ಪುಣೆ(ಮಹಾರಾಷ್ಟ್ರ): ಮಹಾಮಾರಿ ಕೊರೊನಾ ವೈರಸ್ ಹಾವಳಿಯಿಂದಾಗಿ ದೇಶಾದ್ಯಂತ ಆನ್ಲೈನ್ ಮೂಲಕವೇ ತರಗತಿಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳು ಮನೆಯಲ್ಲಿ ಕುಳಿತುಕೊಂಡು ತರಗತಿಗಳಿಗೆ ಹಾಜರಾಗಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ. ಇದರ ಮಧ್ಯೆ ಕೆಲವೊಂದು ಚಿತ್ರ-ವಿಚಿತ್ರ ಘಟನೆ ನಡೆಯುತ್ತಿದ್ದು, ಸದ್ಯ ಮಹಾರಾಷ್ಟ್ರದಲ್ಲಿ ಅಂತಹದೊಂದು ಪ್ರಕರಣ ಬೆಳಕಿಗೆ ಬಂದಿದೆ.
ಆನ್ಲೈನ್ ತರಗತಿ ಆರಂಭಗೊಳ್ಳುತ್ತಿದ್ದಂತೆ ಅಶ್ಲೀಲ ವಿಡಿಯೋ ಪ್ರಸಾರಗೊಂಡಿರುವ ಘಟನೆ ನಡೆದಿದೆ. ಪುಣೆ ಜಿಲ್ಲೆಯ ರಾಜಗುರುನಗರದ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ನಡೆದಿದೆ. ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳಿಗೆ ಹಾಜರಾಗುತ್ತಿದ್ದಂತೆ ಪೋರ್ನ್ ವಿಡಿಯೋ ಪ್ರಸಾರಗೊಂಡಿದ್ದು, ತಕ್ಷಣವೇ ಅನೇಕ ವಿದ್ಯಾರ್ಥಿಗಳು ಆಫ್ಲೈನ್ ಆಗಿದ್ದಾರೆ.
ಘಟನೆ ನಡೆದಿರುವುದು ಹೇಗೆ?
ಇದನ್ನೂ ಓದಿರಿ: ಪ್ರೀತಿಸುತ್ತಿದ್ದ ಜೋಡಿ ಒಂದು ಮಾಡದ ಕುಟುಂಬ: ಸಾವನ್ನಪ್ಪಿದ ನಂತರ ಮೃತದೇಹಗಳಿಗೆ ಮದುವೆ ಮಾಡಿಸಿದ್ರು!
ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಪ್ರಕರಣ ದಾಖಲಾಗಿದ್ದು, ಖೇಡ್ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸತೀಶ್ ಗೌರವ್ ತಿಳಿಸಿರುವ ಪ್ರಕಾರ, ಆನ್ಲೈನ್ ಕ್ಲಾಸ್ಗೋಸ್ಕರ ವಿದ್ಯಾರ್ಥಿಗಳಿಗೆ ಲಿಂಕ್ ಹಾಗೂ ಪಾಸ್ವರ್ಡ್ ನೀಡಲಾಗಿತ್ತು. ಆದರೆ, ಈ ಲಿಂಕ್ ನೀಡಿದ್ದು ಹೊರಗಡೆಯವರು. ತರಗತಿ ಆರಂಭಗೊಳ್ಳುವ ಸಂದರ್ಭದಲ್ಲಿ ತಮ್ಮ ಕಂಪ್ಯೂಟರ್ನಲ್ಲಿ Link ಓಪನ್ ಮಾಡ್ತಿದ್ದಂತೆ ಅದರಲ್ಲಿದ್ದ ಕೆಲವೊಂದು ಅಶ್ಲೀಲ ವಿಡಿಯೋ ಪ್ರಸಾರಗೊಂಡಿವೆ.
ತರಗತಿಗೆ ಹಾಜರಾಗಿದ್ದ ಅನೇಕ ವಿದ್ಯಾರ್ಥಿಗಳ ಪೋಷಕರು ಘಟನೆ ಬಗ್ಗೆ ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ್ದು, ಈಗಾಗಲೇ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಸೈಬರ್ ಇಲಾಖೆ ಇದರ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.