ETV Bharat / bharat

ಹುಷಾರ್​​... 15 - 25 ಸಾವಿರ ರೂಪಾಯಿ ಕೊಟ್ರೆ ಇಲ್ಲಿ ಸಿಗುತ್ತೆ ಕಾಲ್​, ಚಾಟ್​ ಡೀಟೇಲ್ಸ್​.. ನಕಲಿ ಸಂಸ್ಥೆಗಳ ಬೆನ್ನಟ್ಟಿ! - ಕಾಲ್ ಡೀಟೇಲ್ಸ್

15 ರಿಂದ 25 ಸಾವಿರ ರೂಪಾಯಿ ಕೊಟ್ಟರೆ, ವ್ಯಕ್ತಿಯ ಕಾಲ್, ಚಾಟ್ ಡೀಟೇಲ್ಸ್​ ಮಾಹಿತಿ ಪಡೆಯಬಹುದು. ಇಂಥ ನಕಲಿ ಪತ್ತೇದಾರಿ ಸಂಸ್ಥೆಗಳ ಬಗ್ಗೆ ಈ ಟಿವಿ ಭಾರತ ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸಿದೆ.

ನಕಲಿ ಸಂಸ್ಥೆಗಳ ಬೆನ್ನತ್ತಿ
ನಕಲಿ ಸಂಸ್ಥೆಗಳ ಬೆನ್ನತ್ತಿ
author img

By

Published : Oct 19, 2021, 10:58 PM IST

ಭೋಪಾಲ್ (ಮಧ್ಯಪ್ರದೇಶ): ಜಸ್ಟ್​ ನೀವು 15 ರಿಂದ 25 ಸಾವಿರ ರೂಪಾಯಿ ಕೊಟ್ಟರೆ ಸಾಕು.. ನೀವು ಯಾರ ಮೊಬೈಲ್​ ಕರೆಯ ಮಾಹಿತಿ, ವಾಟ್ಸ್​ಆ್ಯಪ್​ ಚಾಟ್​​ ಡೀಟೇಲ್ಸ್​ ಅನ್ನು ಕೂಡ ಪಡೆಯಬಹುದು. ಅರೇ, ಇದೇನಿದು ಈ ರೀತಿ ಮಾಡುವುದು ಅಪರಾಧ ಅಲ್ವಾ ಅಂತಾ ನಿಮಗನಿಸಬಹುದು. ಹೌದು, ಈ ರೀತಿ ಮಾಡುವುದು ತಪ್ಪೇ. ಆದರೂ, ಕಾಲ್ ಡೀಟೇಲ್ಸ್, ಚಾಟ್ ಡೀಟೇಲ್ಸ್​ ನೀಡುವುದಕ್ಕೆಂದೇ ಹಲವಾರು ಪತ್ತೇದಾರಿ ಸಂಸ್ಥೆಗಳು ಸಕ್ರಿಯವಾಗಿವೆ. ಈ ಬಗ್ಗೆ ಯಾರೂ ಬಹಿರಂಗವಾಗಿ ಮಾತನಾಡಲು ಸಿದ್ಧರಿಲ್ಲ. ಆದರೆ, ‘ಈ ಟಿವಿ ಭಾರತ’ವು ಪತ್ತೇದಾರಿ ಸಂಸ್ಥೆಯೊಂದರ ಬೆನ್ನಟ್ಟಿದ್ದು , ವಂಚನೆ ಹೇಗೆ ನಡೆಯುತ್ತದೆ ಅನ್ನೋದ್ರ ಬಗ್ಗೆ ಮಾಹಿತಿ ಬಹಿರಂಗಪಡಿಸಿದೆ.

ಬೇಹುಗಾರಿಕೆ ಹೆಸರಿನಲ್ಲಿ ಖಾಸಗಿತನ ಉಲ್ಲಂಘನೆ?

ಯಾರಾದರೂ ತನ್ನ ಹೆಂಡತಿ ಅಥವಾ ಸ್ನೇಹಿತರ ಮೇಲೆ ಕಣ್ಣಿಡಬೇಕು. ಅವರು ಯಾರೊಂದಿಗೆ ಚಾಟ್ ಮಾಡ್ತಿದ್ದಾರೆ, ಮಾತಾಡ್ತಿದ್ದಾರೆ ಅನ್ನೋದ್ರ ಬಗ್ಗೆ ತಿಳಿದುಕೊಳ್ಳಬೇಕೆಂದರೆ, ಈ ನಕಲಿ ಪತ್ತೇದಾರಿ ಸಂಸ್ಥೆಗೆ 15 ರಿಂದ 25 ಸಾವಿರ ರೂಪಾಯಿ ನೀಡಬೇಕು. ಆಗ ನಿಮಗೆ ನೀವು ಯಾರ ನಂಬರ್ ಕಾಲ್​ ಡೀಟೇಲ್ಸ್ ಬೇಕು ಅಂತೀರೋ ಅವರ ಮೂರು ತಿಂಗಳ ಕಾಲ್, ಚಾಟ್ ಹಿಸ್ಟರಿ ಸಿಗುತ್ತದೆ. ಸಾಮಾನ್ಯ ವ್ಯಕ್ತಿ ಮಾತ್ರವಲ್ಲದೇ, ಪ್ರತಿಷ್ಠಿತ ವ್ಯಕ್ತಿಗಳ ಮಾಹಿತಿಯನ್ನೂ ಪಡೆಯಬಹುದು. ಆದರೆ ಇದಕ್ಕೆ ಹೆಚ್ಚಿನ ಹಣ ನೀಡಬೇಕಾಗುತ್ತದೆ.

