ETV Bharat / bharat

ಅಪರಿಚಿತ ವ್ಯಕ್ತಿಗಳಿಂದ ಪ್ರಾಪರ್ಟಿ ಡೀಲರ್​ ಮೇಲೆ ಗುಂಡಿನ ದಾಳಿ; ವ್ಯಕ್ತಿ ಸ್ಥಳದಲ್ಲೇ ಸಾವು - ಅಪರಿಚಿತ ಹಲ್ಲೆಕೋರರು

ಆಸ್ತಿ ವಿವಾದ ಹಾಗೂ ಹಣಕಾಸಿನ ವ್ಯವಹಾರ ಹಿನ್ನೆಲೆ ವ್ಯಕ್ತಿಯೊಬ್ಬನ ಮೇಲೆ ಗುಂಡು ಹಾರಿಸಲಾಗಿದೆ. ಮೃತ ವ್ಯಕ್ತಿಯ ಸಂಬಂಧಿಕರು ಆರೋಪಿಗಳನ್ನು ಬಂಧಿಸುವಂತೆ ಶವದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

Property dealer out on morning walk shot dead in Lucknow
ಅಪರಿಚಿತ ವ್ಯಕ್ತಿಗಳಿಂದ ಪ್ರಾಪರ್ಟಿ ಡೀಲರ್​ ಮೇಲೆ ಗುಂಡಿನ ದಾಳಿ
author img

By

Published : Nov 3, 2020, 5:24 PM IST

ಲಕ್ನೋ: ಸ್ಕಾರ್ಪಿಯೋ ಕಾರಿನಲ್ಲಿ ಬಂದ ಅಪರಿಚಿತ ಹಲ್ಲೆಕೋರರು ಪ್ರಾಪರ್ಟಿ ಡೀಲರ್ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಗುಂಡಿನ ದಾಳಿ ನಡೆಸಿ ಕೊಂದು ಪರಾರಿಯಾದ ಘಟನೆ ನಡೆದಿದೆ.

ಬ್ಲಾಕ್ ಡೆವಲಪ್‌ಮೆಂಟ್ ಕೌನ್ಸಿಲ್ (ಬಿಡಿಸಿ) ಸದಸ್ಯ ವಿಜಯ್ ಪ್ರತಾಪ್ ದಾಳಿಗೊಳಗಾದ ವ್ಯಕ್ತಿ. ವಿಜಯ್ ಪ್ರತಾಪ್ ಇಂದು ಬೆಳಗ್ಗೆ ವಾಕ್​ ಮಾಡಲೆಂದು ಮನೆಯಿಂದ ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ಅಪರಿಚಿತ ದುರುಳರು ಅವರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ.

ಗುಂಡು ತಿಂದ ವಿಜಯ್ ಪ್ರತಾಪ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಸ್ತಿ ವಿವಾದ ಹಾಗೂ ಹಣಕಾಸಿನ ವ್ಯವಹಾರ ಹಿನ್ನೆಲೆ ಈ ದಾಳಿ ನಡೆದಿದೆ ಎನ್ನಲಾಗುತ್ತಿದ್ದು ಮೃತ ವ್ಯಕ್ತಿಯ ಸಂಬಂಧಿಕರು ಆರೋಪಿಗಳನ್ನು ಬಂಧಿಸುವಂತೆ ಶವದ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಮನೋಜ್ ಯಾದವ್ ಎಂಬ ವ್ಯಕ್ತಿ ಈ ಕೊಲೆಯ ಹಿಂದಿನ ರೂವಾರಿಯಾಗಿದ್ದು ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿ ಮೃತ ದೇಹದೊಂದಿಗೆ ಪೋಷಕರು ಧರಣಿ ಕುಳಿತಿದ್ದಾರೆ. ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.