ರಾಯಪುರ/ ಖೈರಾಗಢ: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು (ಅಕ್ಟೋಬರ್ 30 ರಂದು) ಛತ್ತೀಸಗಢ ಮತದಾರರಿಗೆ ಭರಪೂರ ಚುನಾವಣಾ ಭರವಸೆಗಳನ್ನು ಘೋಷಣೆ ಮಾಡಿದ್ದಾರೆ. ವಿಧಾನಸಭಾ ಚುನಾವಣೆಯ ನಂತರ ತಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ಸ್ವಸಹಾಯ ಗುಂಪುಗಳ ಸಾಲ ಮನ್ನಾ ಮಾಡುವುದಾಗಿ, ಅಡುಗೆ ಅನಿಲ ಸಿಲಿಂಡರ್ಗಳ ಮೇಲೆ ಸಬ್ಸಿಡಿ ನೀಡುವುದಾಗಿ ಮತ್ತು ರಸ್ತೆ ಅಪಘಾತಗಳಿಗೆ ಒಳಗಾದವರಿಗೆ ಉಚಿತ ಚಿಕಿತ್ಸೆ ನೀಡುವುದು ಸೇರಿದಂತೆ ಹಲವಾರು ಭರವಸೆಗಳನ್ನು ಘೋಷಿಸಿದ್ದಾರೆ.
-
LIVE: कांग्रेस महासचिव श्रीमती @priyankagandhi जी की विशाल जनसभा, जालबांधा #फिर_से_कांग्रेस_लाएंगे https://t.co/hmO4QhpsPx
— Bhupesh Baghel (@bhupeshbaghel) October 30, 2023 " class="align-text-top noRightClick twitterSection" data="
">LIVE: कांग्रेस महासचिव श्रीमती @priyankagandhi जी की विशाल जनसभा, जालबांधा #फिर_से_कांग्रेस_लाएंगे https://t.co/hmO4QhpsPx
— Bhupesh Baghel (@bhupeshbaghel) October 30, 2023LIVE: कांग्रेस महासचिव श्रीमती @priyankagandhi जी की विशाल जनसभा, जालबांधा #फिर_से_कांग्रेस_लाएंगे https://t.co/hmO4QhpsPx
— Bhupesh Baghel (@bhupeshbaghel) October 30, 2023
ಖೈರಾಗಢ ವಿಧಾನಸಭಾ ಕ್ಷೇತ್ರದ ಜಲ್ಬಂಧಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕಾ, ಸುಮಾರು 6,000 ಸರ್ಕಾರಿ ಹೈಯರ್ ಸೆಕೆಂಡರಿ ಮತ್ತು ಪ್ರೌಢ ಶಾಲೆಗಳನ್ನು ಸ್ವಾಮಿ ಆತ್ಮಾನಂದ ಇಂಗ್ಲಿಷ್ ಮತ್ತು ಹಿಂದಿ ಮಾಧ್ಯಮ ಶಾಲೆಗಳಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಹೇಳಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಅವರು ಭರವಸೆ ನೀಡಿದರು.
-
वादा नहीं, ये हमारी गारंटी है#फिर_से_कांग्रेस_लाएंगे pic.twitter.com/kIhiomRcO5
— INC Chhattisgarh (@INCChhattisgarh) October 30, 2023 " class="align-text-top noRightClick twitterSection" data="
">वादा नहीं, ये हमारी गारंटी है#फिर_से_कांग्रेस_लाएंगे pic.twitter.com/kIhiomRcO5
— INC Chhattisgarh (@INCChhattisgarh) October 30, 2023वादा नहीं, ये हमारी गारंटी है#फिर_से_कांग्रेस_लाएंगे pic.twitter.com/kIhiomRcO5
— INC Chhattisgarh (@INCChhattisgarh) October 30, 2023
ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಪ್ರತಿ ಗ್ಯಾಸ್ ಸಿಲಿಂಡರ್ ಗೆ 500 ರೂ.ಗಳ ಸಬ್ಸಿಡಿ ನೀಡಲು ಮಹತಾರಿ ನ್ಯಾಯ್ ಯೋಜನೆಯನ್ನು ಪ್ರಾರಂಭಿಸಲಾಗುವುದು ಮತ್ತು ಸ್ವಸಹಾಯ ಗುಂಪುಗಳ ಸಾಲ ಮತ್ತು ಸಾಕ್ಷಮ್ ಯೋಜನೆಯಡಿ ಮಹಿಳೆಯರು ಪಡೆದ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಅವರು ಹೇಳಿದರು.
