ಪುಣೆ(ಮಹಾರಾಷ್ಟ್ರ) : ಕಳೆದ ಕೆಲ ದಿನಗಳ ಹಿಂದೆ ಯುವತಿಯೋರ್ವಳ ಮೇಲೆ ಅತ್ಯಾಚಾರವೆಸಗಿ, ಖಾಸಗಿ ಭಾಗಕ್ಕೆ ರಾಡ್ ಹಾಕಿರುವ ಘಟನೆ ಮಾಸುವ ಮೊದಲೇ ಮಹಾರಾಷ್ಟ್ರದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. 19 ವರ್ಷದ ವಿವಾಹಿತ ಮಹಿಳೆಯೋರ್ವಳ ಮೇಲೆ ಗಂಡನ ಸಂಬಂಧಿಕರು ಅತ್ಯಾಚಾರವೆಸಗಿ, ತದನಂತರ ಭೀಕರವಾಗಿ ಕೊಲೆ ಮಾಡಿದ್ದಾರೆ.
ಪುಣೆಯ ಮೌಜೆ ಎಂಬಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ವಿವಾಹಿತ ಮಹಿಳೆ ಗಂಡನ ಸಂಬಂಧಿಕರೊಂದಿಗೆ ಪಕ್ಕದೂರಿನ ದೇವಸ್ಥಾನಕ್ಕೆ ತೆರಳಿರುವ ಸಂದರ್ಭದಲ್ಲಿ ದುಷ್ಕೃತ್ಯವೆಸಗಲಾಗಿದೆ. ಘಟನೆಯಲ್ಲಿ ಗಂಡನ ಸಂಬಂಧಿಕರ ಸ್ನೇಹಿತನೋರ್ವ ಭಾಗಿಯಾಗಿದ್ದಾನೆ.
ಇದನ್ನೂ ಓದಿರಿ: ಮುಂಬೈನಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ.. ವಾಚ್ಮ್ಯಾನ್ನಿಂದ ನಡೀತು ದುಷ್ಕೃತ್ಯ..
ಗಂಡನ ಸಂಬಂಧಿಕರೊಂದಿಗೆ ದೇವಸ್ಥಾನಕ್ಕೆ ಹೋಗಿದ್ದ ಸಂದರ್ಭದಲ್ಲಿ ಆಕೆಯ ಮೇಲೆ ಕಾಮುಕರು ಅತ್ಯಾಚಾರವೆಸಗಿದ್ದಾರೆ. ತದನಂತರ ಭೀಕರವಾಗಿ ಕೊಲೆ ಮಾಡಿದ್ದಾರೆ. ಆಕೆಯ ಮುಖ ಗುರುತು ಸಿಗಬಾರದೆಂಬ ಕಾರಣಕ್ಕಾಗಿ ಸಂಪೂರ್ಣ ವಿರೂಪಗೊಳಿಸಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಂಪ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಗಳ ಬಂಧನ ಮಾಡಿರುವ ಪೊಲೀಸರು, ಮತ್ತೋರ್ವ ಕಾಮುಕನಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಮಾಹಿತಿ ತಿಳಿಸಿದ್ದಾರೆ.