ETV Bharat / bharat

ಪಿಪಿಇ ಕಿಟ್​ಗೆ ವೆಂಟಿಲೇಟರ್ ​: ವೈದ್ಯರು, ನರ್ಸ್​​ಗಳಿಗೆ ವರವಾಗಲಿದೆ ಹೊಸ ಸಂಶೋಧನೆ - ಕೋವ್​-ಟೆಕ್ ವೆಂಟಿಲೇಟರ್​ ಸಿಸ್ಟಮ್

ವ್ಯಾಟ್ ಟೆಕ್ನೋವೇಷನ್ ಸ್ಟಾರ್ಟ್​​ಅಪ್​ ಪ್ರಾಜೆಕ್ಟ್​​ನ ಅಡಿಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಕೋವ್​-ಟೆಕ್ ವೆಂಟಿಲೇಟರ್​ ಸಿಸ್ಟಮ್ ಅನ್ನು ಅಭಿವೃದ್ಧಿಪಡಿಸಿದ್ದು, ಇದನ್ನು ಧರಿಸಿ ವೈದ್ಯರು, ಶುಶ್ರೂಷಕರು ಬಹುಕಾಲದವರೆಗೆ ಕೆಲಸ ನಿರ್ವಹಿಸಬಹುದಾಗಿದೆ.

Pune student develops ventilator system for PPE kit
ಪಿಪಿಇ ಕಿಟ್​ಗೆ ವೆಂಟಿಲೇಟರ್ ​: ವೈದ್ಯರು, ನರ್ಸ್​​ಗಳಿಗೆ ವರವಾಗಲಿದೆ ಹೊಸ ಸಂಶೋಧನೆ
author img

By

Published : May 22, 2021, 3:56 AM IST

ಪುಣೆ, ಮಹಾರಾಷ್ಟ್ರ: ಕೋವಿಡ್ ಎದುರಿಸಲು ಮುಂಚೂಣಿಯಲ್ಲಿ ತೊಡಗಿಸಿಕೊಂಡಿರುವ ವೈದ್ಯರು, ಶುಶ್ರೂಷಕರಿಗೆ ರಿಲೀಫ್ ನೀಡುವ ಸಂಶೋಧನೆಯೊಂದು ಜರುಗಿದ್ದು, ಪಿಪಿಇ ಕಿಟ್​ ಧರಿಸಿ ಅತಿ ಉಷ್ಣತೆಯಲ್ಲಿ ಕಷ್ಟ ಪಡುವುದು ತಪ್ಪುತ್ತದೆ.

ಹೌದು, ಪುಣೆಯ 19 ವರ್ಷ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಯಾದ ನಿಹಾಲ್ ಸಿಂಗ್ ಆದರ್ಶ್ ಎಂಬಾತ ಪಿಪಿಇ ಕಿಟ್​​ನಲ್ಲಿ ಧರಿಸಬಹುದಾದ ವೆಂಟಿಲೇಟರ್ ಅನ್ನು ಅಭಿವೃದ್ಧಿಪಡಿಸಿದ್ದು, ಪಿಪಿಇ ಕಿಟ್​ ಧರಿಸಿ, ಅದರೊಳಗೆ ಭಾರೀ ಉಷ್ಣತೆ ಜೊತೆಗೆ ಆಯಾಸ ಅನುಭವಿಸುವವರಿಗೆ ರಿಲೀಫ್ ನೀಡಲಿದೆ.

