ಕರೀಂನಗರ (ತೆಲಂಗಾಣ) : ಈ ಹಿಂದೆ ಖಾಸಗಿ ಶಾಲಾ ಕರಸ್ಪಾಂಡೆಂಟ್ ಆಗಿ 10 ಶಿಕ್ಷಕರಿಗೆ ಕೆಲಸ ನೀಡಿದ್ದ ವ್ಯಕ್ತಿಯೊಬ್ಬರು, ಮಹಾಮಾರಿ ಕೊರೊನಾ ಹೊಡೆತಕ್ಕೆ ರಸ್ತೆ ಬದಿ ತಳ್ಳೋ ಬಂಡಿಯ ಮೇಲೆ ತಿಂಡಿ ತಿನಿಸು ಮಾರುತ್ತಾ ಜೀವನ ಸಾಗಿಸುತ್ತಿದ್ದಾರೆ. ವಿಶೇಷ ಎಂದರೆ ತಮ್ಮ ಮಿರ್ಚಿ ಬಂಡಿಗೆ ನಿರುದ್ಯೋಗಿ ಎಂದು ಹೆಸರಿಟ್ಟು ತಮ್ಮ ಡಿಗ್ರಿಗಳನ್ನು ಬರೆದುಕೊಂಡಿದ್ದಾರೆ.
ಕರೀಂನಗರ ಜಿಲ್ಲೆಯ ಹುಜುರಾಬಾದ್‌ನ ಮಟ್ಟೇಲಾ ಸಂಪತ್ ನಿರುದ್ಯೋಗಿ ಮಿರ್ಚಿ ಬಂಡಿ ಇಟ್ಟವರು. ಇವರು ಎಂಎಸ್ಸಿ, ಬಿಇಡಿ, ಬಿಎಲ್‌ಐಎಸ್‌ಸಿ ಪೂರ್ಣಗೊಳಿಸಿದ್ದಾರೆ. ಈ ಹಿಂದೆ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ನಂತರ ಕರೀಂನಗರ ಜಿಲ್ಲೆಯ ಶಂಕರ್‌ಪಟ್ನಂನಲ್ಲಿ ಖಾಸಗಿ ಶಾಲೆಯನ್ನು ನಡೆಸುತ್ತಿದ್ದರು. ಅವರೊಂದಿಗೆ ಹದಿನೈದು ಮಂದಿಯನ್ನು ನೇಮಿಸಿಕೊಂಡಿದ್ದರು. ಇಲ್ಲಿಯವರೆಗೆ ಎಲ್ಲವೂ ಸರಿಯಾಗಿದೆ. ಆದರೆ, ಕರೋನಾ ಸಾಂಕ್ರಾಮಿಕದಿಂದ ಕಳೆದ ವರ್ಷ ಶಾಲೆಗಳನ್ನು ಮುಚ್ಚಲಾಗಿತ್ತು. ಈ ಸಂದರ್ಭದಲ್ಲಿ ಕೈಯಲ್ಲಿರುವ ಹಣವಿಲ್ಲದೇ, ಮಾಡಲು ಕೆಲಸಗಳು ಸಿಗದೇ ಬೀದಿಗೆ ಬೀಳುವ ಪರಿಸ್ಥಿತಿ ಎದುರಾಗಿದೆ.
ಹಳೆಯ ಅಭ್ಯಾಸವೇ ಕೈ ಹಿಡಿಯಿತು
ಕಾಲೇಜಿನಲ್ಲಿದ್ದಾಗ ಸ್ವತಃ ತಿಂಡಿಗಳನ್ನು ತಯಾರಿಸುತ್ತಿದ್ದರು. ಆ ಅಭ್ಯಾಸದಿಂದ ಒಂದು ಕಲ್ಪನೆ ಹುಟ್ಟಿತು. ಕೂಡಲೇ ಕರೀಂನಗರ - ವಾರಂಗಲ್ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಒಂದು ಬಂಡಿಯನ್ನು ಸ್ಥಾಪಿಸಿದರು. ಅದೇ ಈಗ ಅವರಿಗೆ ಉದ್ಯೋಗವಾಗಿದೆ. ಬಂಡಿಯ ಎರಡೂ ಬದಿಗಳಲ್ಲಿ ನಿರುದ್ಯೋಗಿ ಎಂದು ಮತ್ತು ಅವರ ಅರ್ಹತೆಗಳನ್ನು ಬರೆದಿದ್ದಾರೆ.
ಇವರಂತಹ ಅನೇಕ ನಿರುದ್ಯೋಗಿಗಳು ಶೋಚನೀಯ ಜೀವನ ನಡೆಸುತ್ತಿದ್ದಾರೆ. ಅಂತಹವರನ್ನು ಗುರ್ತಿಸಿ ಆರ್ಥಿಕವಾಗಿ ಸಹಾಯ ಮಾಡುತವಂತೆ ಸಂಪತ್ ಅವರು ಅಲ್ಲಿನ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ.. ಒಂದೇ ಕುಟುಂಬದ ಮೂವರು ಹುಡುಗಿಯರು ನಾಪತ್ತೆ.. ಪ್ರೀತಿ ಹೆಸರಲ್ಲಿ ಕಿಡ್ನಾಪ್ ಆರೋಪ