ETV Bharat / bharat

ಭಾರತ್​ ಜೋಡೋ ಯಾತ್ರೆ: 2ನೇ ದಿನದ ಪಯಣ ಅಗಸ್ತೇಶ್ವರಂನಿಂದ ಆರಂಭ - ಯಾತ್ರೆ ಬೆಂಬಲಿಸಲು ರಾಹುಲ್​ ಮನವಿ

150 ದಿನಗಳ ಭಾರತ್​ ಜೋಡೋ ಯಾತ್ರೆಯ 2ನೇ ದಿನದ ಪಯಣ ಕನ್ಯಾಕುಮಾರಿ ಜಿಲ್ಲೆಯ ಅಗಸ್ತೇಶ್ವರಂ ಪಟ್ಟಣದಿಂದ ಆರಂಭವಾಗಿದೆ. ನೂರಾರು ಜನರು ಉತ್ಸಾಹದಿಂದ ಯಾತ್ರೆಯಲ್ಲಿ ಭಾಗವಹಿಸಿದ್ದರು.

bharat-jodo-day-2-
ಭಾರತ್​ ಜೋಡೋ ಯಾತ್ರೆ
author img

By

Published : Sep 8, 2022, 3:20 PM IST

ಕನ್ಯಾಕುಮಾರಿ (ತಮಿಳುನಾಡು): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬೃಹತ್ತಾಗಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಗೆ ಎರಡನೇ ದಿನವಾದ ಗುರುವಾರವೂ ಭಾರೀ ಬೆಂಬಲ ವ್ಯಕ್ತವಾಗಿದೆ. ಕನ್ಯಾಕುಮಾರಿ ಜಿಲ್ಲೆಯ ಅಗಸ್ತೇಶ್ವರಂ ಪಟ್ಟಣದಿಂದ ಪಕ್ಷದ ಹಿರಿಯ ನಾಯಕರೊಂದಿಗೆ ರಾಹುಲ್​ ಪಾದಯಾತ್ರೆಯನ್ನು ಪ್ರಾರಂಭಿಸಿದರು.

ಪಕ್ಷದ ಸಂಸದರಾದ ಕೆ.ಸಿ. ವೇಣುಗೋಪಾಲ್, ಪಿ.ಚಿದಂಬರಂ, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಸೇರಿದಂತೆ ಹಿರಿಯ ನಾಯಕರು ರಾಹುಲ್ ಗಾಂಧಿ ಅವರೊಂದಿಗೆ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

ಯಾತ್ರೆ ವೇಳೆ ಮಹಿಳಾ ಕಾರ್ಯಕರ್ತರಿಗೆ ರಾಹುಲ್​ ಉತ್ಸಾಹ ಹಸ್ತಲಾಘವ

ಬಿಜೆಪಿಯ ದೇಶ ವಿಭಜಿಸುವ ರಾಜಕೀಯವನ್ನು ಸಮರ್ಥವಾಗಿ ಎದುರಿಸಲು ನಡೆಸಲಾಗುತ್ತಿರುವ ಭಾರತ್ ಜೋಡೋ ಯಾತ್ರೆಯು ಒಂದು ಸಾಮೂಹಿಕ ಜಾಗೃತಿ ಕಾರ್ಯಕ್ರಮವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಬಣ್ಣಿಸಿದರು.

ರಾಹುಲ್​ದು ಅರ್ಜುನ ಗುರಿ: ರಾಹುಲ್​ ಗಾಂಧಿ ಅವರು ಯಾತ್ರೆಯ ಬಗ್ಗೆ ಹೊಂದಿರುವ ಗುರಿಯನ್ನು ಅರ್ಜುನನ ಮತ್ಸ್ಯ ಗುರಿಯನ್ನು ಭೇದಿಸಿದ್ದಕ್ಕೆ ಹೋಲಿಸಿದ್ದಾರೆ. "ಬಿಲ್ವಿದ್ಯೆ ಪರಾಕ್ರಮಿ ಅರ್ಜುನ, ದ್ರೌಪದಿಯ ಸ್ವಯಂವರಕ್ಕೆ ಹೋದಾಗ ಮೀನಿನ ಕಣ್ಣಿಗೆ ಗುರಿ ಇಟ್ಟು ಹೇಗೆ ಅದನ್ನು ಭೇದಿಸಿದನೋ, ಅದೇ ರೀತಿ ರಾಹುಲ್​ ಗಾಂಧಿ ಅವರು ಗುರಿಯನ್ನು ನೆಟ್ಟಿದ್ದಾರೆ. ಪಕ್ಷಕ್ಕೀಗ ನೇರ ದೃಷ್ಟಿ, ನೇರ ಗುರಿ ಇದೆ ಎಂದು ಹೇಳಿದರು.

