ETV Bharat / bharat

ರಾಹುಲ್​ ಮಹಾತ್ಮನ ಹಾದಿ ಬಿಟ್ಟು, ಜಿನ್ನಾ ಮಾರ್ಗದಲ್ಲಿ ನಡೆಯುತ್ತಿದ್ದಾರೆ: ಶಿವರಾಜ್​ ಸಿಂಗ್​ ಚೌಹಾಣ್ - ರಾಹುಲ್​ ವಿರುದ್ಧ ಶಿವರಾಜ್​ ಸಿಂಗ್​ ವಾಗ್ದಾಳಿ

ಅಸ್ಸೋಂ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್ ಚೌಹಾಣ್ ಬಿಜೆಪಿ ಅಭ್ಯರ್ಥಿಗಳ ಪರ​​ ಪ್ರಚಾರ ಸಭೆ ನಡೆಸಿದರು.

Shivraj Singh Chouhan
Shivraj Singh Chouhan
author img

By

Published : Mar 15, 2021, 6:43 PM IST

ನಹರ್ಕಟಿ(ಅಸ್ಸೋಂ): ರಾಹುಲ್​ ಗಾಂಧಿ ಮಹಾತ್ಮಾ ಗಾಂಧಿಯವರ ಹಾದಿಯಲ್ಲಿ ನಡೆಯುವ ಬದಲು ಜಿನ್ನಾ ಹಾದಿಯಲ್ಲಿ ನಡೆಯುತ್ತಿದ್ದಾರೆ. ಆ ಮಾರ್ಗವನ್ನು ಅಸ್ಸೋಂ ಅಥವಾ ಭಾರತದ ಜನರು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಮಧ್ಯಪ್ರದೇಶ ಸಿಎಂ ಹಾಗೂ ಬಿಜೆಪಿ ನಾಯಕ ಶಿವರಾಜ್​ ಸಿಂಗ್​ ಚೌಹಾಣ್​ ಹೇಳಿದ್ದಾರೆ.

ಅಸ್ಸೋಂನ ನಹರ್ಕಟಿಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ರಾಹುಲ್​ ಗಾಂಧಿ, ​​ ಬದ್ರುದ್ದೀನ್​ ಅಜ್ಮಲ್​​ನಂತಹ ವ್ಯಕ್ತಿಯೊಂದಿಗೆ ಸೇರಿಕೊಂಡಿದ್ದು, ಒಳನುಸುಳುಕೋರರನ್ನು ಬೆಂಬಲಿಸಿದ್ದಾರೆಂದು ಆರೋಪಿಸಿದರು.

ರಾಹುಲ್​ ವಿರುದ್ಧ ಶಿವರಾಜ್​ ಸಿಂಗ್​ ವಾಗ್ದಾಳಿ

ಕಾಂಗ್ರೆಸ್​ ಅಸ್ಸೋಂಗೆ ಹಸಿವು, ನಿರುದ್ಯೋಗ ಮತ್ತು ಬಡತನ ನೀಡಿದ್ದು, ಅದರ ಆಡಳಿತದಲ್ಲಿ ರಾಜ್ಯ ಅಭಿವೃದ್ಧಿಯಾಗಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸರ್ಬಾನಂದ್​ ಸೋನವಾಲ್​ ನೇತೃತ್ವದಲ್ಲಿ ಅಸ್ಸೋಂ ಅಭಿವೃದ್ಧಿಯ ಹಾದಿಯತ್ತ ಮುನ್ನಡೆಯಲು ಪ್ರಾರಂಭಿಸಿತು ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.