‘ಜೀವನ ಸಂಗಾತಿ ಆಯ್ಕೆಗಾಗಿ ಕಾಲ್​ ಡೀಟೇಲ್ಸ್?’

ಯುವಕ - ಯುವತಿಯರು ತಮ್ಮ ಜೀವನ ಸಂಗಾತಿ ಆಯ್ಕೆ ಮಾಡುವಾಗ, ಆಕೆ/ಆತ ಎಷ್ಟು ನಿಷ್ಠಾವಂತನಾಗಿದ್ದಾನೆ ಅನ್ನೋದನ್ನ ಪತ್ತೆ ಹಚ್ಚುವಲ್ಲಿ ಈ ಸಂಸ್ಥೆಗಳು ಸಕ್ರಿಯವಾಗಿವೆ.

ಈ ಸಂಸ್ಥೆಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ?

ನಗರದ ಚುನಾಭಟ್ಟಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾವಿಟಿ ಡಿಟೆಕ್ಟಿವ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್​ನ ಮೊಬೈಲ್ ಸಂಖ್ಯೆ 07947319703 ಗೆ ಈ ಟಿವಿ ಭಾರತದ ಪ್ರತಿನಿಧಿ ಕರೆ ಮಾಡಿದ್ದಾರೆ. ಈ ಸಮಯದಲ್ಲಿ ನಮ್ಮ ಪ್ರತಿನಿಧಿ ವಾಯ್ಸ್​ ರೆಕಾರ್ಡಿಂಗ್ ಆನ್ ಮಾಡಿರುತ್ತಾರೆ. ಆಗ ಕರೆ ಸ್ವೀಕರಿಸಿದ ವ್ಯಕ್ತಿಯ ಬಳಿ ನಮ್ಮ ಪ್ರತಿನಿಧಿ, ನಮ್ಮ ಸಂಬಂಧಿಕನೊಬ್ಬ ಯುವತಿಯನ್ನು ಮದುವೆಯಾಗಲಿದ್ದಾನೆ. ಹಾಗಾಗಿ ಯುವತಿಯ ಬಗ್ಗೆ ಕೆಲ ಮಾಹಿತಿ ಬೇಕು ಎನ್ನುತ್ತಾರೆ. ಕೆಲ ಸಮಯದ ಬಳಿಕ ಡಿಎಸ್​ಟಿವಿ ಏಜೆನ್ಸಿಯ ಎಸ್​.ಕೆ.ಝಾ ಸರಿ ಎನ್ನುತ್ತಾರೆ.

ವರದಿಗಾರ: ಸಂಬಂಧಿಯೊಬ್ಬ ಯುವತಿಯನ್ನು ಮದುವೆಯಾಗಲಿದ್ದಾನೆ, ಇದಕ್ಕಾಗಿ ಅವರಿಗೆ ಸಂಪೂರ್ಣ ಮಾಹಿತಿ ಬೇಕು.

ಎಸ್​ಕೆ ಝಾ: ಹುಡುಗಿಯ ದೂರವಾಣಿ ನಂಬರ್ ನೀಡಿ. ಮೂರು ತಿಂಗಳ ಕರೆ ವಿವರಗಳು ನಿಮಗೆ 15 ದಿನಗಳಲ್ಲಿ ಲಭ್ಯವಾಗುತ್ತವೆ. ವಾಟ್ಸ್​ ಆ್ಯಪ್ ಚಾಟಿಂಗ್ ಪಡೆಯಲು ಯತ್ನಿಸುತ್ತೇವೆ. ಆದರೆ, ಕಾಲ್ ಡೀಟೇಲ್ಸ್ ಮಾತ್ರ ಪಕ್ಕಾ ಕೊಡ್ತೀವಿ. ಇದಕ್ಕೆ 25 ಸಾವಿರ ರೂಪಾಯಿ ಕೊಡ್ಬೇಕು ಎಂದರು.

