ಲಖನೌ : ಖ್ಯಾತ ಕವಿ ಮುನಾವ್ವರ್ ರಾಣಾ ಪುತ್ರ ತಬ್ರೇಜ್ ರಾಣಾ ಅವರ ಮೇಲೆ ಗುಂಡು ಹಾರಿಸಿದ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ರಾಯ್ಬರೇಲಿ ಪೊಲೀಸರು ತಡರಾತ್ರಿ ಮುನಾವ್ವರ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ವಿರೋಧಿಗಳನ್ನು ಮಟ್ಟ ಹಾಕುವ ಸಲುವಾಗಿ ತಬ್ರೇಜ್ ರಾಣಾ ತಮ್ಮ ಮೇಲೆ ತಾವೇ ಗುಂಡು ಹಾರಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾದ ಹಿನ್ನೆಲೆ ತಬ್ರೇಜ್ ಬಂಧನಕ್ಕಾಗಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ತಬ್ರೇಜ್ ಪತ್ತೆಯಾಗಿಲ್ಲ.
ಪೊಲೀಸರು ದಾಳಿ ವೇಳೆ ಮಹಿಳೆಯೊಂದಿಗೆ ಅಸಭ್ಯವರ್ತನೆ ತೋರಿದ್ದಾರೆಂದು ತಬ್ರೇಜ್ ಕುಟುಂಬಸ್ಥರು ಆರೋಪಿಸಿದ್ದಾರೆ. ಯಾವುದೇ ಸುಳಿವು ಕೊಡದೆ ಮನೆಯೊಳಗೆ ನುಗ್ಗಿದ್ದಲ್ಲದೆ, ಎಲ್ಲರ ಫೋನ್‌ಗಳನ್ನು ಕಸಿದುಕೊಂಡಿದ್ದಾರೆ ಎಂದೂ ದೂರಿದ್ದಾರೆ.
ಜೂನ್ 28ರಂದು ಕವಿ ಮುನಾವ್ವರ್ ರಾಣಾ ಪುತ್ರ ತಬ್ರೇಜ್ ರಾಣಾ ಮೇಲೆ ಗುಂಡು ಹಾರಿಸಿದ ಪ್ರಕರಣ ಸುಳ್ಳು ಎಂದು ರಾಯ್ಬರೇಲಿಯ ಕೊತ್ವಾಲ್ ಹೇಳಿದ್ದಾರೆ. ತನ್ನ ಪ್ರತಿಸ್ಪರ್ಧಿಗಳ ವಿರುದ್ಧ ಆರೋಪಿಸಲು ತಬ್ರೇಜ್ ತನ್ನ ಮೇಲೆ ತಾನೇ ಗುಂಡು ಹಾರಿಸಿಕೊಂಡಿದ್ದ. ತಬ್ರೇಜ್ ಸಲ್ಲಿಸಿದ್ದ ದೂರಿಗೆ ರಾಯ್ ಬರೇಲಿ ಪೊಲೀಸರು ಅವರನ್ನೇ ಆರೋಪಿಗಳನ್ನಾಗಿ ಮಾಡಿದ್ದಾರೆ.
ಪೆಟ್ರೋಲ್ ಪಂಪ್ವೊಂದರಲ್ಲಿ ಕಾರಿಗೆ ಡೀಸೆಲ್ ಹಾಕಿಸುತ್ತಿದ್ದಾಗ, ಬೈಕ್ನಲ್ಲಿ ಬಂದ ಇಬ್ಬರು ಯುವಕರು ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ತಾನು ಪರವಾನಿಗೆ ಪಡೆದಿದ್ದ ಬಂದೂಕಿನಿಂದ ಕೆಳಗಿಳಿದಾಗ ಅವರು ಪರಾರಿಯಾಗಿದ್ದರು ಎಂದು ಆರೋಪಿಸಿದ್ರು.