Pune student develops ventilator system for PPE kit
ಪಿಪಿಇ ಕಿಟ್​ಗೆ ಬಳಸಬಹುದಾದ ವೆಂಟಿಲೇಟರ್​​

ಈ ಸಂಶೋಧನೆ ಹಿಂದೆ ಅವರ ತಾಯಿಯ ಬೆಂಬಲವಿದ್ದು, ಆಕೆ ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ನಿಹಾಲ್ ಸಿಂಗ್ ಪಿಪಿಇ ಕಿಟ್ ಧರಿಸಿ ಕೆಲಸ ಮಾಡುವುದು ಎಷ್ಟು ಕಷ್ಟ ಎಂಬುದು ನನ್ನ ತಾಯಿಗೆ ಗೊತ್ತು. ಕೆಲವೊಮ್ಮೆ ಬೆವರು ಹೆಚ್ಚಾಗಿ ಬರುವುದರಿಂದ ಹಲವು ರೀತಿಯ ಸೋಂಕಿಗೆ ಕಾರಣವಾಗುತ್ತದೆ. ​ ಇದರಿಂದಾಗಿ ಪಿಪಿಇಗೆ ಅಳವಡಿಸಬಹುದಾದ ಕೋವ್​-ಟೆಕ್ ವೆಂಟಿಲೇಟರ್​ ಸಿಸ್ಟಮ್ ಅನ್ನು ಅಭಿವೃದ್ಧಿ ಪಡಿಸಲು ಪ್ರೇರಣೆಯಾಯಿತು ಎಂದಿದ್ದಾನೆ.

ವೆಂಟಿಲೇಟರ್ ಪ್ರಾಯೋಗಿಕತೆ

ಇದನ್ನೂ ಓದಿ: ರಾಜಸ್ಥಾನದ ಕಳ್ಳರು.. ತಮಿಳುನಾಡಲ್ಲಿ ಕಳ್ಳತನ.. ಮಹಾರಾಷ್ಟ್ರದಲ್ಲಿ ಬಂಧನ

ಇದರ ಜೊತೆಗೆ ನನ್ನ ಸ್ನೇಹಿತರ ಸಹಾಯದಿಂದ ವ್ಯಾಟ್ ಟೆಕ್ನೋವೇಷನ್ ಸ್ಟಾರ್ಟ್​​ಅಪ್​ ಪ್ರಾಜೆಕ್ಟ್​​ನ ಅಡಿಯಲ್ಲಿ ಕೋವ್​-ಟೆಕ್ ವೆಂಟಿಲೇಟರ್​ ಸಿಸ್ಟಮ್ ಅನ್ನು ಅಭಿವೃದ್ಧಿಪಡಿಸಿದ್ದು, ಬೆಲ್ಟ್ ಮಾದರಿಯ ಉಪಕರಣಕ್ಕೆ ಈ ವೆಂಟಿಲೇಟರ್​ ಅನ್ನು ಕಟ್ಟಿಕೊಳ್ಳಬಹುದಾಗಿದೆ. ಇದು ಪಿಪಿಇ ಕಿಟ್​ ಒಳಗೆ ಹೆಚ್ಚಾಗಿ ಬೆವರು ಬರದಂತೆ ತಡೆಯಲಿದ್ದು, ವೈದ್ಯರು, ಶುಶ್ರೂಷಕರು ಬಹುಕಾಲದವರೆಗೆ ಕೆಲಸ ನಿರ್ವಹಿಸಬಹುದು ಎಂದಿದ್ದಾನೆ.

ವೆಂಟಿಲೇಟರ್​ನೊಂದಿಗೆ ನಿಹಾಲ್​​

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿಹಾಲ್ ತಾಯಿ ಈಗಾಗಲೇ ಪುಣೆಯ ಹಲವು ಆಸ್ಪತ್ರೆಗಳಲ್ಲಿ ಈ ವೆಂಟಿಲೇಟರ್ ಕಿಟ್​ ಅನ್ನು ಬಳಕೆ ಮಾಡುತ್ತಿದ್ದು, ಬೇರೆ ರಾಜ್ಯಗಳಿಂದಲೂ ಬೇಡಿಕೆ ಬರುತ್ತಿದೆ. ಕೆಲವೊಂದು ಸ್ವಯಂಸೇವಾ ಸಂಘಟನೆಗಳು ಈ ಬಗ್ಗೆ ಆಸಕ್ತಿ ತೋರಿವೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.