ಅಲ್ಲದೇ, ಭೋಪಾಲ್‌ನ ಜಂಟಿ ಸಂಗ್ರಾಹಕರ ಮೂರು ತಿಂಗಳ ಕರೆ ವಿವರಗಳನ್ನು ನೀಡಲು ಎಸ್‌ಕೆ ಝಾ ಒಪ್ಪಿಕೊಂಡರು. ಈ ಟಿವಿ ಭಾರತದ ಬಳಿ ಈ ಸಂಭಾಷಣೆಯ ಆಡಿಯೋ ರೆಕಾರ್ಡಿಂಗ್ ಕೂಡ ಇದೆ.

ಇತರ ಏಜೆನ್ಸಿಗಳು ಕೂಡ ಇದೇ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತವೆ

ಈಟಿವಿ ಭಾರತ್ ಕೇವಲ ಗ್ರಾವಿಟಿ ಡಿಟೆಕ್ಟಿವ್ ಏಜೆನ್ಸಿಗೆ ಮಾತ್ರವಲ್ಲದೇ ಮಾಲ್ವಿಯಾ ನಗರ, ಭೋಪಾಲ್ ನಿಂದ ಕಾರ್ಯನಿರ್ವಹಿಸುತ್ತಿರುವ ಮತ್ತೊಂದು ಖಾಸಗಿ ಪತ್ತೇದಾರಿ ಏಜೆನ್ಸಿಯ ಆಪರೇಟರ್ ಜೊತೆ ಮಾತನಾಡಿದೆ.

15 ಸಾವಿರ ರೂಪಾಯಿ ನೀಡಿದ್ರೆ, ಮೂರು ತಿಂಗಳ ಕಾಲ್ ಡೀಟೇಲ್ಸ್ ನೀಡುವುದಾಗಿ ಹೇಳಿದ್ದಾರೆ. ಪ್ರೀತಿ, ಮದುವೆ ಮತ್ತು ವಂಚನೆಯ ಸಂದರ್ಭದಲ್ಲಿ ಅಗತ್ಯ ಪುರಾವೆಗಳನ್ನು ಒದಗಿಸಲಾಗುತ್ತದೆ ಎಂದು ಏಜೆನ್ಸಿ ಆಯೋಜಕರು ಹೇಳಿದ್ದಾರೆ. ಈ ಪುರಾವೆ ಆಡಿಯೋ - ವಿಡಿಯೋ, ಕರೆ ವಿವರಗಳು, ವಾಟ್ಸಾಪ್ ಚಾಟ್ ವಿವರಗಳಂತಹ ಯಾವುದೇ ರೂಪದಲ್ಲಿರಬಹುದು. ಆದರೂ ವಿವರಗಳ ಬೇಡಿಕೆಗೆ ಅನುಗುಣವಾಗಿ ಶುಲ್ಕ ನಿಗದಿಪಡಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಟಿವಿ ಭಾರತವು ಇಂಥ ಪತ್ತೇದಾರಿ ಸಂಸ್ಥೆಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿತು. ಆದರೆ, ಅಪರಾಧ ವಿಭಾಗದ ಹೆಚ್ಚುವರಿ ಎಸ್​ಪಿ ಗೋಪಾಲ್ ಸಿಂಗ್​ ಧಕಾಡ್​, ನಮಗೆ ಈವರೆಗೆ ಯಾವುದೇ ದೂರು ಬಂದಿಲ್ಲ. ಒಂದು ವೇಳೆ ಅಂಥ ಪ್ರಕರಣಗಳು ಬೆಳಕಿಗೆ ಬಂದರೆ, ಕ್ರಮ ಕೈಗೊಳ್ಳಲಾಗುವುದು ಎಂದರು. ಖಾಸಗಿ ಪತ್ತೇದಾರಿ ಏಜೆನ್ಸಿಗಳು ಖಾಸಗಿತನವನ್ನು ಬೇಧಿಸುವುದನ್ನು ತಡೆಯಲು ಕೇಂದ್ರ ಮಟ್ಟದಲ್ಲಿ ಯಾವುದೇ ನಿಯಂತ್ರಣವಿಲ್ಲ.

