ETV Bharat / bharat

ಅಜಾದಿ ಕಾ ಅಮೃತ ಮಹೋತ್ಸವ: ಈನಾಡು ಸಂಸ್ಥೆಯ ಪ್ರಯತ್ನಕ್ಕೆ ಭೇಷ್​​​ ಎಂದ ಪ್ರಧಾನಿ - Eenadu

ಈನಾಡು ಸಂಸ್ಥೆಯ ಎಂಡಿ ಕಿರಣ್ ರಾವ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂದು ಭೇಟಿ ಮಾಡಿ, ಮಾತುಕತೆ ನಡೆಸಿದರು. ಈ ವೇಳೆ, ಈನಾಡು ಸಮೂಹದಿಂದ ಸಿದ್ಧಪಡಿಸಲಾದ ಪುಸ್ತಕವನ್ನು ಪ್ರಧಾನಿ ಬಿಡುಗಡೆ ಮಾಡಿದರು.

Modi had a very productive meeting with Ch. Kiron
ಪ್ರಧಾನಿ ಮೋದಿ ಭೇಟಿ ಮಾಡಿದ ಈನಾಡು ಸಂಸ್ಥೆ ಎಂಡಿ ಕಿರಣ್ ರಾವ್
author img

By

Published : Oct 26, 2022, 1:56 PM IST

Updated : Oct 26, 2022, 6:02 PM IST

ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರರ ವೀರಗಾಥೆಗಳನ್ನು ಓದುಗರಿಗೆ ವಿಶೇಷ ಕಥೆಗಳ ರೂಪದಲ್ಲಿ ಪ್ರಸ್ತುತಪಡಿಸಿದ ಈನಾಡು ಬಳಗವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಆಜಾದಿ ಕಾ ಅಮೃತ್ ಮಹೋತ್ಸವದ ಸಂದರ್ಭದಲ್ಲಿ ಇಂತಹ ಪ್ರಯತ್ನಗಳು ಅತ್ಯಂತ ಅಗತ್ಯವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಅಜಾದಿ ಕಾ ಅಮೃತ ಮಹೋತ್ಸವ: ಈನಾಡು ಸಂಸ್ಥೆಯ ಪ್ರಯತ್ನಕ್ಕೆ ಭೇಷ್​​​ ಎಂದ ಪ್ರಧಾನಿ

‘ಆಜಾದಿ ಕಾ ಅಮೃತ್ ಮಹೋತ್ಸವ’ ಹಿನ್ನೆಲೆಯಲ್ಲಿ ವಿಶೇಷ ಕಥೆಗಳ ಸಂಕಲನವಾಗಿ ಸಿದ್ಧಗೊಂಡ ‘ದಿ ಇಮ್ಮಾರ್ಟಲ್ ಸಾಗಾ’ ಪುಸ್ತಕವನ್ನು ಈನಾಡು ಸಂಸ್ಥೆಯ ಎಂಡಿ ಸಿ.ಎಚ್. ಕಿರಣ್, ಮಾರ್ಗದರ್ಶಿ ಎಂಡಿ ಶೈಲಜಾ ಮತ್ತು ರಾಮೋಜಿ ಫಿಲ್ಮ್ ಸಿಟಿ ಎಂಡಿ ವಿಜಯೇಶ್ವರಿ ಅವರ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಅನಾವರಣಗೊಳಿಸಿದರು.

ಈನಾಡು ಸಂಸ್ಥೆಯ ಪ್ರಯತ್ನ ಶ್ಲಾಘಿಸಿದ ಪ್ರಧಾನಿ: ಪುಸ್ತಕ ಸ್ವೀಕರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಈನಾಡು ಸಮೂಹದ ಈ ಪ್ರಯತ್ನವನ್ನು ಶ್ಲಾಘಿಸಿದರು. ಅಲ್ಲದೇ ಭಾರತವು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸುತ್ತಿರುವ ಸಮಯದಲ್ಲಿ ಇಂತಹ ಪ್ರಯತ್ನಗಳು ಅಗತ್ಯವಾಗಿವೆ. ಭಾರತದ ಪ್ರತಿಯೊಂದು ಮೂಲೆ ಮೂಲೆಯಲ್ಲೂ ಸ್ವಾತಂತ್ರ್ಯ ಚಳವಳಿಯ ವೀರರಿದ್ದಾರೆ. ಆದರೆ ಈ ವೀರರನ್ನು ಗುರುತಿಸುವ ಕೆಲಸವಾಗಿಲ್ಲ. ಈ ಹಿನ್ನೆಲೆ ಈನಾಡು ಸಮೂಹದ ಪ್ರಯತ್ನ ಅಮೋಘವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹಾಡಿ ಹೊಗಳಿದರು.

