ETV Bharat / bharat

ಕೊರೊನಾ ನಡುವೆ ತವರಿಗೆ ಮರಳುವ ವಲಸೆ ಕಾರ್ಮಿಕರಿಗೆ ಉಚಿತ ಆಹಾರ, ವಸತಿ ನೀಡಿ: ಮಾಯಾ ಆಗ್ರಹ

ಕೊರೊನಾ ಸೋಂಕು ಹೆಚ್ಚಾಗುತ್ತಿರುವಾಗ ಸ್ವಂತ ಊರುಗಳಿಗೆ ಮರಳುವ ವಲಸೆ ಕಾರ್ಮಿಕರಿಗೆ ಸರ್ಕಾರಗಳು ಉಚಿತ ಆಹಾರ ಮತ್ತು ವಸತಿ ವ್ಯವಸ್ಥೆ ಮಾಡಬೇಕು ಎಂದು ಬಿಎಸ್​ಪಿ ನಾಯಕಿ ಮಾಯಾವತಿ ಮನವಿ ಮಾಡಿದ್ದಾರೆ.

Mayawati
ಬಿಎಸ್​ಪಿ ನಾಯಕಿ ಮಾಯಾವತಿ
author img

By

Published : Apr 14, 2021, 8:28 PM IST

ಲಖನೌ(ಉತ್ತರಪ್ರದೇಶ): ಕೊರೊನಾ ಹೆಚ್ಚಳದ ಮಧ್ಯೆ ಸ್ವಂತ ಊರುಗಳಿಗೆ ಮರಳುವ ವಲಸೆ ಕಾರ್ಮಿಕರಿಗೆ ಉಚಿತ ಆಹಾರ ಮತ್ತು ವಸತಿ ವ್ಯವಸ್ಥೆ ಮಾಡುವಂತೆ ಬಹುಜನ ಸಮಾಜ ಪಕ್ಷದ (ಬಿಎಸ್​​​​ಪಿ) ಮುಖ್ಯಸ್ಥೆ ಮಾಯಾವತಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮಾಯಾವತಿ, ವಲಸೆ ಕಾರ್ಮಿಕರು ಮತ್ತು ಕಾರ್ಮಿಕರ ನೆರವಿಗೆ ಕೇಂದ್ರ, ರಾಜ್ಯ ಸರ್ಕಾರಗಳು ಧಾವಿಸಬೇಕು. ಏಪ್ರಿಲ್ 11 ರಿಂದ ಪ್ರಾರಂಭಿಸಲಾಗಿರುವ 'ಟಿಕಾ ಉತ್ಸವ' ಎಂಬ ವಿಶೇಷ ವ್ಯಾಕ್ಸಿನೇಷನ್ ಡ್ರೈವ್​ ಆಯೋಜಿಸುವ ಕೇಂದ್ರದ ಕ್ರಮ ಶ್ಲಾಘಿಸಿದರು. ಆದರೆ, ಕೇಂದ್ರವು ಬಡವರಿಗೆ ಉಚಿತವಾಗಿ ಲಸಿಕೆ ಹಾಕಿದ್ದರೆ ಚೆನ್ನಾಗಿತ್ತು. "ಲಸಿಕೆಗಳ ಕುರಿತು ಜನರಿಗೆ ಮನವರಿಕೆ ಮಾಡಿಕೊಡುವುದು ಒಳ್ಳೆಯದು ಎಂದರು.

ಇನ್ನೂ ಡಾ.ಬಿ.ಆರ್ ಅಂಬೇಡ್ಕರ್ 130 ನೇ ಜನ್ಮ ದಿನಾಚರಣೆ ಹಿನ್ನೆಲೆ ಮಾಯಾವತಿ ಗೌರವ ಸಲ್ಲಿಸಿದರು. ಕೊರೊನಾದಿಂದಾಗಿ ಅಂಬೇಡ್ಕರ್ ಜಯಂತಿಯನ್ನು ಸರಳವಾಗಿ ಆಚರಿಸಲಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.