ಡಿಟೆಕ್ಟಿವ್ ಏಜೆನ್ಸಿಗಳು- ಖಾಸಗಿ ಟೆಲಿಕಾಂ ಕಂಪನಿಗಳ ಜೊತೆಗೂಡಿ ಕಾರ್ಯನಿರ್ವಹಣೆ

ಪತ್ತೇದಾರಿ ಏಜೆನ್ಸಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಯುವಕನೊಬ್ಬ ಮಾಹಿತಿ ನೀಡಿದ್ದು, ಕರೆಗಳ ವಿವರಗಳು, ವಾಟ್ಸ್​ಆ್ಯಪ್ ಚಾಟಿಂಗ್ ವಿವರಗಳನ್ನು ಹೊರ ತೆಗೆಯುವ ಇಡೀ ಪ್ರಕ್ರಿಯೆಯು, ಖಾಸಗಿ ಟೆಲಿಕಾಂ ಕಂಪನಿಗಳ ಸಹಭಾಗಿತ್ವದಲ್ಲಿ ನಡೆಯುತ್ತಿದೆ. ಕಾಲ್ ಡೀಟೇಲ್ಸ್ ಪಡೆಯಲು 10 ಸಾವಿರದಿಂದ 15 ಸಾವಿರ ರೂಪಾಯಿ ನಿಗದಿಪಡಿಸಲಾಗಿದೆ. ಕೆಲವೊಮ್ಮೆ ಸಂಭಾಷಣೆಗಳನ್ನು ವಾಟ್ಸ್ ಆ್ಯಪ್​ ಕಾಲಿಂಗ್​ನಲ್ಲಿಯೂ ಮಾಡಲಾಗುತ್ತದೆ. ಇದರಿಂದ ಅವರ ಸಂಭಾಷಣೆಯನ್ನು ರೆಕಾರ್ಡಿಂಗ್ ಮಾಡಲಾಗುವುದಿಲ್ಲ.

ನೋಂದಣಿಯಾಗದೇ ಕಾರ್ಯ ನಿರ್ವಹಣೆ?

ಮಧ್ಯಪ್ರದೇಶದಲ್ಲಿ ಕೇವಲ 6 ಖಾಸಗಿ ಪತ್ತೇದಾರಿ ಸಂಸ್ಥೆಗಳು ನೋಂದಣಿಯಾಗಿವೆ. ಈ ಟಿವಿ ಇಂಡಿಯಾದ ತಂಡವು ಸಂಘದ ಅಧ್ಯಕ್ಷ ಮಹೇಂದ್ರ ಶ್ರೀವಾಸ್ತವ ಅವರೊಂದಿಗೆ ಮಾತನಾಡಿದೆ. ಅಂತಹ ಕೆಲಸ ಮಾಡುತ್ತಿರುವ ಏಜೆನ್ಸಿಗಳು ಯಾವುವು ಎಂದು ತಿಳಿದಿಲ್ಲ ಎಂದು ಹೇಳಿದರು. ಅಸೋಸಿಯೇಷನ್ ​​ಆಫ್ ಪ್ರೈವೇಟ್ ಡಿಟೆಕ್ಟಿವ್ಸ್ ಪ್ರಕಾರ, ಮಧ್ಯಪ್ರದೇಶದ ಅಸೋಸಿಯೇಷನ್​​​ನಲ್ಲಿ ಕೇವಲ 6 ಏಜೆನ್ಸಿಗಳು ನೋಂದಣಿಯಾಗಿವೆ.

ಇವುಗಳ ಹೊರತಾಗಿ, ಯಾವುದೇ ಪತ್ತೇದಾರಿ ಸಂಸ್ಥೆ ಈ ರೀತಿಯ ಕೃತ್ಯಗಳಲ್ಲಿ ತೊಡಗಿದ್ದರೆ, ಕ್ರಮ ಕೈಗೊಳ್ಳಲಾಗುವುದು ಎಂದರು. ಜನರು ಜಾಗರೂಕರಾಗಿರಿ. ವೈವಾಹಿಕ ಪೂರ್ವ ಪರಿಶೀಲನೆಗಾಗಿ ಉತ್ತಮ ಏಜೆನ್ಸಿಗಳನ್ನು ಆರಿಸಿಕೊಳ್ಳಿ ಎಂದು ಅವರು ಸಲಹೆ ನೀಡಿದರು. ಅಂತಹ ಪರಿಶೀಲನೆಗೆ ಕರೆ ವಿವರಗಳು ಇತ್ಯಾದಿ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ವಿವಾಹ ಪೂರ್ವ ಪರಿಶೀಲನೆಗೆ ಸಂಬಂಧಿಸಿದಂತೆ ಈ ಟಿವಿ ಇಂಡಿಯಾ ಈಗಾಗಲೇ ಇಂತಹ ಪ್ರಕರಣಗಳನ್ನು ಮುನ್ನೆಲೆಗೆ ತಂದಿದೆ. ವಿಶೇಷವಾಗಿ ಜನರು ತಮ್ಮ ಭವಿಷ್ಯದ ಜೀವನ ಸಂಗಾತಿಗೆ ಸಂಬಂಧಿಸಿದ ವಿವರಗಳನ್ನು ಪಡೆಯಲು ಮತ್ತು ನಿಷ್ಠೆ ಪರೀಕ್ಷೆಯನ್ನು ಮಾಡಲು ಏಜೆನ್ಸಿಗಳ ಸಹಾಯವನ್ನು ತೆಗೆದುಕೊಳ್ಳುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.