ETV Bharat / bharat

ಪುದುಚೇರಿ ಗೇಮ್​ ಪ್ಲಾನ್​ ಮಹಾರಾಷ್ಟ್ರದಲ್ಲಿ ನಡೆಯಲ್ಲ: ಬಿಜೆಪಿಗೆ ಸಂಜಯ್​ ರಾವತ್​ ಟಾಂಗ್​ - ಪುದುಚೇರಿಯಲ್ಲಿ ಕಾಂಗ್ರೆಸ್​ ಸರ್ಕಾರ

ಪುದುಚೇರಿಯಲ್ಲಿ ಕಾಂಗ್ರೆಸ್​ ಸರ್ಕಾರ ಪತನಗೊಳ್ಳುತ್ತಿದ್ದಂತೆ ಮಹಾರಾಷ್ಟ್ರದಲ್ಲೂ ಬಿಜೆಪಿ ಆಪರೇಷನ್​ ಕಮಲ ನಡೆಸಲಿದೆ ಎಂಬ ಮಾತು ಕೇಳಿ ಬರುತ್ತಿದ್ದು, ಇದಕ್ಕೆ ಸಂಜಯ್​ ರಾವತ್​ ಟಾಂಗ್​ ನೀಡಿದ್ದಾರೆ.

sanjay rawat
sanjay rawat
author img

By

Published : Feb 24, 2021, 5:14 PM IST

ಮುಂಬೈ: ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಪುದುಚೇರಿಯಲ್ಲಿ ರಾಜಕೀಯ ಬಿಕ್ಕಟ್ಟಿನಿಂದಾಗಿ ಅಧಿಕಾರ ಕಳೆದುಕೊಂಡಿದ್ದು, ಇದೀಗ ರಾಷ್ಟ್ರಪತಿ ಆಳ್ವಿಕೆ ಜಾರಿಗೊಂಡಿದೆ.

ಇದರ ಬೆನ್ನಲ್ಲೇ ಮಹಾರಾಷ್ಟ್ರದಲ್ಲೂ ಭಾರತೀಯ ಜನತಾ ಪಾರ್ಟಿ ಹೊಸ ಗೇಮ್​ ಪ್ಲಾನ್​​ನೊಂದಿಗೆ ಶಿವಸೇನೆ-ಎನ್​ಸಿಪಿ ಮೈತ್ರಿ ಸರ್ಕಾರ ಕೆಡವಲು ಯೋಜನೆ ರೂಪಿಸಿದೆ ಎಂಬ ಮಾತುಗಳು ಗಂಭೀರವಾಗಿ ಕೇಳಿ ಬರುತ್ತಿದ್ದು, ಇದರ ವಿರುದ್ಧ ಶಿವಸೇನೆ ಮುಖಂಡ ಸಂಜಯ್​ ರಾವತ್ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಪುದುಚೇರಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ

ಶಿವಸೇನೆಯ ಮುಖಂಡ ಸಂಜಯ್​ ರಾವತ್ ವಾಗ್ದಾಳಿ ನಡೆಸಿದ್ದು, ಮಧ್ಯಪ್ರದೇಶ ಹಾಗೂ ಪುದುಚೇರಿಯಲ್ಲಿ ಸರ್ಕಾರ ಪತನಗೊಳಿಸಲು ಬಿಜೆಪಿ ಬೀಸಿರುವ ಬಲೆಗೆ ಮಹಾರಾಷ್ಟ್ರ ಯಾವುದೇ ಕಾರಣಕ್ಕೂ ಬೀಳುವುದಿಲ್ಲ ಎಂದಿದ್ದಾರೆ.

ಕಳೆದ ಕೆಲ ತಿಂಗಳ ಹಿಂದೆ ಮಧ್ಯಪ್ರದೇಶ ಹಾಗೂ ಅದಕ್ಕೂ ಮೊದಲು ಕರ್ನಾಟಕ ಹಾಗೂ ಇದೀಗ ಪುದುಚೇರಿಯಲ್ಲಿ ಆಪರೇಷನ್ ಕಮಲ್ ನಡೆಸಿದ ಬಿಜೆಪಿ ಅಲ್ಲಿನ ಕಾಂಗ್ರೆಸ್​ ನೇತೃತ್ವದ ಮೈತ್ರಿ ಸರ್ಕಾರ ಬಿಳಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಮಹಾರಾಷ್ಟ್ರದಲ್ಲೂ ಶಿವಸೇನೆ-ಎನ್​ಸಿಪಿ ಮೈತ್ರಿ ಸರ್ಕಾರ ಪತನಗೊಳಿಸಲು ಕೇಂದ್ರ ಸರ್ಕಾರ ಯೋಜನೆ ಹಾಕಿಕೊಂಡಿದೆ ಎಂಬ ಮಾತು ಕೇಳಿ ಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.