ನವದೆಹಲಿ: ಹಲವು ದಿನಗಳಿಂದ ಉಕ್ರೇನ್ - ರಷ್ಯಾ ಉದ್ವಿಗ್ನ ಪರಿಸ್ಥಿತಿ ತಲೆದೋರಿತ್ತು. ಅದೀಗ ಎಲ್ಲ ಎಲ್ಲೆಗಳನ್ನು ಮೀರಿ ಕಟ್ಟೆಯೊಡೆದಿದ್ದು, ರಷ್ಯಾ ಉಕ್ರೇನ್ ಮೇಲೆ ಅಧಿಕೃತವಾಗಿ ಯುದ್ಧ ಸಾರಿದ್ದು, ವೈಮಾನಿಕ ದಾಳಿ ಆರಂಭಿಸಿದೆ. ರಷ್ಯಾದ ಈ ಕ್ರಮ ಈಗ ವಿಶ್ವವನ್ನು ತಲ್ಲಣಗೊಳಿಸಿದ್ದು, ಯುದ್ಧದ ಕಾರ್ಮೋಡ ಕವಿದಿದೆ. ವಿಶ್ವಸಂಸ್ಥೆಯ ಮನವಿಗೆ ಕ್ಯಾರೇ ಎನ್ನದ ರಷ್ಯಾ ಅಧ್ಯಕ್ಷ ಪುಟಿನ್, ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾ ವ್ಯವಹಾರದಲ್ಲಿ ತಲೆ ಹಾಕದಂತೆ ಎಚ್ಚರಿಕೆ ಕೂಡಾ ನೀಡಿದ್ದಾರೆ.
-
#WATCH Prime Minister Narendra Modi chairs meeting of the Cabinet Committee on Security (CCS) pic.twitter.com/9lvHMRi1bT
— ANI (@ANI) February 24, 2022 " class="align-text-top noRightClick twitterSection" data="
">#WATCH Prime Minister Narendra Modi chairs meeting of the Cabinet Committee on Security (CCS) pic.twitter.com/9lvHMRi1bT
— ANI (@ANI) February 24, 2022#WATCH Prime Minister Narendra Modi chairs meeting of the Cabinet Committee on Security (CCS) pic.twitter.com/9lvHMRi1bT
— ANI (@ANI) February 24, 2022
ಈ ನಡುವೆ ಎರಡೂ ರಾಷ್ಟ್ರಗಳ ನಡುವಣ ಯುದ್ಧವನ್ನು ನಿಲ್ಲಿಸಲು ಕಸರತ್ತುಗಳು ಆರಂಭವಾಗಿವೆ. ಈ ನಡುವೆ ಈಗ ಬಲಾಢ್ಯ ಶಕ್ತಿಯಾಗಿ ಬೆಳೆಯುತ್ತಿರುವ ಭಾರತ ಈ ಯುದ್ಧ ನಿಲ್ಲಿಸಲು ಪ್ರಯತ್ನ ಆರಂಭಿಸಿದೆ. ಅಷ್ಟೇ ಅಲ್ಲ ತಟಸ್ಥ ನಿಲುವು ತಾಳಿ ಎರಡೂ ರಾಷ್ಟ್ರಗಳಿಗೆ ಯುದ್ಧ ಬೇಡ ಎಂದು ಮನವಿ ಮಾಡಿದೆ. ಭಾರತದ ಈ ನಿಲುವನ್ನು ಸ್ವಾಗತಿಸಿರುವ ರಷ್ಯಾ, ದೇಶದ ನಡೆ ಕೊಂಡಾಡಿದ್ದು ಸಂಬಂಧ ಹೀಗೆ ಮುಂದುವರೆಸುವುದಾಗಿ ತಿಳಿಸಿದೆ. ಇನ್ನು ಉಕ್ರೇನ್ ಭಾರತ ಯುದ್ಧ ನಿಲ್ಲಿಸಲು ಮಧ್ಯಸ್ಥಿಕೆ ವಹಿಸಬೇಕು ಎಂದು ಕರೆ ನೀಡಿದೆ.
ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟದ ಪ್ರಮುಖರು ಹಾಗೂ ಭದ್ರತಾ ಪಡೆ ಮುಖ್ಯಸ್ಥರು, ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸುತ್ತಿದ್ದಾರೆ. ಮತ್ತೊಂದು ಮಹತ್ವದ ವಿಚಾರ ಎಂದರೆ ಇಂದು ರಾತ್ರಿಯೇ ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಜತೆ ಪ್ರಧಾನಿ ಮೋದಿ ಮಾತನಾಡುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ರಾತ್ರಿಯ ಈ ಮಾತುಕತೆ ಈಗ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಮೋದಿ ಪುಟಿನ್ ಜತೆ ಯಾವ ವಿಷಯ ಚರ್ಚಿಸಲಿದ್ದಾರೆ, ಯುದ್ಧ ನಿಲ್ಲಿಸಲು ಏನಾದರೂ ಹೇಳುತ್ತಾರೆ ಎಂಬುದು ಬಹುಮುಖ್ಯ ಅಂಶವಾಗಿದೆ.
ರಷ್ಯಾ ದಾಳಿಯ ಇಂದಿನ ಮುಖ್ಯಾಂಶಗಳು ಇಂತಿವೆ.
-
Prime Minister Narendra Modi likely to speak to Russian President Vladimir Putin tonight: Sources #RussiaUkraineConflict pic.twitter.com/825LKD0WMC
— ANI (@ANI) February 24, 2022 " class="align-text-top noRightClick twitterSection" data="
">Prime Minister Narendra Modi likely to speak to Russian President Vladimir Putin tonight: Sources #RussiaUkraineConflict pic.twitter.com/825LKD0WMC
— ANI (@ANI) February 24, 2022Prime Minister Narendra Modi likely to speak to Russian President Vladimir Putin tonight: Sources #RussiaUkraineConflict pic.twitter.com/825LKD0WMC
— ANI (@ANI) February 24, 2022
- ಬೆಳಗ್ಗಿನಿಂದ 203 ಬಾರಿ ರಷ್ಯಾ ದಾಳಿ, 74 ಸೇನಾ ಮೂಲಸೌಕರ್ಯ ಕೇಂದ್ರಗಳು ಧ್ವಂಸ ಮಾಡಲಾಗಿದೆ ಎಂದು ಉಕ್ರೇನ್ ಮಾಹಿತಿ ನೀಡಿದೆ.
- ಭಾರತೀಯ ಕಾಲಮಾನ ಬೆಳಗ್ಗೆ 8:30ಕ್ಕೆ ಉಕ್ರೇನ್ ಮೇಲೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಯುದ್ಧ ಘೋಷಣೆ ಮಾಡಿದರು. ಪ್ರತ್ಯೇಕತಾವಾದಿಗಳಿಂದ ರಕ್ಷಿಸಲು ಯುದ್ಧ ಅನಿವಾರ್ಯ ಎಂದು ಪುಟಿನ್ ತಮ್ಮ ನಡೆ ಸಮರ್ಥಿಸಿಕೊಂಡಿದ್ದಾರೆ. ಎರಡೂ ಕಡೆಗಳಲ್ಲಿ ಭಾರೀ ಪ್ರಮಾಣದಲ್ಲಿ ಸಾವು - ನೋವು ಸಂಭವಿಸಿದೆ ಎಂದು ಇತ್ತೀಚಿನ ವರದಿಗಳು ಹೇಳಿವೆ.
- 11 ಏರೋಡ್ರೋಮ್ ಸೇರಿದಂತೆ ಉಕ್ರೇನ್ನ 74 ಮಿಲಿಟರಿ ಮೂಲ ಸೌಕರ್ಯ ಕೇಂದ್ರಗಳನ್ನು ಧ್ವಂಸ ಮಾಡಿರುವುದಾಗಿ ರಷ್ಯಾದ ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ. ದಶ ದಿಕ್ಕುಗಳಿಂದಲೂ ರಷ್ಯಾದ ಭೂಸೇನೆ ಶಸ್ತ್ರ ಸಜ್ಜಿತವಾಗಿ ಉಕ್ರೇನ್ನತ್ತ ಮುನ್ನುಗ್ಗುತ್ತಿದೆ.
