ETV Bharat / bharat

ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್‌ನ ಖಾಸಗೀಕರಣ: ತೀವ್ರ ಸ್ವರೂಪ ಪಡೆದ ಪ್ರತಿಭಟನೆ

author img

By

Published : Feb 12, 2021, 4:40 PM IST

ವಿಶಾಖ ಉಕ್ಕಿನ ಉದ್ಯಮ ಅನೇಕ ಹೋರಾಟಗಳಿಂದ ಹುಟ್ಟಿದ್ದು, ಈ ಉದ್ಯಮ 6,000 ಕೋಟಿ ಆದಾಯವನ್ನು ಹೊಂದಿದೆ. ಕೊರೊನಾ ಹಿನ್ನೆಲೆಯಲ್ಲಿ ನಷ್ಟಗಳು ಸಂಭವಿಸಿರಬಹುದು ಆದರೆ, ಇದೇ ಕಾರಣಕ್ಕೆ ಖಾಸಗೀಕರಣವು ಸರಿಯಲ್ಲ ಎಂದು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ನಾರಾಯಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Protest mount agaisnt  privatization of vishakapatnam steel plant
ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್‌ನ ಖಾಸಗೀಕರಣವನ್ನು ವಿರೋಧಿಸಿ

ವಿಶಾಖಪಟ್ಟಣ : ವಿಶಾಖಪಟ್ಟಣದ ಉಕ್ಕಿನ ಸ್ಥಾವರ ಖಾಸಗೀಕರಣದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಲಾಗುತ್ತಿದೆ.

ಉಕ್ಕಿನ ಸ್ಥಾವರ ಕಾರ್ಮಿಕರ ಸಂಘಟನೆಗಳು ಕುರ್ಮನ್​ಪಲೆಂ ಗೇಟ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿವೆ. ಇದಕ್ಕೆ ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ನಾರಾಯಣ, ಸಚಿವ ಮುತ್ತಂಸೆಟ್ಟಿ ಶ್ರೀನಿವಾಸ ರಾವ್ ಮತ್ತು ವಿವಿಧ ಕಾರ್ಮಿಕ ಸಂಘಗಳ ಮುಖಂಡರು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ತಾಯಿಯನ್ನು ರಕ್ಷಿಸುವ ಜವಾಬ್ದಾರಿ ಎಷ್ಟಿದೆಯೋ ಅಷ್ಟೇ ಈ ಸ್ಥಾವರ ರಕ್ಷಿಸುವ ಜವಾಬ್ದಾರಿಯೂ ಇದೆ. ಸಾವಿರಾರು ಎಕರೆ ಭೂಮಿಯನ್ನು ಲೂಟಿ ಮಾಡಲು ಉಕ್ಕಿನ ಸ್ಥಾವರವನ್ನು ಖಾಸಗೀಕರಣಗೊಳಿಸಲಾಗುತ್ತಿದೆ. ನಾವು ವಿಶಾಖ ಉಕ್ಕಿನ ಸ್ಥಾವರವನ್ನು ರಕ್ಷಿಸಿದರೆ ಅದು ರಾಜ್ಯದ ಪ್ರತಿಷ್ಠೆಯನ್ನು ಉಳಿಸುವುದಕ್ಕೆ ಸಮವಾಗುತ್ತದೆ ಎಂದು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ನಾರಾಯಣ ಹೇಳಿದ್ದಾರೆ.

ವಿಶಾಖ ಉಕ್ಕಿನ ಉದ್ಯಮ ಅನೇಕ ಹೋರಾಟಗಳಿಂದ ಹುಟ್ಟಿದ್ದು, ಈ ಉದ್ಯಮ 6,000 ಕೋಟಿ ಆದಾಯವನ್ನು ಹೊಂದಿದೆ. ಕೊರೊನಾ ಹಿನ್ನೆಲೆಯಲ್ಲಿ ನಷ್ಟಗಳು ಸಂಭವಿಸಿರಬಹುದು ಆದರೆ, ಇದೇ ಕಾರಣಕ್ಕೆ ಖಾಸಗೀಕರಣವು ಸರಿಯಲ್ಲ. ನಾವು ಪೊಸ್ಕೊವನ್ನು ಇಲ್ಲಿಗೆ ಅನುಮತಿಸುವುದಿಲ್ಲ. ನಗರದ ಹೃದಯಭಾಗದಲ್ಲಿ ಆಕ್ರಮಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಇದು ಜನರ ಆಸ್ತಿ. ಇದನ್ನು ಖಾಸಗೀಕರಣಗೊಳಿಸುವ ಹಕ್ಕು ಯಾವುದೇ ಪ್ರಧಾನಿ ಅಥವಾ ಮುಖ್ಯಮಂತ್ರಿಗೆ ಇಲ್ಲ. ಈ ವಿಷಯದಲ್ಲಿ ವೈಎಸ್‌ಆರ್‌ಸಿಪಿ ಪರವಾಗಿ ಯಾವುದೇ ಹೋರಾಟಕ್ಕೆ ನಾವು ಸಿದ್ಧರಿದ್ದೇವೆ. ರಾಜೀನಾಮೆ ಸಮಸ್ಯೆಗೆ ಪರಿಹಾರವಲ್ಲ. ಪವನ್ ಕಲ್ಯಾಣ್ ಅವರು ಚಳವಳಿಯನ್ನು ಬೆಂಬಲಿಸಬೇಕು ಎಂದು ಸಚಿವ ಅವಂತಿ ಶ್ರೀನಿವಾಸ ರಾವ್ ಆಗ್ರಹ ಮಾಡಿದ್ದಾರೆ.

ತೀವ್ರ ಸ್ವರೂಪ ಪಡೆದ ಪ್ರತಿಭಟನೆ

ಉಪವಾಸ ಸತ್ಯಾಗ್ರಹ

ಗಜುವಾಕಾದಲ್ಲಿ ಟಿಡಿಪಿ ನಾಯಕ ಪಲ್ಲಾ ಶ್ರೀನಿವಾಸ ರಾವ್ ಅವರ ಉಪವಾಸ ಮುಷ್ಕರ ಮೂರನೇ ದಿನವೂ ಮುಂದುವರೆದಿದೆ. ಪಲ್ಲಾ ಶ್ರೀನಿವಾಸ ರಾವ್ ಅವರು ಉಕ್ಕಿನ ಘಟಕವನ್ನು ಖಾಸಗೀಕರಣಗೊಳಿಸುವ ನಿರ್ಧಾರದ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಟಿಡಿಪಿ ನಾಯಕರೊಂದಿಗೆ ಕಾರ್ಮಿಕ ವರ್ಗದ ಪ್ರತಿನಿಧಿಗಳು ಒಗ್ಗಟ್ಟು ವ್ಯಕ್ತಪಡಿಸುತ್ತಿದ್ದಾರೆ.

ಟಿಡಿಪಿ ರಾಜ್ಯ ಅಧ್ಯಕ್ಷ ಅಚೆನ್ನೈಡು ಪಲ್ಲಾ ಶ್ರೀನಿವಾಸ ರಾವ್ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಯಾವುದೇ ಸಂದರ್ಭದಲ್ಲೂ ಖಾಸಗೀಕರಣವನ್ನು ಒಪ್ಪಲಾಗುವುದಿಲ್ಲ. ಖಾಸಗೀಕರಣದ ಬಗ್ಗೆ ಕೇಂದ್ರವು ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕೆಂದು ಅಚೆನೈದು ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.