ಚಂಡೀಗಢ (ಪಂಜಾಬ್) : ಪಂಜಾಬ್ನ ಮಲೆರ್ಕೋಟ್ಲಾ ನಗರವನ್ನ ನೂತನ ಜಿಲ್ಲೆಯನ್ನಾಗಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಘೋಷಿಸಿದ್ದಾರೆ. ಈ ಮೂಲಕ ಜನತೆಯ ಬಹುದಿನದ ಬೇಡಿಕೆ ಈಡೇರುತ್ತಿದ್ದು, ಇದು ರಾಜ್ಯದ 23ನೇ ಜಿಲ್ಲೆಯಾಗಲಿದೆ.
ಈದ್-ಉಲ್-ಫಿತರ್ ಸಂದರ್ಭದಲ್ಲಿ ರಾಜ್ಯವನ್ನ ಉದ್ದೇಶಿಸಿ ಮಾತನಾಡುವ ವೇಳೆ ನೂತನ ಜಿಲ್ಲೆಯಾಗಿ ಘೋಷಿಸಿದ್ದು, ಅಲ್ಲಿ ಮಹಿಳಾ ಕಾಲೇಜು, ಹೊಸ ಬಸ್ ನಿಲ್ದಾಣ ಮತ್ತು ಮಹಿಳಾ ಪೊಲೀಸ್ ಠಾಣೆಗೆ 500 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿದ್ದಾರೆ.
ಮುಸ್ಲಿಂ ಬಹುಸಂಖ್ಯಾತ ಪಟ್ಟಣವಾದ ಮಲೆರ್ಕೋಟ್ಲಾ ಇದುವರೆಗೂ ಸಂಗ್ರೂರ್ ಜಿಲ್ಲೆಯ ಭಾಗವಾಗಿತ್ತು ಮತ್ತು ಇದು ಸಂಗ್ರೂರಿನ ಜಿಲ್ಲಾ ಕೇಂದ್ರದಿಂದ ಸುಮಾರು 35 ಕಿ.ಮೀ ದೂರದಲ್ಲಿತ್ತು.
ಹೊಸ ಜಿಲ್ಲೆಯನ್ನು ಘೋಷಿಸುವಾಗ, ಮುಖ್ಯಮಂತ್ರಿ, ಇದು ದೀರ್ಘಕಾಲದ ಬೇಡಿಕೆಯಾಗಿದೆ ಎಂದು ನನಗೆ ತಿಳಿದಿದೆ. ಆದರೆ, ಈಗ ಬದಲಾವಣೆಯಾಗಿದೆ. ದೇಶದ ಸ್ವಾತಂತ್ರ್ಯದ ಸಮಯದಲ್ಲಿ ಪಂಜಾಬ್ ಕೇವಲ 13 ಜಿಲ್ಲೆಗಳನ್ನು ಹೊಂದಿತ್ತು ಎಂದಿದ್ದಾರೆ.
ಇದನ್ನೂ ಓದಿ: ಗುಜರಾತ್ ಮತ್ತು ಕೇರಳ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಸಿದ ಇಸ್ರೋ