ETV Bharat / bharat

ಹೆಸರಾಂತ ಪಂಜಾಬಿ ಜಾನಪದ ಗಾಯಕಿ ಗುರ್ಮೀತ್​​ ಬಾವಾ ನಿಧನ.. Queen of Hek ಇನ್ನಿಲ್ಲ

author img

By

Published : Nov 21, 2021, 3:49 PM IST

ಪಂಜಾಬಿನ ಖ್ಯಾತ ಜಾನಪದ ಗಾಯಕಿ ತಮ್ಮ 77 ನೇ ವಯಸ್ಸಿನಲ್ಲಿ ವಯೋ ಸಹಜ ಅನಾರೋಗ್ಯದಿಂದಾಗಿ ಇಹಲೋಕ ತ್ಯಜಿಸಿದ್ದಾರೆ(Singer Gurmeet Bawa passed away).

Punjabi Singer Gurmeet Bawa passes away
Punjabi Singer Gurmeet Bawa passes away

ಅಮೃತಸರ್​: ಖ್ಯಾತ ಪಂಜಾಬಿ ಜಾನಪದ ಗಾಯಕಿ ಗುರ್ಮೀತ್ ಬಾವಾ(77) (Punjabi Folk Singer Gurmeet Bawa passed away) ಅವರು ಭಾನುವಾರ ಬೆಳಗ್ಗೆ ಅಮೃತಸರದ IVY ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ವಯೋಸಹಜ ಆರೋಗ್ಯ ಸಮಸ್ಯೆಗಳ ಹಿನ್ನೆಲೆ ಅವರನ್ನು ಬಹಳ ದಿನಗಳಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಶನಿವಾರ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿತ್ತು. ಈ ಹಿನ್ನೆಲೆ ಇಂದು ಕೊನೆಯುಸಿರೆಳೆದಿದ್ದಾರೆ.

ಗುರ್ಮೀತ್ ಬಾವಾ 'ಲಾಂಗ್ ಹೆಕ್' (ಹಾಡುತ್ತಿರುವಾಗ 45 ಸೆಕೆಂಡುಗಳವರೆಗೆ ಉಸಿರನ್ನು ಹಿಡಿದಿಟ್ಟುಕೊಳ್ಳುವುದು)ಗೆ ಹೆಸರುವಾಸಿಯಾಗಿದ್ದಾರೆ. ಹೀಗಾಗಿಯೇ ಅವರನ್ನು 'ಹೆಕ್ ದಿ ರಾಣಿ' (Queen of Hek)ಎಂದು ಕರೆಯಲಾಗುತ್ತಿತ್ತು.

ದೂರದರ್ಶನದಲ್ಲಿ ಹಾಡಿದ ಮೊದಲ ಪಂಜಾಬಿ ಮಹಿಳಾ ಗಾಯಕಿ ಎಂಬ ಹೆಗ್ಗಳಿಕೆಗೂ ಗುರ್ಮೀತ್ ಪಾತ್ರರಾಗಿದ್ದರು. ತಮ್ಮ ಗಾಯನಕ್ಕಾಗಿ ಅವರು ಸಾಕಷ್ಟು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾದರು. ಅವರಿಗೆ 1991 ರಲ್ಲಿ ಪಂಜಾಬ್ ಸರ್ಕಾರವು ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಪಂಜಾಬ್ ನಾಟಕ ಅಕಾಡೆಮಿ ಸಂಗೀತ್​ ಪುರಸ್ಕಾರ್​ ನೀಡಿ ಗೌರವಿಸಿತು. 2002 ರಲ್ಲಿ ಮಧ್ಯಪ್ರದೇಶ ಸರ್ಕಾರದಿಂದ ರಾಷ್ಟ್ರೀಯ ದೇವಿ ಅಹಲ್ಯಾ ಪ್ರಶಸ್ತಿ ಮತ್ತು 2008 ರಲ್ಲಿ ಪಂಜಾಬಿ ಭಾಷಾ ಇಲಾಖೆಯಿಂದ ಶಿರೋಮಣಿ ಗಾಯಿಕಾ ಪ್ರಶಸ್ತಿಯನ್ನು ಗುರ್ಮೀತ್​ ಅವರಿಗೆ ಪ್ರದಾನ ಮಾಡಲಾಗಿತ್ತು.

ಗುರ್ಮೀತ್​ ಪಂಜಾಬಿ ಜಾನಪದ ಗಾಯಕರಾದ ಕಿರ್ಪಾಲ್ ಬಾವಾ ಅವರೊಂದಿಗೆ ದಾಂಪತ್ಯ ಜೀವನ ನಡೆಸಿದರು. ಈ ದಂಪತಿಗೆ ಮೂವರು ಹೆಣ್ಣು ಮಕ್ಕಳು. ಅವರ ಹಿರಿಯ ಮಗಳು ಲಾಚಿ ಬಾವಾ ದೀರ್ಘಕಾಲದ ಅನಾರೋಗ್ಯದ ನಂತರ 2020 ರಲ್ಲಿ ನಿಧನರಾದರು. ಅಂದಿನಿಂದ ಗುರ್ಮೀತ್​ ಅವರ​ ಆರೋಗ್ಯ ಹದಗೆಟ್ಟಿತು ಎಂದು ಮತ್ತೊಬ್ಬ ಪುತ್ರಿ ಗ್ಲೋರಿಯಾ ಬಾವಾ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಈ ಖ್ಯಾತ ಜಾನಪದ ಗಾಯಕಿಯ ನಿಧನ ಪಂಜಾಬಿ ಸಂಗೀತೋದ್ಯಮಕ್ಕೆ ದೊಡ್ಡ ಹೊಡೆತ ನೀಡಿದೆ. ಪಂಜಾಬ್ ಸಿಎಂ ಚರಣ್​ಜೀತ್​​​ ಚನ್ನಿ ಸಂತಾಪ ವ್ಯಕ್ತಪಡಿಸಿದ್ದಾರೆ. ಉಪ ಮುಖ್ಯಮಂತ್ರಿ ಸುಖಜಿಂದರ್ ರಾಂಧವಾ, ಸಂಪುಟ ಸಚಿವರಾದ ಪರ್ಗತ್ ಸಿಂಗ್, ಎಸ್‌ಎಡಿ ನಾಯಕ ಸುಖ್‌ಬೀರ್ ಬಾದಲ್, ಬಿಕ್ರಮ್ ಮಜಿಥಿಯಾ ಸಹ ಗಾಐಕಿ ಗುರ್ಮೀತ್​ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಗುರ್ಮೀತ್ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ನಾಳೆ ನೆರವೇರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.