ಭಾರತ್​ ಜೋಡೋ ಯಾತ್ರೆಯಲ್ಲಿ ರಾಹುಲ್​ ಉತ್ಸಾಹ
ಭಾರತ್​ ಜೋಡೋ ಯಾತ್ರೆಯಲ್ಲಿ ರಾಹುಲ್​ ಉತ್ಸಾಹ

ಯಾತ್ರೆ ಬೆಂಬಲಿಸಲು ರಾಹುಲ್​ ಮನವಿ: ಎರಡನೇ ದಿನ ಯಾತ್ರೆಯಲ್ಲಿ ಭಾಗವಹಿಸಿದ ಮಾತನಾಡಿದ ರಾಹುಲ್ ಗಾಂಧಿ, ತ್ರಿವರ್ಣ ಧ್ವಜವು ಎಲ್ಲಾ ಧರ್ಮ, ರಾಜ್ಯ ಮತ್ತು ಭಾಷೆಗೆ ಸೇರಿದ್ದಾಗಿದೆ. ಇಂತಹ ಏಕತೆಯ ಭಾರತವನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ವಿಭಜಿಸುವ ಕೆಲಸ ಮಾಡುತ್ತಿದೆ. ಧರ್ಮದ ಆಧಾರದ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇಂತಹ ಸಂದಿಗ್ಧ ಸಮಯದಲ್ಲಿ ದೇಶವನ್ನು ಒಗ್ಗೂಡಿಸಲು ಜನರು ಬೆಂಬಲ ನೀಡಬೇಕು ಎಂದು ಕೋರಿದರು.

ಸಿಬಿಐ, ಇಡಿ ಮತ್ತು ಐಟಿಯನ್ನು ಬಳಸಿ ಬಿಜೆಪಿ, ಪ್ರತಿಪಕ್ಷಗಳನ್ನು ಹೆದರಿಸಬಹುದು ಎಂದುಕೊಂಡಿದ್ದಾರೆ. ಭಾರತೀಯರು ಹೆದರುವುದಿಲ್ಲ ಎಂಬುದು ಅವರಿಗೆ ಅರ್ಥವಾಗಿಲ್ಲ ಎಂದು ಮತ್ತೊಮ್ಮೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು.

2024 ರ ಚುನಾವಣೆಗೆ ಮುಂಚಿತವಾಗಿ ನರೇಂದ್ರ ಮೋದಿ ಸರ್ಕಾರವನ್ನು ಎದುರಿಸಲು ಕಾಂಗ್ರೆಸ್‌ ಪ್ರತಿತಂತ್ರವಾಗಿ 'ಭಾರತ್ ಜೋಡೋ ಯಾತ್ರೆ'ಯನ್ನು ಪ್ರಾರಂಭಿಸಿದೆ. 150 ದಿನಗಳ ಕಾಲ ನಡೆಯುವ 3,570 ಕಿಮೀ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರು ಭಾಗವಹಿಸಲಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಈ ಯಾತ್ರೆ ನಡೆಯಲಿದೆ.

ಓದಿ: 2ನೇ ದಿನಕ್ಕೆ ಕಾಲಿಟ್ಟ ಕಾಂಗ್ರೆಸ್‌ ಭಾರತ್‌ ಜೋಡೋ ಯಾತ್ರೆ, ಡ್ರೋಣ್‌ ದೃಶ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.