ETV Bharat / bharat

ಎಲ್​ಪಿಜಿ ಸಿಲಿಂಡರ್‌ ಮೇಲೆ ಕ್ಯೂಆರ್ ಕೋಡ್‌: ಗ್ರಾಹಕರಿಗೆ ಪ್ರಯೋಜನಗಳೇನು? - ಎಲ್​ಪಿಜಿ ಸಿಲಿಂಡರ್‌

ಲಿಕ್ವಿಫೈಡ್‌ ಪೆಟ್ರೋಲಿಯಂ ಗ್ಯಾಸ್‌ (ಎಲ್‌ಪಿಜಿ) ಸಿಲಿಂಡರ್‌ ಮೇಲೆ ಶೀಘ್ರದಲ್ಲಿಯೇ ಕ್ಯೂಆರ್‌ ಕೋಡ್‌ ಬರಲಿದೆ. ಗೃಹ ಬಳಕೆ ಸಿಲಿಂಡರ್‌ಗಳ ಮೇಲೆ ವಿಶೇಷ ನಿಗಾ ಇಡಲು ಇದು ನೆರವಾಗಲಿದೆ.

QR Codes on LPG Cylinder
ಎಲ್​ಪಿಜಿ ಸಿಲಿಂಡರ್‌ಗಳ ಮೇಲೆ ಕ್ಯೂಆರ್ ಕೋಡ್‌
author img

By

Published : Nov 18, 2022, 8:50 AM IST

ನವದೆಹಲಿ: ಅನಿಲ ಕಳ್ಳತನವನ್ನು ತಡೆಗಟ್ಟಲು ಸರ್ಕಾರ ಶೀಘ್ರದಲ್ಲೇ ಎಲ್​ಪಿಜಿ ಸಿಲಿಂಡರ್‌ಗಳ ಮೇಲೆ ಕ್ಯೂಆರ್​ ಕೋಡ್‌ (ಕ್ವಿಡ್‌ ರಿಸ್ಪಾನ್ಸ್‌ ಕೋಡ್) ಅಳವಡಿಸಲಾಗುವುದು ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

ಸಿಲಿಂಡರ್ ಕಳ್ಳತನ ಅಥವಾ ದುರ್ಬಳಕೆಯಂಥ ಸಂದರ್ಭಗಳಲ್ಲಿ ಅದನ್ನು ಟ್ರೇಸ್ ಹಾಗೂ ಟ್ರ್ಯಾಕ್ ಮಾಡಲು ಸಿಲಿಂಡರ್ ನಿರ್ವಹಣೆ ಹಾಗೂ ಸಮಸ್ಯೆಗಳನ್ನು ಪರಿಹರಿಸಲು ಕ್ಯೂಆರ್ ಕೋಡ್ ತಂತ್ರಜ್ಞಾನ ನೆರವಿಗೆ ಬರಲಿದೆ ಎಂದು ಅವರು ಸ್ಪಷ್ಟಪಡಿಸಿದರು.

QR ಕೋಡ್‌ನ ಪ್ರಯೋಜನಗಳೇನು?: ಎಲ್‌ಪಿಜಿ ಸಿಲಿಂಡರ್‌ ಟ್ರೇಸಿಂಗ್​ ಸುಲಭ. ಹೊಸ ಸಿಲಿಂಡರ್​ಗಳಲ್ಲಿ ಕೋಡ್ ಅನ್ನು ವೆಲ್ಡ್ ಮಾಡಿ ಅಂಟಿಸಲಾಗುತ್ತದೆ. ಅದನ್ನು ಆ್ಯಕ್ಟಿವೇಟ್ ಮಾಡಿದರೆ ಈ ಕೆಳಕಂಡ ಸಮಸ್ಯೆಗಳು ಪರಿಹಾರವಾಗಲಿವೆ.

  • ಕಳ್ಳತನ
  • ಟ್ರ್ಯಾಕಿಂಗ್
  • ಟ್ರೇಸಿಂಗ್
  • ಗ್ಯಾಸ್ ಸಿಲಿಂಡರ್‌ಗಳ ದಾಸ್ತಾನನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವುದಕ್ಕೆ ಇದು ನೆರವಾಗಲಿದೆ.
    • Union Minister @HardeepSPuri says QR Code will be pasted on existing cylinders and welded on new ones. when activated it has the potential to resolve several existing issues of pilferage, tracking & tracing & better inventory management of gas cylinders.pic.twitter.com/ptmBKruUBZ

      — All India Radio News (@airnewsalerts) November 17, 2022 " class="align-text-top noRightClick twitterSection" data=" ">

ಈ ಬಗ್ಗೆ ಸಚಿವ ಹರದೀಪ್ ಸಿಂಗ್ ಪುರಿ ವಿಡಿಯೋ ಸಹಿತ ಟ್ವೀಟ್ ಮಾಡಿದ್ದಾರೆ. ಅವರು ಹಂಚಿಕೊಂಡಿರುವ ವಿಡಿಯೋ ಉತ್ತರ ಪ್ರದೇಶದಲ್ಲಿ 'ವಿಶ್ವ ಎಲ್​​ಪಿಜಿ ವಾರ 2022' ಕಾರ್ಯಕ್ರಮದ್ದಾಗಿದೆ. ಅದರಲ್ಲಿ ಸಚಿವರು ಅಧಿಕಾರಿಗಳ ಜತೆ ಕ್ಯೂಆರ್‌ ಕೋಡ್ ತಂತ್ರಜ್ಞಾನ ವಿಚಾರವಾಗಿ ಚರ್ಚಿಸುತ್ತಿರುವ ದೃಶ್ಯವಿದೆ. ವಸ್ತುವಿನ ಕುರಿತ ವಿವರಗಳು ಹಾಗೂ ವಿಸ್ತೃತ ಮಾಹಿತಿಯನ್ನೂ ಕ್ಯೂಆರ್ ಕೋಡ್ ಮೂಲಕ ತಿಳಿಯಬಹುದು. ಮೊದಲ ಬ್ಯಾಚ್‌ನ 20,000 ಎಲ್‌ಪಿಜಿಗೆ ಕೋಡ್‌ಗಳನ್ನು ನೀಡಲಾಗಿದೆ.

ಇದೇ ಕಾರ್ಯಕ್ರಮದಲ್ಲಿ ಸಚಿವರು, ಕೈಗೆಟಕುವ ದರದಲ್ಲಿ ಶುದ್ಧ ಇಂಧನ ಒದಗಿಸುವ ಬಗ್ಗೆಯೂ ಮಾತನಾಡಿದ್ದಾರೆ. ಎಲ್​ಪಿಜಿ ಎನರ್ಜಿ ಮಿಕ್ಸ್, ದಕ್ಷತೆ, ಸಂಸ್ಕರಣೆ, ಬಯೋ ಎಲ್​ಪಿಜಿಯಂಥ ವಿವಿಧ ಆವಿಷ್ಕಾರಗಳಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿರುವುದನ್ನು ಪ್ರಸ್ತಾಪಿಸಿ, ಈ ಎಲ್ಲ ಆವಿಷ್ಕಾರಗಳು ಅಭಿವೃದ್ಧಿಗೆ ಪೂರಕ. ಅಲ್ಲದೇ ಹವಾಮಾನ ಬದಲಾವಣೆ ವಿರುದ್ಧದ ಹೋರಾಟಕ್ಕೂ ನೆರವಾಗಲಿವೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ವಾಣಿಜ್ಯ ಬಳಕೆ ಎಲ್​ಪಿಜಿ ಸಿಲಿಂಡರ್​ ಬೆಲೆ ಇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.