ETV Bharat / bharat

WhatsApp​ನಲ್ಲೇ ವ್ಯಾಕ್ಸಿನೇಷನ್ ಸ್ಲಾಟ್‌ ಬುಕ್​ ಮಾಡಲು ಇಲ್ಲಿದೆ ಸರಳ ವಿಧಾನ.. - CoWin portal

ಈ ಹಿಂದೆ ವಾಟ್ಸ್‌ಆ್ಯಪ್(WhatsApp)​​ ಮೂಲಕ ವ್ಯಾಕ್ಸಿನೇಷನ್‌ ಸರ್ಟಿಫಿಕೇಟ್ ಪಡೆಯುವ ಅವಕಾಶ ನೀಡಿದ್ದ ಕೇಂದ್ರ ಆರೋಗ್ಯ ಸಚಿವಾಲಯ ಇದೀಗ ವಾಟ್ಸ್‌ಆ್ಯಪ್​ನಲ್ಲೇ ವ್ಯಾಕ್ಸಿನೇಷನ್ ಸ್ಲಾಟ್‌ಗಳನ್ನು ಬುಕ್ ಮಾಡುವ ವ್ಯವಸ್ಥೆಯನ್ನೂ ಕಲ್ಪಿಸಿದೆ.

book vaccination slots on WhatsApp
ವಾಟ್ಸ್‌ಆ್ಯಪ್​ನಲ್ಲೇ ವ್ಯಾಕ್ಸಿನೇಷನ್ ಸ್ಲಾಟ್‌ ಬುಕ್​ ಮಾಡಿ
author img

By

Published : Aug 24, 2021, 1:13 PM IST

ನವದೆಹಲಿ: ನೀವೀಗ ಕೋವಿನ್ (CoWin) ಪೋರ್ಟಲ್​ನಲ್ಲಿಯೇ ಕೋವಿಡ್​ ವ್ಯಾಕ್ಸಿನೇಷನ್ ಸ್ಲಾಟ್‌ಗಳನ್ನು ಬುಕ್ ಮಾಡುವ ಅವಶ್ಯಕತೆಯಿಲ್ಲ. ಕೋವಿನ್ ಪೋರ್ಟಲ್​ನಲ್ಲಿ ಕೆಲ ದೋಷಗಳು ಇರುವುದರಿಂದ ಜನರಿಗೆ ಬುಕಿಂಗ್​ ವಿಧಾನ ಸರಳವಾಗಲೆಂದು ಕೇಂದ್ರ ಆರೋಗ್ಯ ಸಚಿವಾಲಯವು ಕೋವಿನ್ ಪೋರ್ಟಲ್​ ಜೊತೆಗೆ ವಾಟ್ಸ್‌ಆ್ಯಪ್​(WhatsApp)ನಲ್ಲೂ ಕೂಡ ಲಸಿಕೆಗೆ ಹೆಸರು ನೋಂದಾಯಿಸಿಕೊಂಡು, ಸ್ಥಳ-ಸಮಯ ನಿಗದಿ ಮಾಡಿಕೊಳ್ಳುವ ಅವಕಾಶ ಕಲ್ಪಿಸಿದೆ.

ವಾಟ್ಸ್‌ಆ್ಯಪ್​ನಲ್ಲಿ ವ್ಯಾಕ್ಸಿನೇಷನ್ ಸ್ಲಾಟ್‌ ಬುಕ್​ ಮಾಡಲು ಈ ವಿಧಾನ ಅನುಸರಿಸಿ:

> http://wa.me/919013151515 ---ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಥವಾ ವೆಬ್ ಬ್ರೌಸರ್‌ನಲ್ಲಿ ಈ ಲಿಂಕ್ ಅನ್ನು ಟೈಪ್ ಮಾಡಿ

> ಬಳಿಕ ‘Go to chat’ ಅಥವಾ ‘Continue to chat’ ಎಂದು ಹಸಿರು ಬಣ್ಣದಲ್ಲಿನ ಅಕ್ಷರದ ಮೇಲೆ ಕ್ಲಿಕ್ ಮಾಡಿ

> 'Book Slot' ಮೇಲೆ ಕ್ಲಿಕ್​ ಮಾಡಿ

> ನಿಮ್ಮ ಮೊಬೈಲ್​ ಸಂಖ್ಯೆಗೆ ಬರುವ 6 ಸಂಖ್ಯೆಗಳ OTP ನಮೂದಿಸಿ

> ಕೋವಿನ್ ಪೋರ್ಟಲ್​ಗೆ ರಿಜಿಸ್ಟರ್​ ಆದ ಫಲಾನುಭವಿಗಳ ಪಟ್ಟಿಯನ್ನು ನೀವು ಸ್ವೀಕರಿಸುತ್ತೀರಿ

> ಮುಂದುವರಿಯಲು ನೀವು ಸದಸ್ಯರನ್ನು ಆಯ್ಕೆ ಮಾಡಿ

> ಚಾಟ್‌ಬಾಟ್ ಕಳುಹಿಸುವ ಸೂಚನೆಗಳನ್ನು ಅನುಸರಿಸಿದರೆ ನಿಮ್ಮ ಬುಕಿಂಗ್​ ಪ್ರಕ್ರಿಯೆ ಮುಗಿಯುತ್ತದೆ

> ಬಳಿಕ ಚಾಟ್‌ಬಾಟ್ ನಿಮಗೆ ಅಪಾಯಿಂಟ್‌ಮೆಂಟ್ ಲೆಟರ್ ಕಳುಹಿಸುತ್ತದೆ

> ಫಲಾನುಭವಿಗಳನ್ನು ಸೇರಿಸಲು, ನೀವು https://www.cowin.gov.in/ ಗೆ ಭೇಟಿ ನೀಡಬಹುದು

ಇದನ್ನೂ ಓದಿ: ವಾಟ್ಸ್‌ಆ್ಯಪ್​ ಇದ್ರೆ ಕೋವಿಡ್ ವ್ಯಾಕ್ಸಿನೇಷನ್‌ ಸರ್ಟಿಫಿಕೇಟ್ ಪಡೆಯೋದು ಸುಲಭ..

ಜನವರಿ 16 ರಿಂದ ಭಾರತದಾದ್ಯಂತ ಲಸಿಕಾ ಅಭಿಯಾನ ಆರಂಭವಾಗಿದ್ದು, ಇಲ್ಲಿಯವರೆಗೆ 58.82 ಕೋಟಿ ಡೋಸ್​ಗಳನ್ನು ನೀಡಲಾಗಿದೆ. ಈ ಹಿಂದೆ ಆರೋಗ್ಯ ಇಲಾಖೆಯು ವಾಟ್ಸ್‌ಆ್ಯಪ್​​ ಮೂಲಕ ವ್ಯಾಕ್ಸಿನೇಷನ್‌ ಸರ್ಟಿಫಿಕೇಟ್ ಪಡೆಯುವ ವ್ಯವಸ್ಥೆಯನ್ನೂ ಕಲ್ಪಿಸಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.