ಲೂಧಿಯಾನ್(ಪಂಜಾಬ್): ಕೇವಲ 10ನೇ ವರ್ಷಕ್ಕೆ ಕುಟುಂಬ ಸಾಕುವ ಜವಾಬ್ದಾರಿ ಹೊತ್ತುಕೊಂಡು ರಸ್ತೆಗಳಲ್ಲಿ ಸಾಕ್ಸ್ ಮಾರುತ್ತಿದ್ದ ಬಾಲಕನಿಗೆ ಇದೀಗ ಮುಖ್ಯಮಂತ್ರಿಗಳು ಸಹಾಯ ಮಾಡಿದ್ದು, ಕುಟುಂಬ ನಿರ್ವಹಣೆಗೆ ತಕ್ಷಣವೇ 2 ಲಕ್ಷ ರೂ. ಪರಿಹಾರ ನೀಡಿದ್ದಾರೆ.
ಲೂಧಿಯಾನದ ಟ್ರಾಫಿಕ್ ಸಿಗ್ನಲ್ಗಳಲ್ಲಿ ಬಾಲಕ ಸಾಕ್ಸ್ ಮಾರುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದನ್ನ ನೋಡಿರುವ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್, ಬಾಲಕನ ಸಂಪೂರ್ಣ ಶಿಕ್ಷಣದ ಜವಾಬ್ದಾರಿ ಹೊತ್ತುಕೊಂಡಿದ್ದು, ಕುಟುಂಬ ನಿರ್ವಹಣೆಗೆ 2 ಲಕ್ಷ ರೂ. ನೀಡಿದ್ದಾರೆ. 10 ವರ್ಷದ ಬಾಲಕ ವನ್ಶ್ ಸಿಂಗ್ ಕುಟುಂಬದ ಜವಾಬ್ದಾರಿ ಹೊತ್ತುಕೊಂಡು ಬೀದಿಗಳಲ್ಲಿ ಸಾಕ್ಸ್ ಮಾರಾಟ ಮಾಡುತ್ತಿದ್ದ.
ಸಿಎಂ ಅಮರೀಂದರ್ ಸಿಂಗ್ ಸಹಾಯ
-
Spoke on phone to young Vansh Singh, aged 10, a Class II dropout who’s video I saw selling socks at traffic crossing in Ludhiana. Have asked the DC to ensure he rejoins his school. Also announced an immediate financial assistance of Rs 2 lakhs to his family. pic.twitter.com/pnTdnftCDo
— Capt.Amarinder Singh (@capt_amarinder) May 8, 2021 " class="align-text-top noRightClick twitterSection" data="
">Spoke on phone to young Vansh Singh, aged 10, a Class II dropout who’s video I saw selling socks at traffic crossing in Ludhiana. Have asked the DC to ensure he rejoins his school. Also announced an immediate financial assistance of Rs 2 lakhs to his family. pic.twitter.com/pnTdnftCDo
— Capt.Amarinder Singh (@capt_amarinder) May 8, 2021Spoke on phone to young Vansh Singh, aged 10, a Class II dropout who’s video I saw selling socks at traffic crossing in Ludhiana. Have asked the DC to ensure he rejoins his school. Also announced an immediate financial assistance of Rs 2 lakhs to his family. pic.twitter.com/pnTdnftCDo
— Capt.Amarinder Singh (@capt_amarinder) May 8, 2021
ಲುಧಿಯಾನ್ ಟ್ರಾಫಿಕ್ ಸಿಗ್ನಲ್ಗಳಲ್ಲಿ ಸಾಕ್ಸ್ ಮಾರಾಟ ಮಾಡುತ್ತಿದ್ದ ಬಾಲಕನೊಂದಿಗೆ ನಾನು ಮಾತನಾಡಿದ್ದೇನೆ. 2ನೇ ವರ್ಷಕ್ಕೆ ಶಾಲೆ ಬಿಟ್ಟು ಆತ ಈ ಕೆಲಸ ಮಾಡುತ್ತಿದ್ದಾನೆ. ಆತ ಇದೀಗ ಮತ್ತೆ ಶಾಲೆ ಸೇರುತ್ತಿದ್ದು, ಆತನ ಶಿಕ್ಷಣದ ಜವಾಬ್ದಾರಿ ಹಾಗೂ ಕುಟುಂಬಕ್ಕೆ 2 ಲಕ್ಷ ರೂ. ತಕ್ಷಣವೇ ನೆರವು ನೀಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.