಗ್ರಾಮೀಣ ಆರ್ಥಿಕತೆಗೆ ಹಾನಿ ಮಾಡುತ್ತದೆ" ಎಂದು ಅವರು ಹೇಳಿದರು. ರೈತರು ಎಲ್ಲಿಯೂ ಹೋಗುತ್ತಿಲ್ಲ ಆದರೆ ಸರ್ಕಾರವನ್ನು ಉರುಳಿಸುತ್ತಾರೆ ಎಂದು ರಾಹುಲ್​ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.