ಚಂಡೀಗಢ: ಪಂಜಾಬ್ನಲ್ಲಿ ಸಹೋದರ ಡಾ.ಮನೋಹರ್ ಸಿಂಗ್ ಬಂಡಾಯ ಶಮನಗೊಳಿಸುವಲ್ಲಿ ಸಿಎಂ ಚರಂಜಿತ್ ಚನ್ನಿ ವಿಫಲರಾಗಿದ್ದಾರೆ. ಕಾಂಗ್ರೆಸ್ ಟಿಕೆಟ್ ನೀಡದ ಕಾರಣ ಮನೋಹರ್ ಸಿಂಗ್ ಈ ಹಿಂದೆ ಹೇಳಿದಂತೆ ಸ್ವತಂತ್ರ ಅಭ್ಯರ್ಥಿಯಾಗಿ ಶುಕ್ರವಾರ ಬಸ್ಸಿ ಪಠಾಣದಿಂದ ನಾಮಪತ್ರ ಸಲ್ಲಿಸಿದ್ದಾರೆ.
ಪಂಜಾಬ್ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಪಕ್ಷವು ಒಂದು ಕುಟುಂಬಕ್ಕೆ ಒಂದು ಟಿಕೆಟ್ ಎಂಬ ನಿಯಮ ಜಾರಿಗೆ ತಂದಿತ್ತು. ಇದರಿಂದಾಗಿ ಚನ್ನಿ ಸಹೋದರ ಡಾ.ಮನೋಹರ್ಗೆ ಟಿಕೆಟ್ ನೀಡಿರಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಶಾಸಕ ಗುರುಪ್ರೀತ್ ಸಿಂಗ್ ಜಿಪಿ ವಿರುದ್ಧ ಮನೋಹರ್ ಬಂಡಾಯವೆದ್ದು, ಬಸ್ಸಿ ಪಠಾಣದಲ್ಲಿ ಕಣಕ್ಕಿಳಿದಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಸಿಎಂ ಚನ್ನಿ ಸಹೋದರನ ಮನವೊಲಿಸುವುದಾಗಿ ಈ ಹಿಂದೆ ಹೇಳಿದ್ದರೂ ಕೂಡ, ಒಪ್ಪಿಸುವಲ್ಲಿ ವಿಫಲರಾಗಿದ್ದಾರೆ. 'ನಾನು ಬಸ್ಸಿ ಪಠಾಣ ಕೇತ್ರದಲ್ಲಿ ಸ್ಪರ್ಧಿಸಲು ಇಚ್ಚಿಸಿದ್ದೆ, ಆದರೆ ಕಾಂಗ್ರೆಸ್ ಟಿಕೆಟ್ ನೀಡಲು ನಿರಾಕರಿಸಿದೆ. ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ, 2007ರಲ್ಲೂ ಸ್ವತಂತ್ರವಾಗಿಯೇ ಗೆಲುವು ಸಾಧಿಸಿದ್ದೇನೆ' ಈ ಹಿಂದೆಯೇ ಮನೋಹರ್ ಸಿಂಗ್ ಹೇಳಿದ್ದರು.
ವೈದ್ಯಾಧಿಕಾರಿ ಆಗಿದ್ದ ಮನೋಹರ್: ಮನೋಹರ್ ಸಿಂಗ್ ಕಳೆದ ವರ್ಷ ಆಗಸ್ಟ್‌ನಲ್ಲಿ ಖರಾರ್ ಸಿವಿಲ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಸಹೋದರ ಮುಖ್ಯಮಂತ್ರಿಯಾದ ಬಳಿಕ ಅವರೂ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಸಿಎಂ ಚನ್ನಿ ಸಹೋದರ ಚುನಾವಣೆಗೆ ಸ್ಪರ್ಧಿಸಿದ್ದರ ಹಿಂದಿನ ಕಾರಣವೂ ಕುತೂಹಲಕಾರಿಯಾಗಿದೆ. ಕೋವಿಡ್ ಸಂದರ್ಭದಲ್ಲಿ ಡಾ. ಮನೋಹರ್ ಅವರನ್ನು ಬಸ್ಸಿ ಪಠಾಣಕ್ಕೆ ವರ್ಗಾವಣೆ ಮಾಡಲಾಗಿತ್ತು. ಆಗ ಅಲ್ಲಿನ ಜನರನ್ನು ಭೇಟಿಯಾಗುವ ಮೂಲಕ ನಿರಂತರ ಸಂಪರ್ಕದಲ್ಲಿದ್ದರು. ಇದೇ ವೇಳೆ ರಾಜಕೀಯ ಅವರಲ್ಲಿ ಮಹತ್ವಾಕಾಂಕ್ಷೆಯೂ ಗರಿಗೆದರಿತ್ತು.
ಇದನ್ನರಿತ ಬಸ್ಸಿ ಪಠಾಣದ ಕಾಂಗ್ರೆಸ್ ಶಾಸಕ ಗುರುಪ್ರೀತ್ ಜಿಪಿ, ಡಾ. ಮನೋಹರ್ ಅವರನ್ನು ಅಲ್ಲಿಂದ ವರ್ಗಾವಣೆ ಮಾಡಿದ್ದರು. ಮನೋಹರ್ರನ್ನು ಶಾಸಕ ಗುರುಪ್ರೀತ್ ಜಿಪಿಯೇ ವರ್ಗಾವಣೆ ಮಾಡಿದ್ದಾರೆ ಎಂದು ಸ್ವತಃ ಸಿಎಂ ಚನ್ನಿ ಹೇಳಿಕೆ ನೀಡಿದ್ದರು. ಈ ಅಸಮಾಧಾನವೇ ಮನೋಹರ್ ಚುನಾವಣೆಗೆ ಸ್ಪರ್ಧಿಸಲು ಮುನ್ನುಡಿಯಾಗಿತ್ತು.
ಇದನ್ನೂ ಓದಿ: 'ಹೆತ್ತ ತಾಯಿಯನ್ನೇ ಬೀದಿಪಾಲು ಮಾಡಿದ ಕ್ರೂರಿ' ನವಜೋತ್ ಸಿಂಗ್ ಮೇಲೆ ಸಹೋದರಿ ಆರೋಪ