ಚಂಡೀಗಢ : ಪಂಜಾಬಿ ಗಾಯಕ ಸಿಧು ಮೂಸೆವಾಲಾ ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಹಾಗೂ ಪಿಪಿಸಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ನೇತೃತ್ವದಲ್ಲಿಂದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.
ಈ ವೇಳೆ ಮಾತನಾಡಿದ ನವಜೋತ್ ಸಿಂಗ್ ಸಿಧು, ಮೂಸೆವಾಲಾ ಅವರನ್ನು ಯುವ ಐಕಾನ್ ಹಾಗೂ ಅಂತಾರಾಷ್ಟ್ರೀಯ ವ್ಯಕ್ತಿ ಎಂದು ಬಣ್ಣಿಸಿದ್ದಾರೆ. ಸಿಧು ಮೂಸೆವಾಲಾ ನಮ್ಮ ಕುಟುಂಬವನ್ನು ಸೇರುತ್ತಿದ್ದಾರೆ. ನಾನು ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸುತ್ತೇನೆ ಎಂದಿದ್ದಾರೆ.
ಮೂಸೆವಾಲಾ ತಮ್ಮ ಕಠಿಣ ಪರಿಶ್ರಮದಿಂದ ದೊಡ್ಡ ಕಲಾವಿದರಾಗಿದ್ದಾರೆ. ಹಾಡುಗಳಿಂದ ಲಕ್ಷಾಂತರ ಜನರ ಹೃದಯಗಳನ್ನು ಗೆದ್ದವರು ಎಂದು ಸಿಎಂ ಚನ್ನಿ ಅವರು ಮೂಸೆವಾಲರನ್ನು ಕೊಂಡಾಡಿದ್ದಾರೆ.
ಗಾಯಕ ಸಿಧು ಮೂಸೆವಾಲಾ ಅವರ ನಿಜವಾದ ಹೆಸರು ಶುಭದೀಪ್ ಸಿಂಗ್ ಸಿಧು, ಮಾನ್ಸಾ ಜಿಲ್ಲೆಯ ಮೂಸಾ ಗ್ರಾಮದವರು. ಇವರ ತಾಯಿ ಆ ಗ್ರಾಮದ ಮುಖ್ಯಸ್ಥರಾಗಿದ್ದಾರೆ. ತನ್ನ ಹಾಡುಗಳಲ್ಲಿ ಹಿಂಸೆ ಹಾಗೂ ಬಂದೂಕು ಸಂಸ್ಕೃತಿಯನ್ನು ಉತ್ತೇಜಿಸಿದ್ದಕ್ಕಾಗಿ ಈ ಹಿಂದೆ ಟೀಕೆಗೂ ಮೂಸೆವಾಲ ಗುರಿಯಾಗಿದ್ದರು.
ಇದನ್ನೂ ಓದಿ: ಮಾಜಿ ಡಿಜಿಪಿ ಸೈನಿ ಭೇಟಿ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ.. ನವಜೋತ್ ಸಿಂಗ್ ಸಿಧು ಸವಾಲ್