ಪಂಜಾಬ್: ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಪಂಜಾಬ್ ಲೋಕ ಕಾಂಗ್ರೆಸ್(ಪಿಎಲ್ಸಿ) ಪಕ್ಷ ಕಟ್ಟಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ನಾಯಕ, 2 ಬಾರಿಯ ಶಾಸಕ ಲವ್ ಕುಮಾರ್ ಗೋಲ್ಡಿ ಅವರು, ಕ್ಯಾಪ್ಟನ್ ಅಮರೀಂದರ್ ಪಾಳೆಯ ಸೇರಿಕೊಂಡಿದ್ದಾರೆ.
ಗರಹ್ಶಂಕರ್ ಕ್ಷೇತ್ರದ ಶಾಸಕ ಲವ್ ಕುಮಾರ್ ಗೋಲ್ಡಿ ತಮ್ಮ ನೂರಾರು ಬೆಂಬಲಿಗರು, ಸರ್ಪಂಚ್ಗಳು, ಪುರಸಭೆ ಸದಸ್ಯರು, ಬ್ಲಾಕ್ ಸಮಿತಿ ಸದಸ್ಯರ ಜೊತೆಗೂಡಿ ಕಾಂಗ್ರೆಸ್ಗೆ ಗುಡ್ಬೈ ಹೇಳಿ ಪಿಎಲ್ಸಿ ಪಕ್ಷ ಸೇರಿದ್ದಾರೆ.
-
Denied Cong ticket from Garhshankar, two time MLA Luv Kumar Goldy joins Amarinder's Punjab Lok Congress https://t.co/4oYy3hgWnY#CongTicket #Garhshankar #MLA #LuvKumarGoldy #CaptAmarinder #PunjabLokCongress #Punjab #LokCongress #Congress #YesPunjab pic.twitter.com/jBLuPtVT2z
— YesPunjab.com (For Punjabi follow @BawaHs) (@yespunjab) January 17, 2022 " class="align-text-top noRightClick twitterSection" data="
">Denied Cong ticket from Garhshankar, two time MLA Luv Kumar Goldy joins Amarinder's Punjab Lok Congress https://t.co/4oYy3hgWnY#CongTicket #Garhshankar #MLA #LuvKumarGoldy #CaptAmarinder #PunjabLokCongress #Punjab #LokCongress #Congress #YesPunjab pic.twitter.com/jBLuPtVT2z
— YesPunjab.com (For Punjabi follow @BawaHs) (@yespunjab) January 17, 2022Denied Cong ticket from Garhshankar, two time MLA Luv Kumar Goldy joins Amarinder's Punjab Lok Congress https://t.co/4oYy3hgWnY#CongTicket #Garhshankar #MLA #LuvKumarGoldy #CaptAmarinder #PunjabLokCongress #Punjab #LokCongress #Congress #YesPunjab pic.twitter.com/jBLuPtVT2z
— YesPunjab.com (For Punjabi follow @BawaHs) (@yespunjab) January 17, 2022
ಅಲ್ಲದೇ, ಅಮರಿಂದರ್ ಸಿಂಗ್ ಅವರ ನಾಯಕತ್ವದ ಮೇಲೆ ನಂಬಿಕೆ ಇದೆ. ಕಾಂಗ್ರೆಸ್ನಲ್ಲಿ ಅಂತರ್ಯುದ್ಧ ನಡೆಯುತ್ತಿದೆ. ಆ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಳ್ಳಲಿದ್ದಾರೆ ಎಂದು ಲವ್ ಕುಮಾರ್ ವಾಗ್ದಾಳಿ ನಡೆಸಿದರು.
ಕೋವಿಡ್ ಕಾರಣ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಲವ್ ಕುಮಾರ್ ಗೋಲ್ಡಿ ಪಕ್ಷ ಸೇರ್ಪಡೆ ವೇಳೆ ಹಾಜರಿರದಿದ್ದರೂ, ಪಕ್ಷಕ್ಕೆ ಲವ್ ಕುಮಾರ್ ಅವರನ್ನು ಸ್ವಾಗತಿಸಿದ್ದಾರೆ.
ಪಂಜಾಬ್ ಚುನಾವಣೆಯಲ್ಲಿ ಅಮರೀಂದರ್ ಸಿಂಗ್ ಅವರ ಪಂಜಾಬ್ ಲೋಕ ಕಾಂಗ್ರೆಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿವೆ. ಇದಲ್ಲದೇ, ಪಂಜಾಬ್ ವಿಧಾನಸಭೆಗೆ ಫೆಬ್ರವರಿ 20 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 10 ರಂದು ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಹೊರಬೀಳಲಿದೆ.
ಇದನ್ನೂ ಓದಿ: ನೋಡಿ: ಸೂಪರ್ ಮಾರ್ಕೆಟ್ನಲ್ಲಿದ್ದ ವಸ್ತುಗಳೆಲ್ಲಾ ಪೀಸ್, ಪೀಸ್: ಕುಡಿದ ವ್ಯಕ್ತಿಯ ಪುಂಡಾಟಿಕೆ