ಮುಂಬೈ: ಗಾಯಕಿ ಲತಾ ಮಂಗೇಶ್ಕರ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಮುಂಬೈನ ಶಿವಾಜಿ ಪಾರ್ಕ್ನಲ್ಲಿ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡರು. ಪ್ರಧಾನಿ ಮೋದಿ ಅವರ ಪಾರ್ಥಿವ ಶರೀರಕ್ಕೆ ಹೂಗುಚ್ಛ ಅರ್ಪಿಸಿ, ಅಂತಿಮ ನಮನ ಸಲ್ಲಿಸಿದರು.
ಸಂಜೆ ಮುಂಬೈಗೆ ಬಂದಿಳಿದ ಪ್ರಧಾನಿ ಅವರು ನೇರವಾಗಿ ಶಿವಾಜಿ ಪಾರ್ಕ್‌ಗೆ ತೆರಳಿ, ಲತಾ ಮಂಗೇಶ್ಕರ್ ಅವರ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಅರ್ಪಿಸಿದರು.
ಇದನ್ನೂ ಓದಿ: ಮನೆ ಜವಾಬ್ದಾರಿ ಹೊತ್ತ ಲತಾ ತಾಯಿ ಅಭಿನಯಕ್ಕೂ ಸೈ.. ದೈವದತ್ತ ವರ ಸಂಗೀತವೇ ಉತ್ತುಂಗಕ್ಕೇರಿಸಿತು..
ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿಯವರನ್ನು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ, ಸಚಿವ ಆದಿತ್ಯ ಠಾಕ್ರೆ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಬರಮಾಡಿಕೊಂಡರು.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮತ್ತು ರಾಜ್ಯ ಸಚಿವ ಆದಿತ್ಯ ಠಾಕ್ರೆ, ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತು ಅವರ ಪತ್ನಿ ಅಂಜಲಿ ತೆಂಡೂಲ್ಕರ್, ಬಾಲಿವುಡ್ ನಟರಾದ ಶಾರೂಕ್ ಖಾನ್, ಅಮೀರ್ ಖಾನ್ ಸೇರಿದಂತೆ ಹಲವರು ಅಗಲಿದ ಗಾನಕೋಗಿಲೆ ಲತಾ ಮಂಗೇಶ್ಕರ್ ಅವರಿಗೆ ಅಂತಿಮ ನಮನ ಸಲ್ಲಿಕೆ ಮಾಡಿದರು.