ನವದೆಹಲಿ: ಉತ್ತರಪ್ರದೇಶದ ಗೋಶಾಲೆಯೊಂದರ ನೂರಕ್ಕೂ ಅಧಿಕ ಗೋವುಗಳನ್ನು ಜೀವಂತವಾಗಿ ಸಮಾಧಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಪ್ರಶ್ನಿಸುತ್ತೀರಾ? ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸವಾಲು ಹಾಕಿದ್ದಾರೆ.
-
..@myogiadityanath जी, आपकी सरकार के प्रशासन ने बांदा में सैकड़ों जिंदा गायों को दफना दिया। आपकी सरकार में गौशालाओं में गौ माता क्रूरता व अमानवीयता का शिकार हैं।@narendramodi जी आज आप उप्र में हैं। क्या आप गौशालाओं की दुर्दशा पर उप्र सरकार से जवाबदेही मांगेंगे? pic.twitter.com/hovmTpUWIl
— Priyanka Gandhi Vadra (@priyankagandhi) December 13, 2021 " class="align-text-top noRightClick twitterSection" data="
">..@myogiadityanath जी, आपकी सरकार के प्रशासन ने बांदा में सैकड़ों जिंदा गायों को दफना दिया। आपकी सरकार में गौशालाओं में गौ माता क्रूरता व अमानवीयता का शिकार हैं।@narendramodi जी आज आप उप्र में हैं। क्या आप गौशालाओं की दुर्दशा पर उप्र सरकार से जवाबदेही मांगेंगे? pic.twitter.com/hovmTpUWIl
— Priyanka Gandhi Vadra (@priyankagandhi) December 13, 2021..@myogiadityanath जी, आपकी सरकार के प्रशासन ने बांदा में सैकड़ों जिंदा गायों को दफना दिया। आपकी सरकार में गौशालाओं में गौ माता क्रूरता व अमानवीयता का शिकार हैं।@narendramodi जी आज आप उप्र में हैं। क्या आप गौशालाओं की दुर्दशा पर उप्र सरकार से जवाबदेही मांगेंगे? pic.twitter.com/hovmTpUWIl
— Priyanka Gandhi Vadra (@priyankagandhi) December 13, 2021
ಉತ್ತರಪ್ರದೇಶದ ಬಂಡಾ ಎಂಬಲ್ಲಿನ ಗೋಶಾಲೆಯ ಗೋವು ಮತ್ತು ಇತರ ಪ್ರಾಣಿಗಳನ್ನು ಜೀವಂತವಾಗಿ ಸಮಾಧಿ ಮಾಡಲಾಗಿದೆ ಎಂಬ ಮಾಧ್ಯಮ ವರದಿಯ ಆಧಾರದ ಮೇಲೆ ಟ್ವೀಟ್ ಮಾಡಿರುವ ಪ್ರಿಯಾಂಕಾ ಗಾಂಧಿ ' ನರೇಂದ್ರ ಮೋದಿ ಅವರೇ ನೀವೀಗ ಉತ್ತರ ಪ್ರದೇಶದಲ್ಲಿದೀರಿ. ಅಲ್ಲಿಯೇ ನಡೆದ ಗೋವುಗಳ ಮಾರಣ ಹೋಮದ ಬಗ್ಗೆ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಪ್ರಶ್ನಿಸಬಲ್ಲಿರಾ?. ಅಲ್ಲದೇ, ಉತ್ತರಪ್ರದೇಶದಲ್ಲಿ ಗೋಶಾಲೆಗಳ ಸ್ಥಿತಿಗತಿ ಬಗ್ಗೆ ಉತ್ತರ ಪಡೆದುಕೊಳ್ಳಬಲ್ಲಿರಾ ಎಂದು ಪ್ರಶ್ನಿಸಿದ್ದಾರೆ.
ಇದಲ್ಲದೇ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಟ್ಯಾಗ್ ಮಾಡಿ 'ನಿಮ್ಮ ಸರ್ಕಾರ ಬಂಡಾದಲ್ಲಿ ನೂರಾರು ಗೋವುಗಳನ್ನು ಜೀವಂತವಾಗಿ ಸಮಾಧಿ ಮಾಡಿದೆ. ಗೋವುಗಳ ಮೇಲೆ ಕ್ರೌರ್ಯ ಮೆರೆದಿದ್ದಲ್ಲದೇ ಅಮಾನವೀಯವಾಗಿ ಹರಣ ಮಾಡಲಾಗಿದೆ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆರೋಪಿಸಿದ್ದಾರೆ.
ಉತ್ತರಪ್ರದೇಶದ ನರೈನಿಯಲ್ಲಿರುವ ತಾತ್ಕಾಲಿಕ ಗೋಶಾಲೆಯ 134 ಗೋವುಗಳನ್ನು ಬೇರೆಡೆಯ ಗೋಶಾಲೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಬಂಡಾ ಜಿಲ್ಲಾಧಿಕಾರಿ ಅನುರಾಗ್ ಪಟೇಲ್ ತಿಳಿಸಿದ್ದರು.
ಆದರೆ, ಮಧ್ಯಪ್ರದೇಶದ ಕಾಡಿನಲ್ಲಿ ಗೋವು ಮತ್ತು ಇತರ ಪ್ರಾಣಿಗಳನ್ನು ಜೀವಂತವಾಗಿ ಸಮಾಧಿ ಮಾಡಲಾಗಿದೆ ಎಂದು ಅಲ್ಲಿನ ಪತ್ರಿಕೆಯೊಂದು ವರದಿ ಮಾಡಿತ್ತು. ಆರೋಪಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶ ಸರ್ಕಾರ ಅಧಿಕಾರಿಯೊಬ್ಬರನ್ನು ಅಮಾನತು ಮಾಡಿದೆ ಎಂದು ತಿಳಿದು ಬಂದಿದೆ.