ETV Bharat / bharat

ಎಲ್​ಇಟಿಯ ಸ್ಲೀಪರ್ ಸೆಲ್ ಭೇದಿಸಿದ ಪುಲ್ವಾಮಾ ಪೊಲೀಸರು, ಐವರ ಬಂಧನ - LeT sleeper cell

ಬಂಧಿತರಿಂದ ಶಸ್ತ್ರಾಸ್ತ್ರಗಳು ಸೇರಿದಂತೆ ಕೆಲವು ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿಕೊಳ್ಳಲಾಗಿದೆ. ಬಂಧಿತರನ್ನು ಪೊಲೀಸರು ವಿಚಾರಣೆಗೆ ಒಳಪಡಿಸುತ್ತಿದ್ದು, ಮತ್ತಷ್ಟು ಸ್ಫೋಟಕ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ..

Pulwama Police busted a sleeper cell module
ಎಲ್​ಇಟಿಯ ಸ್ಲೀಪರ್ ಸೆಲ್ ಭೇದಿಸಿದ ಪುಲ್ವಾಮಾ ಪೊಲೀಸರು, ಐವರ ಬಂಧನ
author img

By

Published : Nov 21, 2021, 2:42 PM IST

ಪುಲ್ವಾಮಾ(ಜಮ್ಮು-ಕಾಶ್ಮೀರ): ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೋಯ್ಬಾದ (Lashkar-E-Taiba) ಸ್ಲೀಪರ್ ಸೆಲ್​ ಅನ್ನು ಭೇದಿಸಿದ ಜಮ್ಮು-ಕಾಶ್ಮೀರದ ಪುಲ್ವಾಮಾ ಪೊಲೀಸರು (Pulwama Police) ಐವರು ಭಯೋತ್ಪಾದಕರನ್ನು ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಶೌಕತ್‌ ಇಸ್ಲಾಂ ದಾರ್, ಐಜಾಜ್ ಅಹ್ಮದ್ ಲೋನ್, ಐಜಾಜ್ ಗುಲ್ಜಾರ್ ಲೋನ್, ಮಂಜೂರ್ ಅಹ್ಮದ್ ಭಟ್, ನಾಸ್ಸೆರ್ ಅಹ್ಮದ್ ಶಾ ಎಂಬುವರನ್ನು ಬಂಧಿಸಲಾಗಿದೆ. ಬಂಧಿತರೆಲ್ಲರೂ ಪುಲ್ವಾಮಾದ ಲೆಲ್ಹಾರ್​ ಮೂಲದವರಾಗಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ ಬಂಧಿತರು, ಭಯೋತ್ಪಾದಕರಿಗೆ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವ ಮತ್ತು ಪೂರೈಸುವ ಹೊಣೆಯನ್ನು ಹೊತ್ತಿದ್ದರು. ಜೊತೆಗೆ ಭಯೋತ್ಪಾದಕ ಸಂಘಟನೆಗಳ ನಾಯಕರ ಆದೇಶದ ಮೇರೆಗೆ ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸುವ ಕೆಲಸವನ್ನೂ ಇವರು ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಬಂಧಿತರಿಂದ ಶಸ್ತ್ರಾಸ್ತ್ರಗಳು ಸೇರಿದಂತೆ ಕೆಲವು ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿಕೊಳ್ಳಲಾಗಿದೆ. ಬಂಧಿತರನ್ನು ಪೊಲೀಸರು ವಿಚಾರಣೆಗೆ ಒಳಪಡಿಸುತ್ತಿದ್ದು, ಮತ್ತಷ್ಟು ಸ್ಫೋಟಕ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ಪ್ರತಿಭಟನೆಯಿಂದಾಗಿ ಕೃಷಿ ಕಾಯ್ದೆಗಳನ್ನು ಕೇಂದ್ರ ಹಿಂಪಡೆಯಿತು: ಸಚಿನ್ ಪೈಲಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.