ETV Bharat / bharat

ಲಷ್ಕರ್-ಎ-ತೊಯ್ಬಾ ಇಬ್ಬರು ಭಯೋತ್ಪಾದಕರ ಬಂಧನ: ಭಾರಿ ಸ್ಫೋಟಕ, ಶಸ್ತ್ರಾಸ್ತ್ರಗಳ ವಶಕ್ಕೆ - ಪಂಜಾಬ್ ಡಿಜಿಪಿ ಗೌರವ್ ಯಾದವ್

ಅಮೃತಸರದಲ್ಲಿ ಕೇಂದ್ರ ಗುಪ್ತಚರ ಸಂಸ್ಥೆಗಳ ಸಹಕಾರದೊಂದಿಗೆ, ಪಂಜಾಬ್ ಪೊಲೀಸರ ವಿಶೇಷ ಎಸ್​ಎಸ್​ಒಸಿ ತಂಡವು ಲಷ್ಕರ್-ಎ-ತೊಯ್ಬಾದ ಇಬ್ಬರು ಭಯೋತ್ಪಾದಕರನ್ನು ಬಂಧಿಸಿದೆ. ಬಂಧಿತರಿಂದ ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

arrested two Lashkar e Taiba terrorists
ಲಷ್ಕರ್-ಎ-ತೈಬಾದ ಇಬ್ಬರು ಭಯೋತ್ಪಾದಕರ ಬಂಧನ
author img

By ETV Bharat Karnataka Team

Published : Oct 14, 2023, 2:57 PM IST

ಅಮೃತಸರ (ಪಂಜಾಬ್): ಕೇಂದ್ರ ಗುಪ್ತಚರ ಸಂಸ್ಥೆಗಳ ನೆರವಿನಿಂದ ಪಂಜಾಬ್​ನ ಎಸ್​ಎಸ್​ಒಸಿ ತಂಡವು ಲಷ್ಕರ್-ಎ-ತೊಯ್ಬಾ ಸಂಘಟನೆಯ ಇಬ್ಬರು ಭಯೋತ್ಪಾದಕರನ್ನು ಅಮೃತಸರದಲ್ಲಿ ಬಂಧಿಸಿದೆ. ಬಂಧಿತ ಭಯೋತ್ಪಾದಕರಿಂದ 2 ಐಇಡಿಗಳು, 2 ಹ್ಯಾಂಡ್ ಗ್ರೆನೇಡ್‌ಗಳು, 1 ಪಿಸ್ತೂಲ್, 2 ಮ್ಯಾಗಜೀನ್‌ಗಳು, 24 ಕಾರ್ಟ್ರಿಡ್ಜ್‌ಗಳು, 1 ಟೈಮರ್ ಸ್ವಿಚ್, 8 ಡಿಟೋನೇಟರ್‌ಗಳು ಮತ್ತು 4 ಬ್ಯಾಟರಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತಂತೆ ಪಂಜಾಬ್ ಡಿಜಿಪಿ ಗೌರವ್ ಯಾದವ್ ಸಾಮಾಜಿಕ ಜಾಲತಾಣವಾದ 'ಎಕ್ಸ್'ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಪಂಜಾಬ್ ಡಿಜಿಪಿ ಗೌರವ್ ಯಾದವ್ ಮಾಹಿತಿ: ಅಮೃತಸರದ ಎಸ್​ಎಸ್​ಒಸಿ, ಕೇಂದ್ರ ಗುಪ್ತಚರ ಸಂಸ್ಥೆಗಳು ಜಂಟಿ ಕಾರ್ಯಾಚರಣೆ ಕೈಗೊಂಡಿದ್ದವು. ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳಾದ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. 2 ಐಇಡಿಗಳು, 2 ಹ್ಯಾಂಡ್ ಗ್ರೆನೇಡ್‌ಗಳು, 2 ಮ್ಯಾಗಜೀನ್‌ಗಳಿರುವ 1 ಪಿಸ್ತೂಲ್, 24 ಕಾಟ್ರಿಡ್ಜ್‌ಗಳು, 1 ಟೈಮರ್ ಸ್ವಿಚ್, 8 ಡಿಟೋನೇಟರ್‌ಗಳು ಮತ್ತು 4 ಬ್ಯಾಟರಿಗಳು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪಂಜಾಬ್ ಡಿಜಿಪಿ ಗೌರವ್ ಯಾದವ್ ತಿಳಿಸಿದ್ದಾರೆ.

