ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ನಾಲ್ಕು ವರ್ಷಗಳ ಹಿಂದೆ ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಗಿದ್ದ 19 ಭಯೋತ್ಪಾದಕರ ಪೈಕಿ ಎಂಟು ಮಂದಿ ಸಾವನ್ನಪ್ಪಿದ್ದಾರೆ ಮತ್ತು ಏಳು ಮಂದಿಯನ್ನು ಬಂಧಿಸಲಾಗಿದ್ದು, ಮೂವರು ಪಾಕಿಸ್ತಾನಿ ಸೇರಿದಂತೆ ಒಟ್ಟು ನಾಲ್ಕು ಭಯೋತ್ಪಾದಕರು ಇನ್ನೂ ಜೀವಂತವಾಗಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಮಂಗಳವಾರ ತಿಳಿಸಿದರು.
ಪುಲ್ವಾಮ ದಾಳಿಯಲ್ಲಿ ಹುತಾತ್ಮ ಯೋಧರಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಹೆಚ್ಚುವರಿ ಡಿಜಿಪಿ (ಕಾಶ್ಮೀರ) ವಿಜಯ ಕುಮಾರ್, ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಪಾಕಿಸ್ತಾನಿಗಳು ಸೇರಿದಂತೆ ಒಟ್ಟು ನಾಲ್ಕು ಉಗ್ರರು ಜೀವಂತವಾಗಿದ್ದಾರೆ ಮತ್ತು ಭಾರತೀಯ ಭದ್ರತಾ ಪಡೆಗಳು ಜೈಶ್ - ಎ- ಮುಹಮ್ಮದ್ (ಜೆಎಂ) ಭಯೋತ್ಪಾದಕ ಸಂಘಟನೆಯ ಹಿಂದಿದೆ. ಜೆಎಂ ಸಂಘಟನೆಯ ಬಹುತೇಕ ಎಲ್ಲಾ ಕಮಾಂಡರ್ಗಳನ್ನು ತಟಸ್ಥಗೊಳಿಸಲಾಗಿದೆ ಎಂದು ಡಿಜಿಪಿ ವಿಜಯ್ ಕುಮಾರ್ ತಿಳಿಸಿದರು.
''ಪ್ರಸ್ತುತ ಜೈಶ್-ಎ-ಮುಹಮ್ಮುದ್ ಭಯೋತ್ಪಾದನಾ ಸಂಘಟನೆಯಲ್ಲಿ ಮೊಸ್ಸಾ ಸೊಲೈಮಾನಿ ಸೇರಿದಂತೆ ಕೇವಲ 7 ರಿಂದ 8 ಮಂದಿ ಸ್ಥಳೀಯರು ಮತ್ತು 5 ರಿಂದ 6 ಜನ ಪಾಕಿಸ್ತಾನಿಗಳು ಇದ್ದಾರೆ. ಪೊಲೀಸರು ಅವರನ್ನು ಹಿಂಬಾಲಿಸುತ್ತಿದ್ದು ಶೀಘ್ರದಲ್ಲೇ ಅವರನ್ನು ತಟಸ್ಥಗೊಳಿಸಲಾಗುವುದು ಮತ್ತು ಭದ್ರತಾ ಪಡೆಗಳು ಮಾದಕವಸ್ತು ಮತ್ತು ಭಯೋತ್ಪಾದನೆಯ ನಿಧಿಯ ಮೇಲೆ ಕೇಂದ್ರಿಕರಿಸುತ್ತಿವೆ ಎಂದು ತಿಳಿಸಿದರು.
