ಪುದುಚೇರಿ: ಬಿಜೆಪಿ ಮತ್ತು ಎನ್ಆರ್ ಕಾಂಗ್ರೆಸ್ ಮೈತ್ರಿ ಸರ್ಕಾರದ ಮಹಿಳಾ ಸಚಿವೆಯೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ, ಅವರು ನೀಡಿದ ಕಾರಣ ಸಂಚಲನ ಉಂಟು ಮಾಡಿದೆ. ತಾವು ಜಾತಿ ತಾರತಮ್ಯ ಮತ್ತು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾಗಿ ಸಿಎಂಗೆ ನೀಡಿದ ರಾಜೀನಾಮೆ ಪತ್ರದಲ್ಲಿ ಆರೋಪಿಸಿದ್ದಾರೆ. ಇದು ತೀವ್ರ ಚರ್ಚೆಗೆ ನಾಂದಿ ಹಾಡಿದೆ.
ಸಾರಿಗೆ ಸಚಿವೆಯಾಗಿದ್ದ ಚಂದ್ರ ಪ್ರಿಯಾಂಕಾ ಅವರು ತಮ್ಮ ಸ್ಥಾನಕ್ಕೆ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ತಾವು ಎದುರಿಸುತ್ತಿರುವ ಸವಾಲುಗಳು, ಜಾತಿ ತಾರತಮ್ಯ, ಲೈಂಗಿಕ ಕಿರುಕುಳದ ಕಾರಣದಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಸಚಿವೆಯಾಗಿ ಮುಂದುವರಿಯಲು ಸಾಧ್ಯವಿಲ್ಲ. ಅವಕಾಶ ನೀಡಿದ ಪಕ್ಷಕ್ಕೆ ಧನ್ಯವಾದಗಳು ಎಂದು ಅವರು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ, ರಾಜೀನಾಮೆ ಪತ್ರನ್ನು ಅವರು ಎಕ್ಸ್ನಲ್ಲಿ (ಹಿಂದಿನ ಟ್ವಿಟರ್) ಹಂಚಿಕೊಂಡಿದ್ದಾರೆ.
- — Chandirapriyanga (@SPriyanga_offl) October 10, 2023 " class="align-text-top noRightClick twitterSection" data="
— Chandirapriyanga (@SPriyanga_offl) October 10, 2023
">— Chandirapriyanga (@SPriyanga_offl) October 10, 2023
ಪುದುಚೇರಿಯ 41 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಮಹಿಳಾ ಸಚಿವೆಯೊಬ್ಬರು ಲೈಂಗಿಕ ಕಿರುಕುಳದ ಆರೋಪದ ಮೇಲೆ ರಾಜೀನಾಮೆ ನೀಡಿರುವುದು ಇದೇ ಮೊದಲಾಗಿದೆ. ವಿಶೇಷವೆಂದರೆ, ಚಂದ್ರ ಪ್ರಿಯಾಂಕಾ ಅವರು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ಎರಡನೇ ಮಹಿಳಾ ಸಚಿವೆಯಾಗಿದ್ದರು. ಅವರು ಅಖಿಲ್ ಎನ್ಆರ್ ಕಾಂಗ್ರೆಸ್ ಪಕ್ಷದ ಶಾಸಕಿಯಾಗಿದ್ದಾರೆ.
"ದಲಿತ ಸಚಿವೆಯಾಗಿ ಬದ್ಧತೆಯಿಂದ ಕೆಲಸ ಮಾಡಿದ್ದೇನೆ. ನನ್ನ ಜಾತಿಗೆ ಸಂಬಂಧಿಸಿದಂತೆ ಇತರ ಸಮುದಾಯಗಳಿಂದ ತಾರತಮ್ಯವನ್ನು ಎದುರಿಸಿದ್ದೇನೆ. ಲೈಂಗಿಕ ಕಿರುಕುಳಕ್ಕೂ ಒಳಗಾಗಿದ್ದೇನೆ. ಇಂತಹ ಕಲುಷಿತ ವಾತಾವರಣದಲ್ಲಿ ನಾನು ಸಚಿವೆಯಾಗಿ ಮುಂದುವರಿಯಲಾರೆ. ಹೀಗಾಗಿ ನಾನು ಪದತ್ಯಾಗ ಮಾಡುತ್ತಿದ್ದೇನೆ" ಎಂದು ಪ್ರಿಯಾಂಕಾ ಸ್ಪಷ್ಟನೆ ನೀಡಿದ್ದಾರೆ.
ಸಚಿವೆಗೆ ಲೈಂಗಿಕ ಕಿರುಕುಳ: ಚಂದ್ರ ಪ್ರಿಯಾಂಕಾ ಅವರು ಪುದುಚೇರಿಯ ದಲಿತ ಮಹಿಳಾ ಸಚಿವೆಯಾಗಿದ್ದು, ಅವರಿಗೇ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬ ಆರೋಪ ರಾಜಕೀಯದಲ್ಲಿ ಸಂಚಲನ ಉಂಟು ಮಾಡಿದೆ. ಜಾತಿ ತಾರತಮ್ಯ ಮತ್ತು ಕಿರುಕುಳ ಆರೋಪ ಮಾಡಿರುವ ಪ್ರಿಯಾಂಕಾ ಅವರ ಹೇಳಿಕೆ ಸರ್ಕಾರ ಮತ್ತು ಪಕ್ಷದಲ್ಲಿ ಚರ್ಚೆಗೆ ಕಾರಣವಾಗಿದೆ.
ಪ್ರಿಯಾಂಕಾ ಅವರು ತಂದೆಯ ಬಳಿಕ ಪುದುಚೇರಿಯ ಸಚಿವರಾಗಿದ್ದರು. 2016 ರಲ್ಲಿ ಅವರು ನೆಡುಂಗಾಡು ಕ್ಷೇತ್ರದಿಂದ ಶಾಸಕರಾಗಿ ಮೊದಲ ಬಾರಿಗೆ ಆಯ್ಕೆಯಾದರು. 2021ರ ವಿಧಾನಸಭಾ ಚುನಾವಣೆಯಲ್ಲಿ ಎನ್ ಆರ್ ಕಾಂಗ್ರೆಸ್ ಪಕ್ಷದ ಪರವಾಗಿ ಎರಡನೇ ಬಾರಿಗೆ ಗೆದ್ದು ಸಾರಿಗೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು. ಸದ್ಯ ಪುದುಚೇರಿಯಲ್ಲಿ ಬಿಜೆಪಿ-ಎನ್‌ಆರ್ ಕಾಂಗ್ರೆಸ್ ಮೈತ್ರಿಕೂಟ ಅಧಿಕಾರದಲ್ಲಿದೆ.
ಇದನ್ನೂ ಓದಿ: 'ಜಾತಿ ಗಣತಿ ಎಕ್ಸ್ರೇ ಇದ್ದಂತೆ, ಸಮೀಕ್ಷೆಯಿಂದ ಸಮುದಾಯಗಳ ಬಗ್ಗೆ ತಿಳಿಯಲು ಸಾಧ್ಯ': ರಾಹುಲ್ ಗಾಂಧಿ