ETV Bharat / bharat

ನಿನ್ನೆ ನಡೆದ ಪ್ರತಿಭಟನೆ ವೇಳೆ ಪಂಜಾಬಿ ನಟ ಸಿಧು ಫೇಸ್​ಬುಕ್​ ಲೈವ್, ಚರ್ಚೆಗೆ ಗ್ರಾಸವಾಗಿದ್ದೇಕೆ? - ಪಂಜಾಬಿ ನಟ ಸಿಧು ಫೇಸ್​ಬುಕ್​ ಲೈವ್

ಕಳೆದ ವಾರವಷ್ಟೆ ಎನ್​ಐಎಯಿಂದ ಸಮನ್ಸ್​ ಪಡೆದಿದ್ದ ಪಂಜಾಬಿ ನಟ ಸಿಧು, ಈಗ ಮತ್ತೆ ಚರ್ಚೆಯಲ್ಲಿದ್ದಾರೆ. ನಿನ್ನೆ ನಡೆದ ಪ್ರತಿಭಟನೆಯ ವೇಳೆ ನಟ ಸಿಧು ಫೇಸ್​ಬುಕ್​ ಲೈವ್​ ನೀಡಿದ್ದು, ಚರ್ಚೆಗೆ ಗ್ರಾಸವಾಗಿದೆ.

Punjabi actor summoned by NIA posts live video from Red Fort hoisting pennant
ನಿನ್ನೆ ನಡೆದ ಪ್ರತಿಭಟನೆ ವೇಳೆ ಪಂಜಾಬಿ ನಟ ಸಿಧು ಫೇಸ್​ಬುಕ್​ ಲೈವ್
author img

By

Published : Jan 27, 2021, 8:27 AM IST

ನವದೆಹಲಿ: ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ದೆಹಲಿಯಯಲ್ಲಿ ನಿನ್ನೆ ನಡೆದ ರೈತರ ಪ್ರತಿಭಟನೆ ವೇಳೆ ಕೆಂಪುಕೋಟೆಯ ಮೇಲೆ ಧ್ವಜ ಹಾರಿಸುವ ಸಂದರ್ಭ ಪಂಜಾಬಿ ನಟ ಸಿಧು ಫೇಸ್​ಬುಕ್​ ಲೈವ್​ ನೀಡಿದ್ದು, ಚರ್ಚೆಗೆ ಗ್ರಾಸವಾಗಿದೆ.

ಪಂಜಾಬಿ ನಟ ಸಿಧು ಫೇಸ್​ಬುಕ್​ ಲೈವ್

ಸಿಧು ಪಂಜಾಬಿಯಲ್ಲಿ "ನಾವು ನಿಶಾನ್ ಸಾಹಿಬ್ ಧ್ವಜವನ್ನು ಕೆಂಪು ಕೋಟೆಯ ಮೇಲೆ ಹಾರಿಸಿದ್ದೇವೆ. ಪ್ರತಿಭಟಿಸುವುದು ನಮ್ಮ ಪ್ರಜಾಪ್ರಭುತ್ವದ ಹಕ್ಕು, ಅದನ್ನು ಚಲಾಯಿಸಿದ್ದೇವೆ" ಎಂದು ಫೇಸ್​ಬುಕ್​ ಲೈವ್​ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ರೈತರ ಪರೇಡ್ ಯಾವ ರೀತಿ ಹಿಂಸಾತ್ಮಕ ರೂಪ ಪಡೆಯಿತು ಎಂಬುದರ ಟೈಮ್‌ಲೈನ್...

ಕಳೆದ ವಾರ ಪಂಜಾಬ್‌ ರೈತ ನಾಯಕ ಬಲದೇವ್‌ ಸಿಂಗ್‌ ಸಿರ್ಸಾ ಸೇರಿದಂತೆ ಸುಮಾರು 40 ಮಂದಿಗೆ ಎನ್‌ಐಎ ಸಮನ್ಸ್‌ ಜಾರಿ ಮಾಡಿತ್ತು. ಅವರಲ್ಲಿ ಪಂಜಾಬಿ ನಟ ದೀಪ್‌ ಸಿಧು ಹೂಡಾ ಒಬ್ಬರಾಗಿದ್ದರು. ಅಮೆರಿಕ ಮೂಲದ ಖಲಿಸ್ತಾನ್​ ಪರ ನಿಷೇಧಿತ ಸಂಘಟನೆ ಸಿಖ್ ಫಾರ್‌ ಜಸ್ಟೀಸ್‌ಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ವಿಚಾರಣೆಗೆ ಹಾಜರಾಗುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಸಮನ್ಸ್​ನಲ್ಲಿ ತಿಳಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.