‘‘ಇತ್ತೀಚಿಗೆ ಬಾರಮುಲ್ಲಾ ಎಂಬ ಪ್ರದೇಶದಲ್ಲಿ ಸುಮಾರು 26 ಲಕ್ಷ ರೂ, ಭಯೋತ್ಪಾದನಾ ನಿಧಿಯನ್ನು ವಶಪಡಿಸಿಕೊಳ್ಳಲಾಗಿದೆ. ಇಂತಹ ಚಟುವಟಿಕೆಗಳಲ್ಲಿ ತೊಡಗಿರುವ ಅತಿಕ್ರಮಣ ಕಾರ್ಮಿಕರ ವಿರುದ್ಧ ದಾಖಲಾಗಿರುವ ಪ್ರಕರಣಗಳು ಕ್ಷಿಪ್ರಗತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ’’ ಎಂದು ಹೇಳಿದರು. ಒಟ್ಟು 37 ಸ್ಥಳೀಯ ಉಗ್ರಗಾಮಿಗಳು ಬಹಳ ಸಕ್ರಿಯರಾಗಿದ್ದು, ಅದರಲ್ಲಿ ಫಾರೂಕ್ ನಲಿ ಮತ್ತು ರಿಯಾಜ್ ಚತ್ರಿ ಇವರಿಬ್ಬರೂ ಮಾತ್ರ ವಯಸ್ಸಾದವರಾಗಿದ್ದು ಇನ್ನೂ ಉಳಿದ ಉಗ್ರಗಾಮಿಗಳು ಇತ್ತೀಚಿಗೆ ಸೇರ್ಪಡೆಗೊಂಡಿದ್ದಾರೆ.
ಇನ್ಸ್ಪೆಕ್ಟರ್ ಜನರಲ್ (ಐಜಿ) ಎಂ.ಎಸ್ ಭಾಟಿಯಾ ಮಾತನಾಡಿ, ಪುಲ್ವಾಮ ದಾಳಿಯ ನಂತರ ಪರಿಸ್ಥಿತಿ ಸುಧಾರಿಸಿದೆ ಮತ್ತು ಭದ್ರತಾ ಪಡೆಗಳು ತೆಗೆದುಕೊಂಡ ಕ್ರಮಗಳನ್ನು ಗಮನಿಸಿದರೆ ಮುಂದಿನ ದಿನಗಳಲ್ಲಿ ಅಂತಹ ದಾಳಿಗಳು ಮುಂದೆಂದು ಮರುಕಳಿಸುವುದಿಲ್ಲ ಎಂದರು. ಜೊತೆಗೆ ಅಲ್ಪ ಸಂಖ್ಯಾತ ಸಮುದಾಯಗಳ ಸದಸ್ಯರ ಮೇಲಿನ ಹಲ್ಲೆಗಳು ಹೇಡಿತನದ ಕೃತ್ಯವಾಗಿದೆ, ಅಂತಹ ದಾಳಿಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕರಾಳ ದಿನ : 14 ಫೆಬ್ರವರಿ 2019, ಗುರುವಾರ ಮಧ್ಯಾಹ್ನ 3.30 ಕ್ಕೆ ಪುಲ್ವಾಮಾದಲ್ಲಿ ಭಯೋತ್ಪಾದಕ ದಾಳಿ ನಡೆದಿತ್ತು. ಜೈಶ್-ಎ-ಮೊಹಮ್ಮದ್‌ನ ಆಜ್ಞೆಯ ಮೇರೆಗೆ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ದಾಳಿಯಲ್ಲಿ 40 ಹುತಾತ್ಮರು ಸಾವನ್ನಪ್ಪಿದ್ದರು. ಸಿಆರ್‌ಪಿಎಫ್ ಯೋಧರು ತುಂಬಿದ್ದ ಟ್ರಕ್ ರಸ್ತೆಯ ಮಧ್ಯದಲ್ಲಿ ಸಾಗುತ್ತಿದ್ದಾಗ ಸ್ಫೋಟಕಗಳನ್ನು ತುಂಬಿದ್ದ ಕಾರಿಗೆ ಡಿಕ್ಕಿ ಹೊಡೆದಿತ್ತು. ಇದರಿಂದಾಗಿ ಯೋಧರ ವಾಹನಗಳು ಹಾರಿ ಹೋಗಿದ್ದವು. ಇದಾದ ನಂತರ, ಮೊದಲೇ ಸಂಚು ರೂಪಿಸಿದ್ದ ಉಗ್ರರು ಸ್ಥಳದಲ್ಲಿಯೇ ಗುಂಡಿನ ದಾಳಿ ಆರಂಭಿಸಿದ್ದರು. ಈ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದು, 35 ಮಂದಿ ಗಾಯಗೊಂಡಿದ್ದರು.
ಇದನ್ನೂ ಓದಿ: ಏಳು ಭಯೋತ್ಪಾದಕರನ್ನು ಹತ್ಯೆ ಮಾಡಿದ ಪಾಕಿಸ್ತಾನದ ಭದ್ರತಾ ಪಡೆ