ETV Bharat / bharat

ಖಾಸಗಿ ಬಸ್​ ಪಲ್ಟಿ ಮೂವರ ದಾರುಣ ಸಾವು.. ಐವರಿಗೆ ಗಂಭೀರ ಗಾಯ - Three killed in road accident Andrapradesh

ಒಡಿಶಾದ ಚಿನ್ನಪಲ್ಲಿಯಿಂದ ವಿಜಯವಾಡಕ್ಕೆ ಬಸ್​ ತೆರಳುತ್ತಿತ್ತು ಎಂದು ಹೇಳಲಾಗುತ್ತಿದೆ. ಮೃತರು ಮತ್ತು ಗಾಯಾಳುಗಳನ್ನು ಒಡಿಶಾ ನಿವಾಸಿಗಳು ಎಂದು ಗುರುತಿಸಲಾಗಿದೆ. ಕೆಲಸದ ನಿಮಿತ್ತ ಒಡಿಶಾದಿಂದ ವಿಜಯವಾಡಕ್ಕೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ.

PRIVATE TRAVELS BUS OVERTURN IN ALLURU DISTRICT THREE DEAD
ಖಾಸಗಿ ಬಸ್​ ಪಲ್ಟಿ ಮೂವರ ದಾರುಣ ಸಾವು.. ಐವರಿಗೆ ಗಂಭೀರ ಗಾಯ
author img

By

Published : Jun 13, 2022, 7:53 AM IST

ಅಲ್ಲೂರಿ( ಆಂಧ್ರಪ್ರದೇಶ): ಅಲ್ಲೂರಿನಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ಈ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಚಿಂತೂರು ಮಂಡಲದ ಎಡುಗುರಲ್ಲಪಲ್ಲಿಯಲ್ಲಿ ಸಂಗೀತಾ ಟ್ರಾವೆಲ್ಸ್ ಬಸ್ ಪಲ್ಟಿಯಾಗಿದೆ. ಈ ದುರ್ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ.

ಘಟನೆಯಲ್ಲಿ ಗಾಯಗೊಂಡವರನ್ನು ಭದ್ರಾಚಲಂ ಏರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಒಡಿಶಾದ ಚಿನ್ನಪಲ್ಲಿಯಿಂದ ವಿಜಯವಾಡಕ್ಕೆ ಬಸ್​ ತೆರಳುತ್ತಿತ್ತು ಎಂದು ಹೇಳಲಾಗುತ್ತಿದೆ. ಮೃತರು ಮತ್ತು ಗಾಯಾಳುಗಳನ್ನು ಒಡಿಶಾ ನಿವಾಸಿಗಳು ಎಂದು ಗುರುತಿಸಲಾಗಿದೆ. ಕೆಲಸದ ನಿಮಿತ್ತ ಒಡಿಶಾದಿಂದ ವಿಜಯವಾಡಕ್ಕೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಮೃತರನ್ನು ಧನೇಶ್ವರ ದಳಪತಿ (24), ಜೀತು ಹರಿಜನ್ (5) ಮತ್ತು ಸುನೇನಾ ಹರಿಜನ್ (2) ಎಂದು ಗುರುತಿಸಲಾಗಿದೆ. ಅಪಘಾತದ ವೇಳೆ ಬಸ್‌ನಲ್ಲಿ 60 ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ. ಇನ್ನೂ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

ಇದನ್ನು ಓದಿ:100 ಅಡಿ ಕಂದಕಕ್ಕೆ ಬಿದ್ದ ಕಾರು: ಪೂಜೆ ಮುಗಿಸಿ ಬರುತ್ತಿದ್ದ ಒಂದೇ ಕುಟುಂಬದ ನಾಲ್ವರು ಮಹಿಳೆಯರ ಸಾವು

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.