arrested two Lashkar e Taiba terrorists
ಎಲ್‌ಟಿಇಯ ಇಬ್ಬರು ಭಯೋತ್ಪಾದಕರ ಬಂಧನ: ಭಾರಿ ಸ್ಫೋಟಕ, ಶಸ್ತ್ರಾಸ್ತ್ರಗಳ ವಶಕ್ಕೆ

ಈ ಹಿಂದೆ, ಲಷ್ಕರ್-ಎ-ತೊಯ್ಬಾ ಕಾರ್ಯಕರ್ತರ ಬಂಧನ: 2011ರಲ್ಲಿ ಪಂಜಾಬ್ ಪೊಲೀಸರು ಜಮ್ಮು ಮತ್ತು ಕಾಶ್ಮೀರದ ಇಬ್ಬರು ಲಷ್ಕರ್-ಎ-ತೊಯ್ಬಾ ಕಾರ್ಯಕರ್ತರನ್ನು ಬಂಧಿಸಿದ್ದರು. ಪಂಜಾಬ್‌ನಿಂದ ಕಾಶ್ಮೀರಕ್ಕೆ ಸ್ವಯಂಚಾಲಿತ ಶಸ್ತ್ರಾಸ್ತ್ರಗಳು ಮತ್ತು ಹ್ಯಾಂಡ್ ಗ್ರೆನೇಡ್‌ಗಳ ಸಕ್ರಿಯ ಶಸ್ತ್ರಾಸ್ತ್ರ ಕಳ್ಳಸಾಗಣೆಯಲ್ಲಿ ತೊಡಗಿದ್ದ ಇಬ್ಬರು ಭಯೋತ್ಪಾದಕರನ್ನು ಪಠಾಣ್‌ಕೋಟ್ ಪೊಲೀಸರು ಬಂಧಿಸಿದ್ದರು.

ಪೊಲೀಸರಿಂದ ತಪ್ಪಿಸಿಕೊಂಡಿದ್ದ ಭಯೋತ್ಪಾದಕ ಇಶ್ಫಾಕ್ ದಾರ್: ಪೊಲೀಸ್ ಠಾಣೆಯ ಸದರ್ ಪ್ರದೇಶದ ಅಮೃತಸರ-ಜಮ್ಮು ಹೆದ್ದಾರಿಯ ಚೆಕ್‌ಪಾಯಿಂಟ್‌ನಲ್ಲಿ ಪಠಾಣ್‌ಕೋಟ್ ಪೊಲೀಸರು ಟ್ರಕ್ ಅನ್ನು ತಡೆದಿದ್ದರು. ಜಮ್ಮು ಮತ್ತು ಕಾಶ್ಮೀರದಲ್ಲಿದ್ದ ಇಷ್ಫಾಕ್ ಅಹ್ಮದ್ ದಾರ್ ಅಲಿಯಾಸ್ ಬಶೀರ್ ಅಹ್ಮದ್ ಖಾನ್ ಪಂಜಾಬ್‌ನಿಂದ ಈ ಶಸ್ತ್ರಾಸ್ತ್ರಗಳನ್ನು ತರುವಂತೆ ಸೂಚಿಸಿದ್ದನು ಎಂದು ಆರೋಪಿಗಳು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗಪಡಿಸಿದ್ದರು. ಕಾಶ್ಮೀರ ಕಣಿವೆಯಲ್ಲಿ ಸಕ್ರಿಯನಾಗಿದ್ದ ಲಷ್ಕರ್-ಎ-ತೊಯ್ಬಾ ಭಯೋತ್ಪಾದಕ ಇಶ್ಫಾಕ್ ದಾರ್ 2017ರಲ್ಲಿ ಪೊಲೀಸರಿಂದ ತಪ್ಪಿಸಿಕೊಂಡಿದ್ದನು.

ಇದನ್ನೂ ಓದಿ: ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಸರಣಿ ಅಪಘಾತ: ಹೊತ್ತಿ ಉರಿದ ಕಾರು.. ಮಂಡ್ಯ ಎಸ್ಪಿ ಕಾರಿಗೂ ಡಿಕ್ಕಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.