ಚಂಡೀಗಢ: ಪಂಜಾಬ್ ಮೋಟಾರು ವಾಹನ ಕಾಯ್ದೆ ನಿಯಮಾನುಸಾರ ಹಳೇ ನಂಬರ್ ಪ್ಲೇಟ್‌ಗಳನ್ನು ಅಳವಡಿಸಿರುವ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ದಂಡ ವಿಧಿಸಲಾಗುವುದು ಎಂದು ಸಾರಿಗೆ ಸಚಿವ ಲಾಲ್ ಜೀತ್ ಸಿಂಗ್ ಭುಲ್ಲರ್ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾಹಿತಿ ನೀಡಿದ ಅವರು, ಪಂಜಾಬ್ ಮೋಟಾರು ವಾಹನ ಕಾಯ್ದೆ ಮಾನದಂಡಗಳನ್ನು ಉಲ್ಲಂಘಿಸುವ ವಾಹನಗಳನ್ನ ವಶಪಡಿಸಿಕೊಳ್ಳವುದಾಗಿ ಸರ್ಕಾರ ನಿರ್ಧರಿಸಿದೆ. ಈ ಆದೇಶವು ನೋಂದಣಿ ಪ್ರಾಧಿಕಾರದಲ್ಲಿ 12-06-1989 ರ ನಂತರ ನೋಂದಾಯಿಸಲಾದ ಎಲ್ಲ ವಾಹನಗಳಿಗೆ ಅನ್ವಯಿಸುತ್ತದೆ ಎಂದರು.
ಕಾಯ್ದೆಗಳನ್ನ ಉಲ್ಲಂಘಿಸಿ ಮಂಜೂರು ಮಾಡಲಾದ ಫ್ಯಾನ್ಸಿ ಸಂಖ್ಯೆಗಳನ್ನು 30-12-2020 ರಂದು ಕಾನೂನು ಬಾಹಿರ ಎಂದು ವಿವರಿಸಿ ಹಿಂಪಡೆಯಲಾಗಿದೆ. ಪಂಜಾಬ್ ಮೋಟಾರು ವಾಹನ ಕಾಯ್ದೆ ನಿಯಮ 42-A ಅಡಿಯಲ್ಲಿ 10-12-2020 ರಂದು ಹೊರಡಿಸಲಾದ ರಾಜ್ಯ ಸರ್ಕಾರದ ಅಧಿಸೂಚನೆ ಪ್ರಕಾರ, ಹಳೇ ಫ್ಯಾನ್ಸಿ ಸಂಖ್ಯೆಗಳನ್ನು ಹೊಂದಿರುವವರು ಹೊಸ ಫ್ಯಾನ್ಸಿ ಸಂಖ್ಯೆಗಳನ್ನು ಪಡೆಯಬಹುದು. ಹೊಸ ಫ್ಯಾನ್ಸಿ ಸಂಖ್ಯೆ ಪಡೆಯಲು MVA ಯ 39, 41 (6) ಮತ್ತು 217 (D) ಅಡಿ ಬರುವ ನಿಯಮಗಳನ್ನ ಪೂರೈಸಬೇಕು. ಕೂಡಲೇ ಅನಧಿಕೃತ ನಂಬರ್ ಪ್ಲೇಟ್‌ಗಳ ತೆರವು ಕಾರ್ಯಾಚರಣೆ ಮಾಡಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದನ್ನೂ ಓದಿ: ಸಾರ್ವಜನಿಕ ಸ್ಥಳಗಳಲ್ಲಿ ನಿಂದಿಸಿದರಷ್ಟೇ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅನ್ವಯ: ಹೈಕೋರ್ಟ್