ನವದೆಹಲಿ: ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ 12 ಗಂಟೆಗಳ ಕಾಲ 'ಭಾರತ್ ಬಂದ್'ಗೆ ದೇಶದ ವಿವಿಧೆಡೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ಹರಿಯಾಣದ ಅಂಬಾಲ ಬಳಿಯ ಶಹಪುರ ರೈಲು ಹಳಿ ನಿರ್ಬಂಧಿಸಿ ಪ್ರತಿಭಟನೆ ನಡೆಸಲಾಗ್ತಿದೆ. ಪ್ರತಿಭಟನಾಕಾರರು ಜಿಟಿ ರಸ್ತೆಯನ್ನು ಸಹ ಬಂದ್ ಮಾಡಿ ರಸ್ತೆಯಲ್ಲೇ ಕುಳಿತು ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಆಗ್ರಹಿಸುತ್ತಿದ್ದಾರೆ. ಇನ್ನು ಘಾಜಿಪುರ, ಸಿಂಘು ಗಡಿ ಸೇರಿದಂತೆ ಪ್ರಮುಖ ಕಡೆಗಳಲ್ಲಿ ಪ್ರತಿಭಟನಾಕಾರರು ರಸ್ತೆ ಮತ್ತು ರೈಲ್ವೆ ಹಳಿಗಳನ್ನು ನಿರ್ಬಂಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕೇಂದ್ರ ಜಾರಿಗೆ ತಂದಿರುವ ಹೊಸ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಒತ್ತಾಯಿಸಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ಆರಂಭವಾಗಿ ನಾಲ್ಕು ತಿಂಗಳು ಕಳೆಯುತ್ತಿರುವ ಹಿನ್ನೆಲೆ ಭಾರತ್ ಬಂದ್ಗೂ ಕರೆ ನೀಡಲಾಗಿದೆ. ಬೆಳಗ್ಗೆ 6ರಿಂದ ಸಂಜೆ 6ರವರೆಗೆ 12 ಗಂಟೆಗಳ ಕಾಲ ಸಂಯುಕ್ತ ಕಿಸಾನ್ ಮೋರ್ಚಾ'ಭಾರತ್ ಬಂದ್' ನಡೆಸುವಂತೆ ಕರೆ ನೀಡಿದೆ.
ಇದನ್ನೂ ಓದಿ: ಮುಂದಿನ 6 ತಿಂಗಳು ಯುಕೆಯಲ್ಲಿ ಕಠಿಣ ಕೋವಿಡ್ ನಿಯಮ ವಿಸ್ತರಣೆ