ETV Bharat / bharat

ಸ್ನೇಹಿತರ ಸಲಹೆಯಂತೆ ಶೀತ ಹೋಗಿಸಲು ಕುಡಿತ:  ರಸ್ತೆಯಲ್ಲಿ ರಂಪಾಟ  ಮಾಡಿದ ಪ್ರೊಫೇಸರ್​ ಅಂದರ್​​​

ನಾಸಿಕ್ ನಲ್ಲಿ​ ಬ್ರಾಂಡಿ ಕುಡಿದು ವಾಹನ ಚಲಾಯಿಸಿ ಐದರಿಂದ ಆರು ಜನರಿಗೆ ಡಿಕ್ಕಿ ಹೊಡೆದು ಗಾಯಗೊಳಿಸಿದ ಪ್ರೊಫೇಸರ್ ಒಬ್ಬರನ್ನು ಮುಂಬೈನ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

professor who drove the car recklessly sent jail
ಬ್ರಾಂದಿ ಕುಡಿದು ರಸ್ತೆಯಲ್ಲಿ ಹಾವಳಿ ಮಾಡಿದ ಪ್ರೊಫೆಸರ್
author img

By

Published : Nov 21, 2022, 5:30 PM IST

ನಾಸಿಕ್(ಮಹಾರಾಷ್ಟ್ರ): ​ಅಜಾಗರೂಕತೆಯಿಂದ ಕಾರು ಚಲಾಯಿಸಿ ಹಲವರಿಗೆ ಡಿಕ್ಕಿ ಹೊಡೆದು ಗಾಯಗೊಳಿಸಿದ ಪ್ರೊಫೇಸರ್ ಒಬ್ಬರನ್ನು ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ನಾಸಿಕ್​ನ ಕಾಲೇಜೊಂದರಲ್ಲಿ ಪ್ರೊಫೇಸರ್ ಆಗಿರುವ ಸಾಹೇಬ್ ರಾವ್ ನಿಕಮ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಸ್ನೇಹಿತರ ಕ್ರೇಜಿ ಸಲಹೆಯಿಂದ ಎಡವಟ್ಟು ಮಾಡಿಕೊಂಡ ಪ್ರೊಪೇಸರ್​: ಸಾಹೇಬ್ ರಾವ್ ನಿಕಮ್ ಅವರು ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರು. ಶೀತ, ಕೆಮ್ಮು ಕಡಿಮೆಯಾಗಲು ಬ್ರಾಂಡಿ ಕುಡಿಯಲು ಯಾರೋ ಅವರಿಗೆ ಸಲಹೆ ನೀಡಿದ್ದರಂತೆ. ಇದುವರೆಗೂ ವೀಳ್ಯದೆಲೆಯನ್ನು ಸಹ ತಿನ್ನದ ಪ್ರೊಫೇಸರ್ ನೇರವಾಗಿ ನೀರಿನಂತೆ ಬ್ರಾಂಡಿಯನ್ನು ಕುಡಿದು ವಾಹನ ಚಲಾಯಿಸಿ ಐದರಿಂದ ಆರು ಜನರಿಗೆ ಅಪಘಾತ ಮಾಡಿದ್ದಾರೆ. ಈ ಸಲಹೆಯ ಕಾರಣದಿಂದಾಗಿ ಪ್ರೊಫೇಸರ್ ಈಗ ಕೆಲಸವನ್ನು ಸಹ ಕಳೆದುಕೊಂಡಿದ್ದಾರೆ.

ಪ್ರೊಫೇಸರ್ ಕಾರು ಮೊದಲು ಸಬರ್ಬನ್ ನಾಕಾದಲ್ಲಿ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಭಯಗೊಂಡು ಕಾರನ್ನು ಹೆಚ್ಚಿನ ವೇಗದಲ್ಲಿ ಓಡಿಸಿದ್ದಾರೆ, ಇದರಿಂದ ನಿಯಂತ್ರಣದ ತಪ್ಪಿದ ಕಾರು ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಮುಂಭಾಗದ ಟೈರ್ ಸ್ಫೋಟಗೊಂಡಿದೆ. ಅತಿ ವೇಗದಲ್ಲಿ ಚಾಲನೆ ಮಾಡುವಾಗ ನಾಲ್ಕರಿಂದ ಐದು ದ್ವಿಚಕ್ರ ವಾಹನಗಳಿಗೆ ಪ್ರೊಫೇಸರ್​ ಡಿಕ್ಕಿ ಕೂಡಾ ಹೊಡೆದಿದ್ದಾರೆ.

ಈ ಘಟನೆಯಲ್ಲಿ ಒಬ್ಬರು ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾರೆ. ಈ ಸಂಬಂಧ ಮುಂಬೈ ನಾಕಾ ಪೊಲೀಸ್ ಠಾಣೆಯಲ್ಲಿ ಸಾಹೇಬ್ ರಾವ್ ನಿಕಮ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎರಡು ದಿನಗಳ ನಂತರ ಸಾಹೇಬ್ ರಾವ್ ಗುಣಮುಖರಾಗಿದ್ದಾರೆ. ತಕ್ಷಣ ಅವರನ್ನು ಜಿಲ್ಲಾ ಆಸ್ಪತ್ರೆಯಿಂದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಅವರನ್ನು ಕೇಂದ್ರ ಕಾರಾಗೃಹಕ್ಕೆ ಕಳುಹಿಸುವಂತೆ ಸೂಚಿಸಿದೆ.

ಇದನ್ನೂ ಓದಿ:ಹೆಂಡತಿಯ ತಲೆಗೆ ಬಾಣಲೆಯಿಂದ ಹೊಡೆದು ಕೊಲೆ: ಠಾಣೆಗೆ ತೆರಳಿ ಶರಣಾದ ಪತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.