ನವದೆಹಲಿ: "ನಾನೇಕೆ ಅಸಮಾಧಾನಗೊಳ್ಳಬೇಕು? ನಾವು ಸಾಗಬೇಕಾದ ದಾರಿ ಇನ್ನು ಬಹಳ ದೂರ ಇದೆ" ಎಂದು ಕರ್ನಾಟಕ ನಿಯೋಜಿತ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಿಮ್ಮನ್ನು ಉಪಮುಖ್ಯಮಂತ್ರಿ ಎಂದು ಘೋಷಣೆ ಮಾಡಿರುವುದು ನಿಮಗೆ ಸಂತೋಷವಾಗಿದೆಯೇ ಎಂದು ಗುರುವಾರ ಕೆಲವು ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ನವದೆಹಲಿಯಲ್ಲಿ ಹೀಗೆ ಉತ್ತರ ನೀಡಿದರು.
-
"Everything is well and will be well...," Karnataka Deputy CM-designate DK Shivakumar
— ANI Digital (@ani_digital) May 18, 2023 " class="align-text-top noRightClick twitterSection" data="
Read @ANI Story | https://t.co/Zlx2UVC2us#DKShivakumar #KarnatakaCM #Congress #Karnataka pic.twitter.com/P7IyJMBENa
">"Everything is well and will be well...," Karnataka Deputy CM-designate DK Shivakumar
— ANI Digital (@ani_digital) May 18, 2023
Read @ANI Story | https://t.co/Zlx2UVC2us#DKShivakumar #KarnatakaCM #Congress #Karnataka pic.twitter.com/P7IyJMBENa"Everything is well and will be well...," Karnataka Deputy CM-designate DK Shivakumar
— ANI Digital (@ani_digital) May 18, 2023
Read @ANI Story | https://t.co/Zlx2UVC2us#DKShivakumar #KarnatakaCM #Congress #Karnataka pic.twitter.com/P7IyJMBENa
"ರಾಜ್ಯದ ಜನರೆಲ್ಲ ಸೇರಿ ನಮಗೆ ದೊಡ್ಡ ಪ್ರಮಾಣದಲ್ಲಿ ಜನಾದೇಶ ನೀಡಿದ್ದಾರೆ. ಹರಸಿದ್ದಾರೆ, ಹಾಗಾಗಿ ನಮಗೆ ಬಹಳ ಖುಷಿ ಇದೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ನೀಡಿದ ಭರವಸೆಗಳನ್ನು ಈಡೇರಿಸಬೇಕು. ಅದು ನಮ್ಮ ಮುಖ್ಯ ಧ್ಯೇಯ ಮತ್ತು ಅಜೆಂಡಾ. ಅದನ್ನು ಈಡೇರಿಸುತ್ತೇವೆ" ಎಂದು ಅವರು ಹೇಳಿದರು. ಕಾಂಗ್ರೆಸ್ ಹೈಕಮಾಂಡ್ ತಮ್ಮನ್ನು ಉಪಮುಖ್ಯಮಂತ್ರಿ ಆಗಿ ಘೋಷಣೆ ಮಾಡಿದ ಬಳಿಕ ಮೊದಲ ಬಾರಿ ಅವರು ಬಹಿರಂಗವಾಗಿ ಪ್ರತಿಕ್ರಿಯೆ ನೀಡಿದರು.
-
#WATCH | Delhi: After being named the #Karnataka Deputy CM-designate DK Shivakumar says, "When people have given such a big mandate, we should definitely be happy and deliver and fulfill the promises. That is our main motto, agenda."
— ANI (@ANI) May 18, 2023 " class="align-text-top noRightClick twitterSection" data="
"Why should I be upset? There is a long way… pic.twitter.com/IsievsFPfb
">#WATCH | Delhi: After being named the #Karnataka Deputy CM-designate DK Shivakumar says, "When people have given such a big mandate, we should definitely be happy and deliver and fulfill the promises. That is our main motto, agenda."
— ANI (@ANI) May 18, 2023
"Why should I be upset? There is a long way… pic.twitter.com/IsievsFPfb#WATCH | Delhi: After being named the #Karnataka Deputy CM-designate DK Shivakumar says, "When people have given such a big mandate, we should definitely be happy and deliver and fulfill the promises. That is our main motto, agenda."
— ANI (@ANI) May 18, 2023
"Why should I be upset? There is a long way… pic.twitter.com/IsievsFPfb
"ಎಲ್ಲವೂ ಚೆನ್ನಾಗಿದೆ ಮತ್ತು ಚೆನ್ನಾಗಿಯೇ ಇರುತ್ತದೆ. ಹಾಗಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ನಾವೂ ಕೂಡ ಹೈಕಮಾಂಡ್ ನಿರ್ಧಾರವನ್ನು ಒಪ್ಪಿಕೊಂಡಿದ್ದೇವೆ".