-
"स्वास्थ्य सुरक्षा की गारंटी"
— INC Chhattisgarh (@INCChhattisgarh) October 30, 2023 " class="align-text-top noRightClick twitterSection" data="
डॉ. खूबचंद बघेल स्वास्थ्य सहायता योजना के अंतर्गत मिलने वाली सहायता राशि ₹5 लाख से बढ़ा कर करेंगे ₹10 लाख#फिर_से_कांग्रेस_लाएंगे pic.twitter.com/KJxt1s5oKA
">"स्वास्थ्य सुरक्षा की गारंटी"
— INC Chhattisgarh (@INCChhattisgarh) October 30, 2023
डॉ. खूबचंद बघेल स्वास्थ्य सहायता योजना के अंतर्गत मिलने वाली सहायता राशि ₹5 लाख से बढ़ा कर करेंगे ₹10 लाख#फिर_से_कांग्रेस_लाएंगे pic.twitter.com/KJxt1s5oKA"स्वास्थ्य सुरक्षा की गारंटी"
— INC Chhattisgarh (@INCChhattisgarh) October 30, 2023
डॉ. खूबचंद बघेल स्वास्थ्य सहायता योजना के अंतर्गत मिलने वाली सहायता राशि ₹5 लाख से बढ़ा कर करेंगे ₹10 लाख#फिर_से_कांग्रेस_लाएंगे pic.twitter.com/KJxt1s5oKA
ರಸ್ತೆ ಅಪಘಾತಗಳು ಮತ್ತು ಇತರ ಹಠಾತ್ ಅಪಘಾತಗಳಿಗೆ ಒಳಗಾದವರಿಗೆ ಮುಖ್ಯಮಂತ್ರಿಗಳ ವಿಶೇಷ ಆರೋಗ್ಯ ನೆರವು ಯೋಜನೆಯಡಿ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಭರವಸೆ ನೀಡಿದರು. ತಿವಾರಾ ಬೇಳೆಯನ್ನು ರೈತರಿಂದ ಬೆಂಬಲ ಬೆಲೆಯಲ್ಲಿ ಖರೀದಿಸಲಾಗುವುದು ಎಂದರು.
ಧರ್ಮದ ಹೆಸರಿನಲ್ಲಿ ನಿಮ್ಮನ್ನು ದಾರಿತಪ್ಪಿಸುವ ಮತ್ತು ನಿಮ್ಮ ಜೀವನದಲ್ಲಿ ಸಮಸ್ಯೆ ಉಂಟು ಮಾಡುವವರಿಗೆ ನೀವು ಮತ ಹಾಕುತ್ತೀರಾ ಅಥವಾ ನಿಮ್ಮ ಅಭಿವೃದ್ಧಿ ಮತ್ತು ಕಲ್ಯಾಣವನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡುವ ಪಕ್ಷಕ್ಕೆ ಮತ ಹಾಕುತ್ತೀರಾ ಎಂದು ಪ್ರಿಯಾಂಕಾ ಸಭಿಕರನ್ನು ಪ್ರಶ್ನಿಸಿದರು.
-
हमारी गारंटी: फिर से कांग्रेस की सरकार बनते ही महिला स्व-सहायता समूहों तथा महिलाओं द्वारा सक्षम योजनांतर्गत लिए गए ऋण माफ किए जाएँगे #फिर_से_कांग्रेस_लाएंगे
— Bhupesh Baghel (@bhupeshbaghel) October 30, 2023 " class="align-text-top noRightClick twitterSection" data="
">हमारी गारंटी: फिर से कांग्रेस की सरकार बनते ही महिला स्व-सहायता समूहों तथा महिलाओं द्वारा सक्षम योजनांतर्गत लिए गए ऋण माफ किए जाएँगे #फिर_से_कांग्रेस_लाएंगे
— Bhupesh Baghel (@bhupeshbaghel) October 30, 2023हमारी गारंटी: फिर से कांग्रेस की सरकार बनते ही महिला स्व-सहायता समूहों तथा महिलाओं द्वारा सक्षम योजनांतर्गत लिए गए ऋण माफ किए जाएँगे #फिर_से_कांग्रेस_लाएंगे
— Bhupesh Baghel (@bhupeshbaghel) October 30, 2023
ಛತ್ತೀಸಗಢದಲ್ಲಿ ನವೆಂಬರ್ 7 ಮತ್ತು 17ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 3 ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ. ಮೊದಲ ಹಂತದಲ್ಲಿ 20 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಉಳಿದ 70 ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಛತ್ತೀಸಗಢದಲ್ಲಿ 90 ವಿಧಾನಸಭಾ ಕ್ಷೇತ್ರಗಳಿದ್ದು, ಪ್ರಸ್ತುತ ವಿಧಾನಸಭೆಯ ಅವಧಿ ಜನವರಿ 3, 2024ರಂದು ಕೊನೆಗೊಳ್ಳುತ್ತದೆ.
ಇದನ್ನೂ ಓದಿ: ಶೀಘ್ರವೇ ಡಿ.ಕೆ.ಶಿವಕುಮಾರ್ ಮಾಜಿ ಮಂತ್ರಿ: ರಮೇಶ್ ಜಾರಕಿಹೊಳಿ ಭವಿಷ್ಯ