- ಬೆಳಗ್ಗಿನಿಂದ ಒಟ್ಟು 203 ಬಾರಿ ರಷ್ಯಾ ಅಟ್ಯಾಕ್ ಮಾಡಿದೆ ಎಂದು ಉಕ್ರೇನ್ ಪೊಲೀಸರು ಹೇಳಿದ್ದಾರೆ.
- ಉಕ್ರೇನ್ ಗಡಿಯುದ್ದಕ್ಕೂ ರಷ್ಯಾ ದಾಳಿ ಮುಂದುವರೆದಿದೆ.
- 14 ಯೋಧರು ಇದ್ದ ಉಕ್ರೇನ್ನ ಯುದ್ಧ ವಿಮಾನ ರಾಜಧಾನಿ ಕೀವ್ನಿಂದ ದಕ್ಷಿಣಕ್ಕೆ ಪತನವಾಗಿದೆ ಎಂದು ತುರ್ತು ಸೇವಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅದರಲ್ಲಿದ್ದ 14 ಮಂದಿಯೂ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
- ಗಡಿಯುದ್ದಕ್ಕೂ ಉಕ್ರೇನ್ ಸೇನೆ ಮತ್ತು ರಷ್ಯಾ ಸೇನಾಪಡೆಯ ನಡುವೆ ತೀವ್ರ ಗುಂಡಿನ ಕಾಳಗ ನಡೆಯುತ್ತಿದೆ. ರಾಜಧಾನಿ ಕೀವ್ ಸಮೀಪವಿರುವ ಸೇನಾ ಏರ್ಪೋರ್ಟ್, ಸಮಿ, ಖಾರ್ಕಿವ್, ಖೆರ್ಸನ್ ಮತ್ತು ಒಡೆಸ್ಸಾ ಪ್ರದೇಶದಲ್ಲೂ ಮಹಾ ಕದನ ನಡೆಯುತ್ತಿದೆ.
- ದೇಶ ರಕ್ಷಿಸಲು ಬಯಸುವವರಿಗೆ ನಾವು ಶಸ್ತ್ರಾಸ್ತ್ರ ನೀಡುತ್ತೇವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಮ್ಮ ನಗರಗಳ ರಸ್ತೆಗಳಲ್ಲಿ ಉಕ್ರೇನ್ ಪರ ನಿಲ್ಲಲು ಸಿದ್ಧರಾಗಿರಿ ಎಂದಿದ್ದಾರೆ. ಈಗಾಗಲೇ ಉಕ್ರೇನ್ ರಷ್ಯಾ ಜೊತೆಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಂಡಿದೆ.
- ಅಮೆರಿಕಾ ರಷ್ಯಾದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಜಿ-7 ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ರಷ್ಯಾ ಮೇಲೆ ಹೊಸ ನಿರ್ಬಂಧ ವಿಧಿಸುವ ಬಗ್ಗೆ ಜಿ-7 ಲೀಡರ್ಗಳ ಜೊತೆ ಬೈಡನ್ ಮಾತನಾಡಿದ್ದಾರೆ.
- ಏಳು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ತೈಲ ದರ 100 ಡಾಲರ್ ಗಡಿ ದಾಟಿದೆ. ಯುರೋಪಿನ ಗೋಧಿ ಬೆಲೆಯೂ ದಾಖಲೆ ಪ್ರಮಾಣದಲ್ಲಿ ಏರಿಕೆ ಆಗಿದೆ.
- ಇಂದು ರಾತ್ರಿಯೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ಸಾಧ್ಯತೆ. ಉಕ್ರೇನ್ ರಾಯಭಾರಿಯ ಮನವಿ ಮೇರೆಗೆ ಮೋದಿ - ಪುಟಿನ್ ಮಾತುಕತೆ ನಡೆಸುವ ನಿರೀಕ್ಷೆ ಇದೆ.