ETV Bharat / bharat

ಮೋದಿ ಮತಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ: ಪ್ರಶಾಂತ್ ಭೂಷಣ್ - ದು ಸುಪ್ರೀಂ ಕೋರ್ಟ್​ ಅಡ್ವೋಕೇಟ್​ ಪ್ರಶಾಂತ್ ಭೂಷಣ್

ರೈತರ ಪ್ರತಿಭಟನೆಯು ಬಿಜೆಪಿಗೆ ಹಿನ್ನಡೆಯಾಗಲಿದೆ ಮತ್ತು ಇದು ಚುನಾವಣೆಯಲ್ಲಿ ಪ್ರತಿಕೂಲವಾಗಿ ಪ್ರತಿಫಲಿಸುತ್ತದೆ. ಹಾಗೆ ಈ ರೈತರ ಪ್ರತಿಭಟನೆ ಉತ್ತರ ಪ್ರದೇಶ ಸೇರಿದಂತೆ ರಾಜ್ಯಗಳಲ್ಲಿಯೂ ಪರಿಣಾಮ ಬೀರುತ್ತದೆ ಎಂದು ಸುಪ್ರೀಂ ಕೋರ್ಟ್​ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಭವಿಷ್ಯ ನುಡಿದಿದ್ದಾರೆ.

Prashant Bhushan
ಶಾಂತ್ ಭೂಷಣ್
author img

By

Published : Nov 7, 2021, 8:09 AM IST

ತಿರುವನಂತಪುರ(ಕೇರಳ): ಪ್ರಧಾನಿ ನರೇಂದ್ರ ಮೋದಿ ಮತಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎಂದು ಸುಪ್ರೀಂ ಕೋರ್ಟ್​ ಅಡ್ವೋಕೇಟ್​ ಪ್ರಶಾಂತ್ ಭೂಷಣ್ ಹರಿಹಾಯ್ದಿದ್ದಾರೆ.

ಮಾಧ್ಯಮ ಸಂವಾದವೊಂದರಲ್ಲಿ ಮಾತನಾಡಿದ ಅವರಿ, ಪೋಪ್ ಜೊತೆ ನಿಂತಾಗ ಮೋದಿ ಪೋಪ್​ಗಿಂತಲೂ ಚೆಂದವಾಗಿ ಕಾಣುತ್ತಾರೆ, ಬಂಗಾಳ ಚುನಾವಣೆ ವೇಳೆ ಟ್ಯಾಗೋರರಂತೆ ಗಡ್ಡ ಬಿಡ್ತಾರೆ. ಮುಸ್ಲಿಂ ಮತಗಳಿಗಾಗಿ ಇರಾನ್​ನ ರಾಜಕೀಯ ಮತ್ತು ಧಾರ್ಮಿಕ ಮುಖಂಡ ಆಯತುಲ್ಲಾ ಖೊಮೇನಿ ಅವರನ್ನು ಅಪ್ಪಿಕೊಳ್ಳುತ್ತಾರೆ ಎಂದು ಪ್ರಶಾಂತ್ ಭೂಷಣ್ ವ್ಯಂಗ್ಯವಾಡಿದ್ದಾರೆ.

ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್

ರೈತರ ಪ್ರತಿಭಟನೆಯಿಂದ ಬಿಜೆಪಿಗೆ ಹಿನ್ನಡೆಯಾಗಲಿದೆ ಮತ್ತು ಇದು ಚುನಾವಣೆಯಲ್ಲಿ ಪ್ರತಿಕೂಲವಾಗಿ ಪ್ರತಿಫಲಿಸುತ್ತದೆ. ಹಾಗೆ ಈ ರೈತರ ಪ್ರತಿಭಟನೆ ಉತ್ತರ ಪ್ರದೇಶ ಸೇರಿದಂತೆ ರಾಜ್ಯಗಳಲ್ಲಿಯೂ ಪರಿಣಾಮ ಬೀರುತ್ತದೆ ಎಂದು ಭವಿಷ್ಯ ನುಡಿದರು.

ಇಂಧನ ಬೆಲೆ ಏರಿಕೆಯಂತಹ ರಾಜಕೀಯ ಪರಿಸ್ಥಿತಿಯ ಲಾಭವನ್ನು ಪ್ರತಿಪಕ್ಷಗಳು ಪಡೆಯಲು ಸಾಧ್ಯವಿಲ್ಲ ಎಂದು ಇದೇ ವೇಳೆ ಪ್ರಶಾಂತ್ ಭೂಷಣ್ ಅಭಿಪ್ರಾಯಪಟ್ಟರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.