ETV Bharat / bharat

ಸ್ವಾತಂತ್ರ್ಯ ಭಾಷಣದಲ್ಲಿ ಮಣಿಪುರ ವಿಚಾರ ಪ್ರಸ್ತಾಪ.. ದೇಶವನ್ನು ವಿಶ್ವದ 3ನೇ ಆರ್ಥಿಕತೆಯಾಗಿಸುವ ವಾಗ್ದಾನ ಮಾಡಿದ ಮೋದಿ

author img

By

Published : Aug 15, 2023, 10:34 AM IST

ಸಂಸತ್​ ಅಧಿವೇಶನದಲ್ಲಿ ವಿಪಕ್ಷಗಳ ಬಹುಮುಖ್ಯ ವಿಚಾರವಾಗಿದ್ದ ಮಣಿಪುರ ಕಲಹವನ್ನು ಪ್ರಧಾನಿ ನರೇಂದ್ರ ಮೋದಿ ಅವರು, 77ನೇ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಸ್ತಾಪಿಸಿದರು.

ಸ್ವಾತಂತ್ರ್ಯ ಭಾಷಣದಲ್ಲಿ ಮಣಿಪುರ ವಿಚಾರ ಪ್ರಸ್ತಾಪ

ನವದೆಹಲಿ: ಜನಾಂಗೀಯ ಹಿಂಸಾಚಾರಕ್ಕೆ ತುತ್ತಾಗಿ ರಾಜಕೀಯ ಕಲಹಕ್ಕೂ ನಾಂದಿ ಹಾಡಿರುವ ಮಣಿಪುರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಸ್ತಾಪಿಸಿ, ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಸರ್ವಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದರು.

ಕೆಂಪುಕೋಟೆಯಲ್ಲಿ 77ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ತ್ರಿವರ್ಣ ಧ್ವಜ ಹಾರಿಸಿ ಭಾಷಣ ಮಾಡಿದ ಅವರು, ಈ ವರ್ಷದ ಮೇ ತಿಂಗಳಿನಿಂದ ಮಣಿಪುರದಲ್ಲಿ ತೀವ್ರ ಹಿಂಸಾಚಾರ ನಡೆಯುತ್ತಿದೆ. ಜನಾಂಗೀಯ ಕಲಹಕ್ಕೆ ತುತ್ತಾದ ಜನರೊಂದಿಗೆ ದೇಶಗಿದೆ. ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದರು.

ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ, ಮಹಿಳೆಯರ ಮೇಲಿನ ದೌರ್ಜನ್ಯದ ಘಟನೆಗಳ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶಾಂತಿಯ ಮೂಲಕ ಪರಿಹಾರದ ಮಾರ್ಗವನ್ನು ಕಂಡುಕೊಳ್ಳಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಸ್ಯೆ ಪರಿಹಾರಕ್ಕೆ ಎಲ್ಲ ಪ್ರಯತ್ನಗಳನ್ನು ಮಾಡುತ್ತಿವೆ. ನಾವು ಇದನ್ನು ಮುಂದುವರಿಸುತ್ತೇವೆ ಎಂದೂ ಇದೇ ವೇಳೆ ಹೇಳಿದರು.

ಕೆಲವು ಚಿಕ್ಕ ಘಟನೆಗಳು ಭವಿಷ್ಯದಲ್ಲಿ ದೊಡ್ಡ ಹೊಡೆತಗಳಿಗೆ ಕಾರಣವಾಗುತ್ತವೆ. ಮಣಿಪುರ ವಿಚಾರವನ್ನು ಕೂಲಂಕಷವಾಗಿ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು. ರಾಜ್ಯದಲ್ಲಿ ಶಾತಿಯನ್ನು ನೆಲೆಗಾಣಿಸುವುದೇ ಸರ್ಕಾರಗಳ ಕೊನೆಯ ಉದ್ದೇಶ ಎಂದು ಪ್ರಧಾನಿ ವಿವರಿಸಿದರು.

ಹಲವು ವರ್ಷಗಳ ಗುಲಾಮಗಿರಿಯ ನಂತರ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಸ್ವಾತಂತ್ರ್ಯಾ ನಂತರ ದೇಶ ಹೊಸ ಎತ್ತರದತ್ತ ಸಾಗುತ್ತಿದೆ. ನಾವು ಸಾವಿರ ವರ್ಷಗಳ ಭವಿಷ್ಯದ ಕವಲುದಾರಿಯಲ್ಲಿ ನಿಂತಿದ್ದೇವೆ. ನಮ್ಮ ಯುವಕರಲ್ಲಿ ಸಾಮರ್ಥ್ಯವಿದೆ. ಅವರನ್ನು ಬಲಪಡಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ನಮ್ಮ ಯುವಕರು ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್​ಅಪ್ ವ್ಯವಸ್ಥೆಯನ್ನಾಗಿ ಮಾಡಿದ್ದಾರೆ ಎಂದು ಮೋದಿ ನುಡಿದರು.

3ನೇ ಅತಿದೊಡ್ಡ ಆರ್ಥಿಕ ಗ್ಯಾರಂಟಿ: ಮುಂದಿನ 5 ವರ್ಷಗಳಲ್ಲಿ ಭಾರತ 3ನೇ ಅತಿದೊಡ್ಡ ಜಾಗತಿಕ ಆರ್ಥಿಕ ರಾಷ್ಟ್ರವಾಗಲಿದೆ. ಇದು ನನ್ನ ಗ್ಯಾರಂಟಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ಜನರನ್ನು ನಾಗರಿಕರು ಎಂದು ಸಂಬೋಧಿಸುವ ಬದಲಾಗಿ ಕುಟುಂಬ ಸದಸ್ಯರೇ ಎಂದು ಮೋದಿ ಹೇಳಿದರು.

ನನ್ನ ಪ್ರೀತಿಯ 140 ಕೋಟಿ ಕುಟುಂಬ ಸದಸ್ಯರೇ ಎಂದು ಪ್ರಧಾನಿ ಭಾಷಣ ಪ್ರಾರಂಭಿಸಿದರು. ಭಾಷಣದುದ್ದಕ್ಕೂ ಅವರು ದೇಶದ ಜನರನ್ನು ಕುಟುಂಬ ಸದಸ್ಯರೇ ಎಂದು ಉಲ್ಲೇಖಿಸಿದರು. ತಮ್ಮ ಹಿಂದಿನ ಭಾಷಣಗಳಲ್ಲಿ ಪ್ರಧಾನಿಯವರು ದೇಶದ ಜನರನ್ನು "ನನ್ನ ಪ್ರೀತಿಯ ಸಹೋದರ ಸಹೋದರಿಯರೇ" ಎಂದು ಹೇಳುತ್ತಿದ್ದರು.

ಇದನ್ನೂ ಓದಿ: Independence day: ಯುವಶಕ್ತಿಯಿಂದ ಭಾರತ ವಿಶ್ವಗುರು: ಪ್ರಧಾನಿ ನರೇಂದ್ರ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.