"ಹೈಕಮಾಂಡ್ ಏನೇ ತೀರ್ಮಾನ ಮಾಡಿದರೂ ಅದಕ್ಕೆ ಬದ್ಧರಾಗಿರುತ್ತೇವೆ ಎಂದು ಮೊದಲೇ ಒನ್ ಲೈನ್ ನಿರ್ಧಾರ ಮಾಡಿದ್ದೆವು. ಅಂತಿಮವಾಗಿ ರಾಹುಲ್ ಗಾಂಧಿ ಅವರು ನನಗೆ ಕರೆ ಮಾಡಿ ನೀವೆಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದು ಹೇಳಿದರು. ಅಲ್ಲದೇ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ನಮಗೆ ಕರೆ ಮಾಡಿ ಈ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಯಾವುದೇ ಸೂತ್ರವನ್ನು ರಚಿಸಲಾಗಿದ್ದರೂ ನಾವೆಲ್ಲರೂ ಒಪ್ಪಿಕೊಂಡಿದ್ದೇವೆ”ಎಂದು ಅವರು ಹೇಳಿದರು.
-
#WATCH | Delhi: "Why should I be upset? There is a long way to go," says #Karnataka Deputy CM-designate DK Shivakumar when asked if he is happy on being named the Deputy CM-designate pic.twitter.com/bvhTWXw9M6
— ANI (@ANI) May 18, 2023 " class="align-text-top noRightClick twitterSection" data="
">#WATCH | Delhi: "Why should I be upset? There is a long way to go," says #Karnataka Deputy CM-designate DK Shivakumar when asked if he is happy on being named the Deputy CM-designate pic.twitter.com/bvhTWXw9M6
— ANI (@ANI) May 18, 2023#WATCH | Delhi: "Why should I be upset? There is a long way to go," says #Karnataka Deputy CM-designate DK Shivakumar when asked if he is happy on being named the Deputy CM-designate pic.twitter.com/bvhTWXw9M6
— ANI (@ANI) May 18, 2023
ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ, ಡಿಕೆಶಿ ಡಿಸಿಎಂ: ದೆಹಲಿಯಲ್ಲಿ ಕಾಂಗ್ರೆಸ್ ವರಿಷ್ಠರಿಂದ ಘೋಷಣೆ
ಸಿದ್ದರಾಮಯ್ಯನವರನ್ನೇ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿ ಕಾಂಗ್ರೆಸ್ ಹೈಕಮಾಂಡ್ ಇಂದು (ಗುರುವಾರ) ಘೋಷಿಸಿದೆ. ಈ ಮೂಲಕ ಕಳೆದ 5 ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಹಗ್ಗಜಗ್ಗಾಟಕ್ಕೆ ಅಧಿಕೃತ ತೆರೆ ಎಳೆಯಲಾಗಿದೆ. ನವದೆಹಲಿಯಲ್ಲಿಂದು ಜಂಟಿ ಸುದ್ದಿಗೋಷ್ಠಿ ನಡೆಸಿದ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಎಐಸಿಸಿ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಕೆಲವು ಷರತ್ತುಗಳ ಸೂತ್ರದಡಿ ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಸ್ಥಾನ ಹಾಗೂ ಡಿ.ಕೆ.ಶಿವಕುಮಾರ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ಪಕ್ಷದ ಘಟಾನುಘಟಿ ನಾಯಕರ ಆಂತರಿಕ ಬೇಗುದಿಗೆ ಬ್ರೇಕ್ ಹಾಕಿದರು.
"ಕನ್ನಡಿಗರ ಹಿತ ರಕ್ಷಣೆಗೆ ನಮ್ಮ ಕೈಗಳು ಸದಾ ಒಂದಾಗಿರಲಿವೆ. ಜನಪರ, ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಜೊತೆಗೆ ನಮ್ಮ ಎಲ್ಲಾ ಗ್ಯಾರೆಂಟಿಗಳನ್ನು ಈಡೇರಿಸಲು ಕಾಂಗ್ರೆಸ್ ಪಕ್ಷ ಒಂದು ಕುಟುಂಬವಾಗಿ ಕೆಲಸ ಮಾಡಲಿದೆ" ಎಂದು ಮುಖ್ಯಮಂತ್ರಿಯಾಗಿ ಆಯ್ಕೆಯಾದ ಸಿದ್ದರಾಮಯ್ಯ ಟ್ವೀಟ್ ಕೂಡ ಮಾಡಿದ್ದಾರೆ.
ಹೈಕಮಾಂಡ್ ಆದೇಶವನ್ನು ಸ್ವಾಗತಿಸಿದ ಡಿಕೆ ಶಿವಕುಮಾರ್ ಕೂಡ ಟ್ವೀಟ್ ಮಾಡಿಕೊಂಡಿದ್ದಾರೆ. "ಕರ್ನಾಟಕದ ಸುಭದ್ರ ಭವಿಷ್ಯ ಮತ್ತು ಜನಕಲ್ಯಾಣ ನಮ್ಮ ಪ್ರಮುಖ ಆದ್ಯತೆಯಾಗಿದೆ. ಅದನ್ನು ಖಾತರಿಪಡಿಸುವಲ್ಲಿ ನಾವು ಒಗ್ಗಟ್ಟಾಗಿದ್ದೇವೆ" ಎಂದು ಉಪಮುಖ್ಯಮಂತ್ರಿಯಾಗಿ ಆಯ್ಕೆಯಾದ ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಮುನಿಸು ಮುಗಿಸಿ 'ಕೈ' ಜೋಡಿಸಿದ ಸಿದ್ದು, ಡಿಕೆಶಿ: ಜನಪರ ಆಡಳಿತದ ಭರವಸೆ