ಕೋಲ್ಕತ್ತಾ: ಕಾಂಗ್ರೆಸ್ ನಾಯಕಿ ಸುಶ್ಮಿತಾ ದೇವ್ ರಾಜೀನಾಮೆ ವಿಚಾರವಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದ ನಾಯಕ ಪ್ರಿಯಾಂಕ್ ಖರ್ಗೆ ಮಾತನಾಡಿದ್ದು, ಹಿರಿಯ ನಾಯಕರು ಹೆಚ್ಚು ಗೊಂದಲ ಸೃಷ್ಟಿಸುವ ಬದಲು ಯುವಕರಿಗೆ ಮಾರ್ಗದರ್ಶನ ನೀಡಬೇಕು ಎಂದು ಹೇಳಿದ್ದಾರೆ.
ಮಾಜಿ ಸಂಸದೆ ಸುಶ್ಮಿತಾ ದೇವ್ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಪ್ರಿಯಾಂಕ್ ಖರ್ಗೆ(42), ದೇವ್ ರಾಜೀನಾಮೆ ದುರಾದೃಷ್ಟಕರ ಎಂದಿದ್ದಾರೆ. ದೇವ್ ಪಕ್ಷದ ಮಹಿಳಾ ಘಟಕದ ಮುಖ್ಯಸ್ಥೆ, ಅವರು ನಿಷ್ಠಾವಂತರು ಮತ್ತು ಕಾಂಗ್ರೆಸ್ ಸಿದ್ಧಾಂತದಲ್ಲಿ ನಂಬಿಕೆ ಹೊಂದಿದ್ದರು ಎಂದಿದ್ದಾರೆ.
"ಅವರು ಶ್ರೀ (ರಾಹುಲ್) ಗಾಂಧಿ ಮತ್ತು ಶ್ರೀಮತಿ (ಸೋನಿಯಾ) ಗಾಂಧಿಯ ಅವರ ಮಾತುಗಳಿಗೆ ಕಿವಿಯಾಗಿದ್ದರು" ಎಂದು ಖರ್ಗೆ ತಿಳಿಸಿದರು. "ಸುಶ್ಮಿತಾ ಅವರ ಅಭಿಪ್ರಾಯವನ್ನು ಪಕ್ಷದ ಪ್ರತಿಯೊಬ್ಬರೂ ಹೆಚ್ಚು ಗೌರವಿಸಿದರು. ಅವರು ಕಾಂಗ್ರೆಸ್ನಲ್ಲೇ ಉಳಿಯಬೇಕಿತ್ತು" ಎಂದ್ರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಕ್ತಾರರೂ ಆಗಿರುವ ಚಿತ್ತಾಪುರ ಶಾಸಕ ಖರ್ಗೆ, 48 ವರ್ಷ ವಯಸ್ಸಿನ ದೇವ್ ರಾಜೀನಾಮೆ ನೀಡಿದ ನಂತರ ಹಿರಿಯ ನಾಯಕ ಕಪಿಲ್ ಸಿಬಲ್ ನೀಡಿದ್ದ, ಪಕ್ಷವು ಕಣ್ಣುಮುಚ್ಚಿಕೊಂಡು ಮುಂದುವರಿಯುತ್ತಿದೆ ಎಂಬ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಯುವಕರು ರಾಜಕೀಯದಲ್ಲಿರುವುದು ಪಕ್ಷವನ್ನು ಬಲಪಡಿಸಲು, ಅದು ಅವರ ಜವಾಬ್ದಾರಿಯಾಗಿದೆ. ಆದರೆ ಹಿರಿಯರು ಅವ್ಯವಸ್ಥೆಯನ್ನು ಸೃಷ್ಟಿಸುವ ಬದಲು ಅವರಿಗೆ ಮಾರ್ಗದರ್ಶನ ನೀಡಬೇಕು ಎಂದು ಖರ್ಗೆ ಹೇಳಿದರು. ಅಲ್ಲದೇ ಅವರ ಹೇಳಿಕೆಗೆ ಸಿಬಲ್ ಟೀಕೆಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಯುವ ನಾಯಕರು ಬಿಟ್ಟುಹೋದಾಗ ನಾವು ಅದನ್ನು ಬಲಪಡಿಸುವ ನಮ್ಮ ಪ್ರಯತ್ನಕ್ಕೆ 'ಹಿರಿಯರು' ಕಾರಣ ಎಂದು ಸಿಬಲ್ ಟ್ವಿಟರ್‌ನಲ್ಲಿ ಹೇಳಿದ್ದಾರೆ. ಖರ್ಗೆ "ಇದು ವೃದ್ಧರು ಮತ್ತು ಯುವಕರ ಬಗ್ಗೆ ಅಲ್ಲ", ಏಕೆಂದರೆ ಅವರ ನಡುವೆ " ಭಾರಿ ಅಂತರ" ಸೃಷ್ಟಿಸಬಾರದು, ನಮ್ಮೆಲ್ಲರ "ಸಿದ್ಧಾಂತ ಮತ್ತು ಉದ್ದೇಶ ಒಂದೇ" ಎಂದು ಅವರು ಒತ್ತಿ ಹೇಳಿದರು.
ಅಸ್ಸೋಂನ ಮಾಜಿ ಸಂಸದೆ ಸುಶ್ಮಿತಾ ದೇವ್, ಕಾಂಗ್ರೆಸ್ ಪಕ್ಷ ತೊರೆದು ಇದೀಗ ಕೋಲ್ಕತ್ತಾದಲ್ಲಿ ಟಿಎಂಸಿಯನ್ನು ಸೇರ್ಪಡೆಗೊಂಡಿದ್ದಾರೆ. ಭಾನುವಾರ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿಗೆ ರಾಜೀನಾಮೆ ಪತ್ರವನ್ನು ಕಳುಹಿಸಿದ ಸುಶ್ಮಿತಾ ದೇವ್, ಕಾಂಗ್ರೆಸ್ ತೊರೆಯುತ್ತಿರುವುದಕ್ಕೆ ಯಾವುದೇ ಕಾರಣವನ್ನು ನೀಡಿಲ್ಲ. ಈ ಪತ್ರದಲ್ಲಿ, ದೇವ್ ಅವರು "ಸಾರ್ವಜನಿಕ ಸೇವೆಯ ನನ್ನ ಜೀವನದಲ್ಲಿ ಹೊಸ ಅಧ್ಯಾಯ" ವನ್ನು ಆರಂಭಿಸುತ್ತಿರುವುದಾಗಿ ಬರೆದಿದ್ದಾರೆ.