ETV Bharat / bharat

ಹೊಸ ವರ್ಷದ ಮೊದಲ ದಿನವೇ ಇತಿಹಾಸ ಬರೆದ ಇಸ್ರೋ: 'ಎಕ್ಸ್‌ಪೋಸ್ಯಾಟ್‌' ಉಡ್ಡಯನ ಯಶಸ್ವಿ - ಉಪಗ್ರಹ ಉಡಾವಣೆ

ಹೊಸ ವರ್ಷ 2024ರ ಮೊದಲ ದಿನವಾದ ಇಂದು ಭಾರತದ ಬಾಹ್ಯಾಕಾಶ ಉಡ್ಡಯನ ಸಂಸ್ಥೆ (ಇಸ್ರೋ) ಐತಿಹಾಸಿಕ ಉಡಾವಣೆ ಮಾಡಿದೆ.

X-Ray Polarimeter satellite
ಎಕ್ಸ್‌ಪೋಸ್ಯಾಟ್‌ ಉಪಗ್ರಹ ಉಡಾವಣೆ
author img

By PTI

Published : Jan 1, 2024, 11:03 AM IST

Updated : Jan 1, 2024, 4:06 PM IST

ಎಕ್ಸ್‌ಪೋಸ್ಯಾಟ್‌ ಉಡ್ಡಯನ ಯಶಸ್ವಿ

ನವದೆಹಲಿ: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಹೊಸ ವರ್ಷದ ಮೊದಲ ದಿನವೇ ಐತಿಹಾಸಿಕ ಸಾಧನೆ ಮಾಡಿತು. ಕಪ್ಪು ಕುಳಿಗಳು, ನ್ಯೂಟ್ರಾನ್ ನಕ್ಷತ್ರಗಳು ಮತ್ತು ಸಕ್ರಿಯ ಗ್ಯಾಲಕ್ಸಿಯ ನ್ಯೂಕ್ಲಿಯಸ್​ಗಳಂತಹ ಆಕಾಶ ವಸ್ತುಗಳ ಒಳನೋಟ ನೀಡುವ ತನ್ನ ಮೊದಲ ಎಕ್ಸ್‌-ರೇ ಪೋಲಾರಿಮೀಟರ್ ಉಪಗ್ರಹ ಎಕ್ಸ್‌ಪೋಸ್ಯಾಟ್‌ (XPoSat ) X-ray Polarimeter Satellite ಅನ್ನು ಯಶಸ್ವಿಯಾಗಿ ನಭಕ್ಕೆ ಉಡಾವಣೆ ಮಾಡಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟದಿಂದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್‌ (ಪಿಎಸ್‌ಎಲ್‌ವಿ) ಮೂಲಕ ಉಪಗ್ರಹದ ಉಡಾವಣೆ ಮಾಡಲಾಯಿತು. ಇದರೊಂದಿಗೆ ಇತರೆ ಹತ್ತು ಉಪಗ್ರಹಗಳೂ ಇದ್ದವು.

  • #ISRO begins 2024 in Style!
    Successful launch of PSLV-C58/ 🛰 XPoSat Mission.
    Proud to be associated with the Department of Space at a time when Team @isro continues to accomplish one success after the other, with the personal intervention & patronage from PM Sh @narendramodi. pic.twitter.com/cisbjpUYpH

    — Dr Jitendra Singh (@DrJitendraSingh) January 1, 2024 " class="align-text-top noRightClick twitterSection" data=" ">

ಅಕ್ಟೋಬರ್‌ನಲ್ಲಿ ಗಗನಯಾನ ಪರೀಕ್ಷಾ ಡಿ1 ಮಿಷನ್ ಯಶಸ್ವಿಯಾದ ನಂತರದ ಉಡಾವಣೆ ಇದಾಗಿದೆ. PSLV-C58 ರಾಕೆಟ್​ನಿಂದ ಈವರೆಗೆ ನಡೆಸಲಾಗುತ್ತಿರುವ 60ನೇ ಉಡಾವಣೆಯೂ ಹೌದು. ಇದರಲ್ಲಿ ಎರಡು ಪೆಲೋಡ್​ಗಳಿದ್ದು ಮತ್ತು 10 ಇತರೆ ಉಪಗ್ರಹಗಳನ್ನು ಭೂಮಿಯ ಕಡಿಮೆ ಕಕ್ಷೆಗಳಲ್ಲಿ ನಿಯೋಜಿಸಲಾಗುತ್ತದೆ. ಈ ಉಪಗ್ರಹಗಳನ್ನು ಸ್ಟಾರ್ಟಪ್ಸ್, ಶೈಕ್ಷಣಿಕ ಸಂಸ್ಥೆಗಳು ಮತ್ತು ಇಸ್ರೋ ಕೇಂದ್ರಗಳು ನಿರ್ಮಿಸಿವೆ.

ಎಕ್ಸ್‌ಪೋಸ್ಯಾಟ್ ಎಂದರೇನು?: ಎಕ್ಸ್‌ಪೋಸ್ಯಾಟ್ ಮಿಷನ್ ಅನ್ನು ತೀವ್ರವಾದ ಎಕ್ಸ್-ರೇ ಮೂಲಗಳ ಧ್ರುವೀಕರಣವನ್ನು ಸಂಶೋಧಿಸಲು ವಿನ್ಯಾಸಗೊಳಿಸಲಾಗಿದೆ. ಎಕ್ಸ್​​ರೇ ಪೋಲಾರಿಮೀಟರ್ ಉಪಗ್ರಹವು (XPoSat) ಇಸ್ರೋದ ಮೊದಲ ಬೆಳಕಿನ ಯೋಜನೆಯಾಗಿದೆ. ಅಲ್ಲದೇ, ಅಮೆರಿಕದ ಬಳಿಕ ನಡೆಸುತ್ತಿರುವ ಎರಡನೇ ಯೋಜನೆ. ಇದು ಬಾಹ್ಯಾಕಾಶದಲ್ಲಿ ತೀವ್ರವಾದ ಎಕ್ಸ್​ರೇ ಮೂಲಗಳ ಧ್ರುವೀಕರಣವನ್ನು ಸಂಶೋಧಿಸುವ ಗುರಿ ಹೊಂದಿದೆ. ಆಕಾಶ ಮೂಲಗಳಿಂದ ಎಕ್ಸ್-ರೇ ಬೆಳಕು ಹೊರಸೂಸುವಿಕೆಯ ಮೇಲೆ ಸಂಶೋಧನೆಯನ್ನು ಕೈಗೊಳ್ಳಲು ಬಳಸುತ್ತಿರುವ ವೈಜ್ಞಾನಿಕ ಉಪಗ್ರಹವಾಗಿದೆ.

ಇದನ್ನೂ ಓದಿ: ಹೊಸ ವರ್ಷದ ಮೊದಲ ದಿನವೇ ಇಸ್ರೋ ಮಹತ್ವದ ಉಪಗ್ರಹ ಉಡಾವಣೆ; ಏನಿದರ ವಿಶೇಷತೆ?

Last Updated : Jan 1, 2024, 4:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.