ನವದೆಹಲಿ: ಶ್ರೀ ರಾಮ್ ಜನಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಸಂಬಂಧಿಸಿದ ಭೂ ವ್ಯವಹಾರದಲ್ಲಿ ಭ್ರಷ್ಟಾಚಾರ ಆರೋಪದ ಬಗ್ಗೆ ಸುಪ್ರೀಂಕೋರ್ಟ್ ತನ್ನ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಒತ್ತಾಯಿಸಿದ್ದಾರೆ.
ಒಬ್ಬ ವ್ಯಕ್ತಿಯಿಂದ 2 ಕೋಟಿ ರೂ.ಗೆ ಭೂಮಿ ಖರೀದಿಸಿ ಅದನ್ನು ಕೆಲವೇ ನಿಮಿಷಗಳ ನಂತರ ಟ್ರಸ್ಟ್‌ಗೆ 18.5 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ. ಈ ಎಲ್ಲ ಹಣವನ್ನು ದೇವಾಲಯದ ನಿರ್ಮಾಣಕ್ಕಾಗಿ ದೇಣಿಗೆ ರೂಪದಲ್ಲಿ ಭಾರತದ ಜನರು ಹಣ ನೀಡಿದ್ದು, ಇದನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.
ಶ್ರೀ ರಾಮ್ ಮಂದಿರ ನಿರ್ಮಾಣ ಟ್ರಸ್ಟ್ ಅನ್ನು ಪ್ರಧಾನಿ ಮೋದಿಯೇ ರಚಿಸಿ ಅದಕ್ಕೆ ತಮ್ಮ ಆಪ್ತರನ್ನೇ ಟ್ರಸ್ಟಿಗಳನ್ನಾಗಿ ಮಾಡಿದ್ದಾರೆ. ಭಗವಾನ್ ಶ್ರೀರಾಮನ ಹೆಸರಿನಲ್ಲಿ ಭಕ್ತರು ನೀಡುವ ಪ್ರತಿಯೊಂದು ಪೈಸೆ ನಂಬಿಕೆಗೆ ಸಂಬಂಧಿಸಿದ ಸಾಮೂಹಿಕ ಕೆಲಸದಲ್ಲಿ ಬಳಸಬೇಕೇ ಹೊರತು ಯಾವುದೇ ಹಗರಣದಲ್ಲಿ ಬಳಸಬಾರದು ಎಂದು ಟೀಕಿಸಿದ್ದಾರೆ.
ಓದಿ:ಅರುಣ್ ಸಿಂಗ್ ನೇತೃತ್ವದಲ್ಲಿ ಬಿಜೆಪಿ ನಾಯಕರ ಸಭೆ ; ಸಚಿವ ಯೋಗೇಶ್ವರ್ ಗೈರು