ಪುಣೆ (ಮಹಾರಾಷ್ಟ್ರ): ಪುಣೆಯ ಪಿಂಪ್ರಿ ಚಿಂಚ್‌ವಾಡ್‌ನಲ್ಲಿರುವ ತಲವಾಡೆಯಲ್ಲಿ ಮೇಣದಬತ್ತಿ ತಯಾರಿಕಾ ಘಟಕದಲ್ಲಿ ಡಿಸೆಂಬರ್ 8 ರಂದು ಸಂಭವಿಸಿದ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಕಮಲ್ ಚೌರೆ (35) ಎಂಬುವರು ಶನಿವಾರ ಸಾವನ್ನಪ್ಪಿದ್ದರೆ, ಉಷಾ ಪದ್ವಿ (40) ಎಂಬುವರು ಭಾನುವಾರ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಮತ್ತೊಂದೆಡೆ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಮೇಣದ ಬತ್ತಿ ತಯಾರಿಕಾ ಘಟಕದ ಮಾಲೀಕ ಶರದ್ ಸುತಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಶರದ್ ಸುತಾರ್ಗೆ ಬೆಂಕಿ ತಗುಲಿ ಗಾಯಗಳಾಗಿದ್ದವು. ಮೇಣದಬತ್ತಿ ತಯಾರಿಸುವ ವಿಶೇಷ ಘಟಕದಲ್ಲಿ ಡಿಸೆಂಬರ್ 8 ರಂದು ಮಧ್ಯಾಹ್ನ ಬೆಂಕಿ ಕಾಣಿಸಿಕೊಂಡಿತ್ತು. ಅಂದು ಆರು ಮಂದಿ ಸಾವನ್ನಪ್ಪಿದ್ದರೆ, 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ನಂತರ ಸಾವಿನ ಸಂಖ್ಯೆಯಾಗುತ್ತಲೇ ಇದೆ.
ಇದನ್ನೂ ಓದಿ: ಸೋಲಾರ್ ಸ್ಪೋಟಕ ತಯಾರಿಕಾ ಕಂಪನಿಯಲ್ಲಿ ಸ್ಪೋಟ: 9 ಮಂದಿ ಸಾವು, ತಲಾ ₹5 ಲಕ್ಷ ಪರಿಹಾರ ಘೋಷಣೆ