ETV Bharat / bharat

ಶೂನಿಂದ ಶಿಕ್ಷಕಿಗೆ ಹಿಗ್ಗಾಮುಗ್ಗಾ ಥಳಿಸಿದ ಪ್ರಾಂಶುಪಾಲ

author img

By

Published : Jun 24, 2022, 5:38 PM IST

Updated : Jun 24, 2022, 6:01 PM IST

ಪ್ರಾಂಶುಪಾಲರು ಮಹಿಳಾ ಶಿಕ್ಷಕಿಯನ್ನು ಶೂನಿಂದ ಥಳಿಸಿದ್ದಾರೆ. ಲಖಿಂಪುರ ಬ್ಲಾಕ್‌ನ ಮಹಾಂಗುಖೇಡಾ ಶಾಲೆಯಲ್ಲಿ ಈ ಘಟನೆ ನಡೆದಿದೆ..

ಪಾದರಕ್ಷೆಯಲ್ಲಿ ಶಿಕ್ಷಕಿಗೆ ಹಿಗ್ಗಾಮುಗ್ಗ ಥಳಿಸಿದ ಪ್ರಾಂಶುಪಾಲ

ಲಖಿಂಪುರಖೇರಿ (ಉತ್ತರ ಪ್ರದೇಶ) : ಪ್ರಾಂಶುಪಾಲರು ಮಹಿಳಾ ಶಿಕ್ಷಕಿಯನ್ನು ಸಾರ್ವಜನಿಕವಾಗಿ ಶೂನಿಂದ ಥಳಿಸಿದ್ದಾರೆ. ಲಖಿಂಪುರ ಬ್ಲಾಕ್‌ನ ಮಹಾಂಗುಖೇಡಾ ಶಾಲೆಯಲ್ಲಿ ಈ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಶಿಕ್ಷಕಿಯನ್ನು ಈ ರೀತಿ ಥಳಿಸಿದ್ದರಿಂದ ಶಿಕ್ಷಾಮಿತ್ರ ಸಂಘಟನೆ ಸಿಟ್ಟಿಗೆದ್ದಿದ್ದು, ಕ್ರಮ ಜರುಗಿಸುವಂತೆ ಒತ್ತಾಯಿಸಿದೆ. ಘಟನೆ ಸಂಬಂಧ ತಕ್ಷಣದಿಂದಲೇ ಜಾರಿಗೆ ಬರುವಂತೆ ಪ್ರಾಂಶುಪಾಲರನ್ನು ಆಡಳಿತ ಮಂಡಳಿ ಅಮಾನತುಗೊಳಿಸಿದೆ. ಇದರ ನಡುವೆ ಆರೋಪಿ ಪ್ರಾಂಶುಪಾಲರು ಮತ್ತು ಸಂತ್ರಸ್ತ ಮಹಿಳೆ ಇಬ್ಬರೂ ದೂರು ದಾಖಲಿಸಲು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಶೂನಿಂದ ಶಿಕ್ಷಕಿಗೆ ಹಿಗ್ಗಾಮುಗ್ಗಾ ಥಳಿಸಿದ ಪ್ರಾಂಶುಪಾಲ

ಹಲ್ಲೆ ಮಾಡಿದ ಪ್ರಾಂಶುಪಾಲರನ್ನು ಅಜಿತ್ ವರ್ಮಾ ಎಂದು ಗುರುತಿಸಲಾಗಿದೆ. ವರ್ಮಾ ಹಾಗೂ ಶಿಕ್ಷಕಿ ಸೀಮಾದೇವಿ ನಡುವೆ ಬಹಳ ದಿನಗಳಿಂದ ಜಟಾಪಟಿ ನಡೆಯುತ್ತಿತ್ತು ಎನ್ನಲಾಗಿದೆ. ಶಿಕ್ಷಾಮಿತ್ರ ಶಿಕ್ಷಣ ಸಂಘದ ಜಿಲ್ಲಾಧ್ಯಕ್ಷ ಸಂಜಯ್ ಮಿಶ್ರಾ ಈಟಿವಿ ಭಾರತದ ಜೊತೆ ಈ ಸಂಬಂಧ ಮಾತನಾಡಿ, ಮಹಿಳೆಯನ್ನು ನಡೆಸಿಕೊಂಡ ರೀತಿ ಖಂಡನೀಯ. ಈ ಘಟನೆಯನ್ನು ಖಂಡಿಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: ಸಿಎಂ ಅಧಿಕೃತ ನಿವಾಸ ಖಾಲಿ ಮಾಡಿರಬಹುದು, ದೃಢಸಂಕಲ್ಪ ಅಚಲ: ಉದ್ಧವ್ ಠಾಕ್ರೆ

Last Updated : Jun 24, 2022, 6:01 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.