ETV Bharat / bharat

ವಿಧಾನಸಭೆಯಲ್ಲಿ ಅಗ್ನಿಪಥ್​ ವಿರುದ್ಧ 'ಖಂಡನಾ ನಿರ್ಣಯ'ಕ್ಕೆ ಮುಂದಾದ ಪಂಜಾಬ್​ ಸರ್ಕಾರ - ಪಂಜಾಬ್​ ಸರ್ಕಾರದಿಂದ ಖಂಡನಾ ನಿರ್ಣಯ

ಸಶಸ್ತ್ರ ಪಡೆಗಳ ಮಹತ್ವಾಕಾಂಕ್ಷಿ ಅಗ್ನಿಪಥ್​ ಯೋಜನೆ ವಿರುದ್ಧ ಪಂಜಾಬ್​ ಸರ್ಕಾರ ವಿಧಾನಸಭೆಯಲ್ಲಿ ಖಂಡನಾ ನಿರ್ಣಯ ಕೈಗೊಳ್ಳಲು ನಿರ್ಧರಿಸಿದೆ.

ನಾಳೆ ಪಂಜಾಬ್​ ವಿಧಾನಸಭೆಯಲ್ಲಿ ಅಗ್ನಿಪಥ್​ ಯೋಜನೆ ವಿರುದ್ಧ 'ಖಂಡನಾ ನಿರ್ಣಯ'

author img

By

Published : Jun 28, 2022, 3:43 PM IST

ಚಂಡೀಗಢ: ಸಶಸ್ತ್ರ ಪಡೆಗಳಿಗೆ ಅಲ್ಪಾವಧಿಗೆ ನೇಮಕಾತಿ ಮಾಡಿಕೊಳ್ಳುವ ಅಗ್ನಿಪಥ್​ ಯೋಜನೆ ವಿರುದ್ಧ ಪಂಜಾಬ್​ ಸರ್ಕಾರ ವಿಧಾನಸಭೆಯಲ್ಲಿ 'ಖಂಡನಾ ನಿರ್ಣಯ' ಕೈಗೊಳ್ಳಲು ಸಜ್ಜಾಗಿದೆ. ಇದೇ 30 ರಂದು ವಿಧಾನಸಭೆಯಲ್ಲಿ ನಿರ್ಣಯ ಪಾಸ್​ ಮಾಡಲು ಮುಂದಾಗಿದೆ.

ಪಂಜಾಬ್​ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದು, ಪ್ರತಿಪಕ್ಷಗಳು ಅಗ್ನಿಪಥ್​ ಯೋಜನೆಯನ್ನು ವಿರೋಧಿಸಿ ಗದ್ದಲ ಎಬ್ಬಿಸಿದರು. ಸೇನೆಯಲ್ಲಿ ಪಂಜಾಬಿ ಯುವಕರ ಕೊಡುಗೆ ಅಪಾರವಾಗಿದೆ. ನೆರೆಯ ರಾಷ್ಟ್ರಗಳಾದ ಚೀನಾ, ಪಾಕಿಸ್ತಾನ ಬೆದರಿಕೆಯೊಡ್ಡುತ್ತಿದ್ದರೆ, ಮತ್ತೊಂದೆಡೆ ಗುತ್ತಿಗೆ ಆಧಾರದ ಮೇಲೆ ಸೈನಿಕರನ್ನು ನೇಮಕ ಮಾಡಿಕೊಂಡು ದೇಶ ರಕ್ಷಣೆ ಮಾಡುವುದು ಹೇಗೆ ಸಾಧ್ಯ ಎಂದು ಪ್ರಶ್ನಿಸಿವೆ. ಅಲ್ಲದೆ, ಅಗ್ನಿಪಥ್​ ಯೋಜನೆ ಯುವಕರ ಹಿತಾಸಕ್ತಿಗೆ ವಿರುದ್ಧವಾಗಿದೆ. ಇದರ ವಿರುದ್ಧ ಎಲ್ಲಾ ಪಕ್ಷಗಳು ಒಗ್ಗೂಡಿ ನಿರ್ಣಯ ತರಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಸಿಎಂ ಭಗವಂತ್​ ಮಾನ್​, ಕೇಂದ್ರ ಸರ್ಕಾರದ ಅಗ್ನಿಪಥ್​ ಯೋಜನೆಯಿಂದ ಆಘಾತವಾಗಿದೆ. 17ನೇ ವಯಸ್ಸಿಗೆ ಸೇನೆಗೆ ಸೇರಿ 21ನೇ ವಯಸ್ಸಿಗೆ 4 ವರ್ಷ ಪೂರೈಸಿ ನಿವೃತ್ತರಾಗುವ ಯುವಕರು ತಾವು ಮಾಜಿ ಸೈನಿಕರು ಎಂದು ಹೇಳಿಕೊಳ್ಳಲೂ ಸಾಧ್ಯವಾಗುವುದಿಲ್ಲ. ಅಲ್ಲದೇ, ಅವರಿಗೆ ಯಾವುದೇ ಸೌಲಭ್ಯಗಳೂ ಇರುವುದಿಲ್ಲ. ಪಂಜಾಬ್ ಸರ್ಕಾರ ಈ ಯೋಜನೆಯ ವಿರುದ್ಧವಾಗಿದೆ. ಇದರ ವಿರುದ್ಧ ನಿರ್ಣಯ ತರಲಾಗುವುದು ಎಂದು ಹೇಳಿದರು.

