ETV Bharat / bharat

ರಾಜಕೀಯ ಬಿಕ್ಕಟ್ಟು, ಚುನಾವಣೆ ಕಾವು; ಫೆ. 25ಕ್ಕೆ ಪುದುಚೇರಿಗೆ ನಮೋ! - ಪ್ರಧಾನಿ ನರೇಂದ್ರ ಮೋದಿ ಪುದುಚೇರಿ

ಫೆ. 25ರಂದು ಪ್ರಧಾನಿ ನರೇಂದ್ರ ಮೋದಿ ಕೇಂದ್ರಾಡಳಿತ ಪ್ರದೇಶ ಪುದುಚೇರಿಗೆ ಪ್ರವಾಸ ಕೈಗೊಳ್ಳಲಿದ್ದು, ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿ ಮಾತನಾಡಲಿದ್ದಾರೆ.

Prime Minister
Prime Minister
author img

By

Published : Feb 19, 2021, 5:57 PM IST

ಪುದುಚೇರಿ: ಕಾಂಗ್ರೆಸ್​ ಆಡಳಿತ ಇರುವ ಪುದುಚೇರಿಯಲ್ಲಿ ಈಗಾಗಲೇ ರಾಜಕೀಯ ಬಿಕ್ಕಟ್ಟು ಉದ್ಭವವಾಗಿದ್ದು, ಬರುವ ಫೆ. 22ರಂದು ಬಹುಮತ ಸಾಬೀತು ಪಡಿಸುವಂತೆ ಅಲ್ಲಿನ ಮುಖ್ಯಮಂತ್ರಿಗೆ ಈಗಾಗಲೇ ಲೆಪ್ಟಿನೆಂಟ್​ ಗವರ್ನರ್​ ಆದೇಶ ನೀಡಿದ್ದಾರೆ.

ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಫೆ. 25ರಂದು ಒಂದು ದಿನ ಪುದುಚೇರಿ ಪ್ರವಾಸ ಕೈಗೊಳ್ಳುತ್ತಿದ್ದು, ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿ ಮಾತನಾಡಲಿದ್ದಾರೆ ಎಂದು ಪುದುಚೇರಿ ಬಿಜೆಪಿ ಅಧ್ಯಕ್ಷ ವಿ ಸಾಮಿನಾಥನ್​ ಹೇಳಿದ್ದಾರೆ.

ಓದಿ: ಟೂಲ್​ಕಿಟ್​ ಪ್ರಕರಣ; ದಿಶಾ ರವಿಗೆ ಮೂರು ದಿನ ನ್ಯಾಯಾಂಗ ಬಂಧನ

2018ರ ಪುದುಚೇರಿ ಪ್ರವಾಸದ ಬಳಿಕ ಪ್ರಧಾನಿ ನರೇಂದ್ರ ಮೋದಿ ಕೈಗೊಳ್ಳುತ್ತಿರುವ ಎರಡನೇ ಪ್ರವಾಸ ಇದಾಗಿದ್ದು, ಆ ವೇಳೆ ಅರೋವಿಲ್ಲೆ ಅಂತಾರಾಷ್ಟ್ರೀಯ ಟೌನ್‌ಶಿಪ್‌ನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮುಂದಿನ ಕೆಲವೇ ತಿಂಗಳಲ್ಲಿ ಪುದುಚೇರಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದರ ಬೆನ್ನಲ್ಲೇ ನಮೋ ಪ್ರವಾಸ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.