ಪ್ರಧಾನಿ ಮೋದಿ ಜೊತೆ ಈನಾಡು ಸಂಸ್ಥೆಯ ಎಂಡಿ ಸಿ.ಎಚ್. ಕಿರಣ್

ಕೇಂದ್ರ ಸರ್ಕಾರದ ಪ್ರಯತ್ನದ ಬಗ್ಗೆ ಮೋದಿ ವಿವರಣೆ: ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ವೀರರನ್ನು ಮುನ್ನೆಲೆಗೆ ತರಲು ಕೇಂದ್ರ ಸರ್ಕಾರ ಮಾಡಿರುವ ಕೆಲವು ಪ್ರಯತ್ನಗಳ ಬಗ್ಗೆ ಮೋದಿ ಇದೇ ವೇಳೆ ವಿವರಣೆ ನೀಡಿದ್ದು ವಿಶೇಷವಾಗಿತ್ತು. ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಕೇಂದ್ರ ಸರ್ಕಾರ ಕೈಗೊಂಡಿರುವ ಹಲವು ಕಾರ್ಯಕ್ರಮಗಳನ್ನು ಪ್ರಸ್ತಾಪಿಸಿದರು. ದೇಶದ ವಿವಿಧೆಡೆ ಬುಡಕಟ್ಟು ವಸ್ತು ಸಂಗ್ರಹಾಲಯಗಳನ್ನು ಸ್ಥಾಪಿಸಲಾಗಿದೆ ಎಂಬ ವಿಚಾರವನ್ನೂ ಪ್ರಧಾನಿ ನೆನಪಿಸಿದರು.

ಪ್ರಧಾನಿ ಮೊದಿ ಜೊತೆ ಈನಾಡು ಸಂಸ್ಥೆಯ ಎಂಡಿ ಕಿರಣ್ ರಾವ್ ಮಾತುಕತೆ

ರಾಮೋಜಿ ಸಮೂಹ ಸಂಸ್ಥೆಯ ಮುಖ್ಯಸ್ಥರಾಗಿರುವ ಶ್ರೀಯುತ ರಾಮೋಜಿ ರಾವ್ ಅವರೊಂದಿಗಿನ ನಿಕಟ ಸಂಬಂಧದ ಬಗ್ಗೆ ಪ್ರಧಾನ ಮಂತ್ರಿ ಇದೇ ವೇಳೆ ಸುದೀರ್ಘವಾಗಿ ಮಾತನಾಡಿದರು. ಮೋದಿ ಅವರು ರಾಮೋಜಿ ರಾವ್​​ ಅವರೊಂದಿಗಿನ ಅನೇಕ ಭೇಟಿಗಳನ್ನು ಈ ಸಂದರ್ಭದಲ್ಲಿ ಸ್ಮರಿಸಿದರು. ಅಲ್ಲದೇ ಸಮಾಜ ಸೇವೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಶ್ರೀ ರಾಮೋಜಿ ರಾವ್ ಅವರ ಕೊಡುಗೆಗಳನ್ನು ಪ್ರಧಾನಿಗಳು ಶ್ಲಾಘಿಸಿದರು.

ಇದನ್ನೂ ಓದಿ: ಅಂದು ಸೇನಾ ಶಾಲೆ ವಿದ್ಯಾರ್ಥಿ, ಇಂದು ಸೇನಾ ಮೇಜರ್: 21 ವರ್ಷದ ಬಳಿಕ ​ಮೋದಿ ಭೇಟಿಯಾದ ಅಮಿತ್​

Last Updated : Oct 26, 2022, 6:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.