ಚಂಡೀಗಢ : ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಪ್ರಚಾರಕ್ಕೆ ತೆರಳಿದ ಪಂಜಾಬ್ ರಾಜ್ಯ ಬಿಜೆಪಿ ಅಧ್ಯಕ್ಷ ಅಶ್ವಿನ್ ಶರ್ಮಾ ವಿರುದ್ಧ ರೈತರು ತೀವ್ರ ಪ್ರತಿಭಟನೆ ನಡೆಸಿದರು.
ನವಾನ್‌ಶಹರ್‌ನಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಶರ್ಮಾ ವಿರುದ್ಧ ರೈತರು ಪ್ರತಿಭಟನೆ ನಡೆಸಿದರು. ರೈತರ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸುರಕ್ಷತೆ ದೃಷ್ಟಿಯಿಂದ, ನಿಗದಿಯಾಗಿದ್ದ ಇತರ ಕಾರ್ಯಕ್ರಮಗಳನ್ನು ಶರ್ಮಾ ರದ್ದುಗೊಳಿಸಿದರು.
ಓದಿ : ಕೇರಳದಲ್ಲಿ ವಿಧಾನಸಭಾ ಚುನಾವಣೆ: ಸ್ಟಾರ್ ಪ್ರಚಾರಕರಾಗಿ ರಾಹುಲ್, ಪ್ರಿಯಾಂಕಾ
ನವಾನ್‌ಶಹರ್‌ನಲ್ಲಿ ಸ್ಥಳೀಯ ರಾಜಕೀಯ ನಾಯಕರೊಂದಿಗೆ ಸೇರಿ ರೈತರು ಪ್ರತಿಭಟನೆ ನಡೆಸಿದ್ದರಿಂದ ಸುಮಾರು ಏಳು ಗಂಟೆಗಳ ಕಾಲ ಬಿಜೆಪಿ ನಾಯಕರು ಸ್ಥಳದಲ್ಲಿ ಸಿಲುಕಿಕೊಂಡಿದ್ದರು. ಪ್ರತಿಭಟನಾಕಾರರು. ಸಭೆ ನಡೆಯುವ ಸ್ಥಳದಲ್ಲಿ ಮತ್ತು ಇತರ ಪ್ರದೇಶಗಳಲ್ಲಿ ಅಳವಡಿಸಿಲಾಗಿದ್ದ ಫ್ಲೆಕ್ಸ್ ಬೋರ್ಡ್ಗಳನ್ನು ಹರಿದು ಹಾಕುತ್ತಿದ್ದರೂ, ಪೊಲೀಸರು ಅವರನ್ನು ತಡೆಯಲಿಲ್ಲ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.