ಜೂ.30ಕ್ಕೆ ನಿರ್ಣಯ: ಅಗ್ನಿಪಥ್​ ಯೋಜನೆ ವಿರುದ್ಧ ಜೂ.30ರಂದು ಖಂಡನಾ ನಿರ್ಣಯ ತರಲಾಗುವುದು ಎಂದು ತಿಳಿಸಿದ ಮುಖ್ಯಮಂತ್ರಿ ಭಗವಂತ್ ಮಾನ್, ನಿರ್ಣಯಕ್ಕೆ ಆಮ್ ಆದ್ಮಿ ಮತ್ತು ಕಾಂಗ್ರೆಸ್ ಬೆಂಬಲ ನೀಡುತ್ತವೆ ಎಂದರು.

ಉತ್ತಮ ಯೋಜನೆ: ಸದನದಲ್ಲಿ ಅಗ್ನಿಪಫ್​ ಯೋಜನೆಯ ಪರವಾಗಿ ಧ್ವನಿಎತ್ತಿದ ಬಿಜೆಪಿ ಶಾಸಕ ಅಶ್ವನಿ ಶರ್ಮಾ, ಯೋಜನೆಯು ಮಹತ್ವಕಾಂಕ್ಷಿಯಾಗಿದೆ. ವಿರೋಧಕ್ಕಾಗಿ ಯೋಜನೆಯನ್ನು ಟೀಕಿಸಲಾಗುತ್ತಿದೆ. ಸೇನೆಗೆ ಸೇರುವ ಯುವಕರು 10 ವರ್ಷಗಳ ನಂತರವೂ ಶಿಕ್ಷಣ ಪಡೆಯಬಹುದು. ಸೇವೆಯ ಬಳಿಕ ನಿವೃತ್ತರಾಗುವ ಯುವಕರಿಗೆ 47 ಲಕ್ಷ ರೂಪಾಯಿ ಸೌಲಭ್ಯ ಸಿಗಲಿದೆ. ಅಗ್ನಿವೀರರಿಗೆ ಈಗಾಗಲೇ ಖಾಸಗಿ ಮತ್ತು ಸರ್ಕಾರಿ ಇಲಾಖೆಗಳಲ್ಲಿ ಹುದ್ದೆ ನೀಡಲಾಗುವುದು ಎಂದು ಘೋಷಿಸಲಾಗಿದೆ ಎಂದು ಯೋಜನೆಯನ್ನು ಸಮರ್ಥಿಸಿಕೊಂಡರು.

ವಿರೋಧದ ಮಧ್ಯೆಯೇ ವಾಯುಪಡೆಯಿಂದ ಅಗ್ನಿವೀರರ ನೇಮಕಕ್ಕೆ ಅರ್ಜಿ ಕರೆದಿದ್ದು, 4 ದಿನದಲ್ಲಿ 94,281 ಆಕಾಂಕ್ಷಿಗಳು ಅರ್ಜಿ ಹಾಕಿದ್ದಾರೆ.

ಓದಿ: 50 ಶಾಸಕರು ನಮ್ಮೊಂದಿಗಿದ್ದಾರೆ, ಶೀಘ್ರವೇ ಮುಂಬೈಗೆ ಹೋಗ್ತೀವಿ : ಏಕನಾಥ್ ಶಿಂಧೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.