ಪುದುಚೆರಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪುದುಚೆರಿ ಆಗಮಿಸಿದ್ದ ಸಂದರ್ಭದಲ್ಲಿ ವೃದ್ಧೆಯೊಬ್ಬರು ದೂರು ಸಲ್ಲಿಸಿದ್ದಾರೆ. ಆದರೆ, ಅದರ ಅನುವಾದ ಮಾಡಿದ ಸಿಎಂ ನಾರಾಯಣಸಾಮಿ ತಪ್ಪಾಗಿ ತಿಳಿಸಿರುವ ಘಟನೆ ನಡೆದಿದೆ.
ಪುದುಚೆರಿಯಲ್ಲಿ ಪ್ರಚಾರ ಮಾಡಿದ ರಾಹುಲ್ ಗಾಂಧಿ ಜನರ ಅಹವಾಲುಗಳನ್ನು ಆಲಿಸಿದರು. ಅಲ್ಲಿರುವ ಮೀನುಗಾರ ಸಮುದಾಯದೊಂದಿಗೆ ಸಮಾವೇಶವನ್ನು ನಡೆಸಿದರು.
ಇನ್ನು ಈ ವೇಳೆ, "ಚಂಡಮಾರುತದ ಸಮಯದಲ್ಲಿ ಪ್ರವಾಹ ಪೀಡಿತ ಸ್ಥಳಗಳಿಗೆ ಮುಖ್ಯಮಂತ್ರಿಗಳು ಭೇಟಿ ನೀಡಲಿಲ್ಲ" ಎಂದು ವೃದ್ಧೆಯೊಬ್ಬರು ಆರೋಪಿಸಿದ್ದಾರೆ. ಆದರೆ, ಮುಖ್ಯಮಂತ್ರಿ ನಾರಾಯಣಸಾಮಿ "ಚಂಡಮಾರುತದ ಸಮಯದಲ್ಲಿ ಸಿಎಂ ಬಂದು ಜನರಿಗೆ ಪರಿಹಾರ ಸಾಮಗ್ರಿಗಳನ್ನು ನೀಡಿದರು ಎಂದು ಹೇಳಿದ್ದಾಗಿ ಅನುವಾದ ಮಾಡಿದ್ದಾರೆ.
ಈ ತಪ್ಪು ಅನುವಾದವು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದಲ್ಲದೇ, ವಿರೋಧ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.