ನವದೆಹಲಿ: ನವದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿರುವ ಶೃಂಗಸಭೆಗೆ ರೆಡ್ ಕಾರ್ಪೆಟ್ನ ಮೂಲಕ ಪ್ರಧಾನಿ ಮೋದಿ ಅವರು, G20 ನಾಯಕರನ್ನು ಸ್ವಾಗತ ಕೋರಿದರು. ಈ ವೇಳೆ, ಒಡಿಶಾದ ಪುರಿಯಲ್ಲಿರುವ ಪ್ರಸಿದ್ಧ ಸೂರ್ಯ ದೇವಾಲಯದ ಕೋನಾರ್ಕ್ ಚಕ್ರದ ಪ್ರತಿಕೃತಿಯು ಪ್ರಧಾನಿ ನರೇಂದ್ರ ಮೋದಿ ಅವರು, ಇಂದು (ಶನಿವಾರ) ಹಸ್ತಲಾಘವದೊಂದಿಗೆ G20 ವಿಶ್ವ ನಾಯಕರನ್ನು ಸ್ವಾಗತ ವೇದಿಕೆಯ ಬ್ಯಾಗ್ರೌಂಡ್ ಆಗಿ ಕಾರ್ಯನಿರ್ವಹಿಸಿತು. ಸ್ವಾಗತ ವೇದಿಕೆಗೆ ಆಗಮಿಸಿದ ಎಲ್ಲ ನಾಯಕರನ್ನು ಕೋನಾರ್ಕ್ ಚಕ್ರದ ಪ್ರತಿಕೃತಿಯು ಸೋಜಿಗದಂತೆ ಸಳೆಯಿತು.
13ನೇ ಶತಮಾನದಲ್ಲಿ ಕೋನಾರ್ಕ್ ಚಕ್ರ ನಿರ್ಮಾಣ: ಕೋನಾರ್ಕ್ ಚಕ್ರವನ್ನು 13ನೇ ಶತಮಾನದಲ್ಲಿ ರಾಜ ನರಸಿಂಹದೇವ-I ಅವರ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ. ಈ ಚಕ್ರವು ಭಾರತದ ಪುರಾತನ ಬುದ್ಧಿವಂತಿಕೆ, ಮುಂದುವರಿದ ನಾಗರಿಕತೆ ಮತ್ತು ವಾಸ್ತುಶಿಲ್ಪದ ಶ್ರೇಷ್ಠತೆಯನ್ನು ಒಳಗೊಂಡಿದೆ. ಈ ಚಕ್ರವನ್ನು ಭಾರತದ ರಾಷ್ಟ್ರೀಯ ಧ್ವಜಕ್ಕೆ ಅಳವಡಿಸಲಾಗಿದೆ. ಅದರ ಚಕ್ರದ ತಿರುಗುವ ಚಲನೆಯು ಸಮಯ ಬಿಂಬಿಸುತ್ತದೆ. ಪ್ರಗತಿ ಮತ್ತು ನಿರಂತರ ಬದಲಾವಣೆಯನ್ನು ಈ 'ಕಾಲಚಕ್ರ'ದ ಸಂಕೇತವಾಗಿದೆ.
ಈ ಚಕ್ರ ಪ್ರಜಾಪ್ರಭುತ್ವದ ಸಂಕೇತ: ಈ ಚಕ್ರವು ಪ್ರಜಾಪ್ರಭುತ್ವದ ಪ್ರಬಲ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ. ಇದು ಪ್ರಜಾಪ್ರಭುತ್ವದ ಆದರ್ಶಗಳ ಸ್ಥಿತಿಸ್ಥಾಪಕತ್ವ ಮತ್ತು ಸಮಾಜದಲ್ಲಿ ಪ್ರಗತಿಗೆ ಪೂರಕವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ವಿಶ್ವದ ಅಗ್ರಗಣ್ಯರ ಎರಡು ದಿನಗಳ ಸಭೆಗೆ ಮುನ್ನ ಪ್ರಧಾನಿ ಮೋದಿ ಇಂದು ಬೆಳಗ್ಗೆ ಭಾರತ್ ಮಂಟಪವನ್ನು ತಲುಪಿದರು. ಅವರ ಜೊತೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಇತರರು ಇದ್ದರು.
ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಐಎಂಎಫ್ (ಅಂತಾರಾಷ್ಟ್ರೀಯ ಹಣಕಾಸು ನಿಧಿ) ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಮತ್ತು ವಿಶ್ವಬ್ಯಾಂಕ್ ಅಧ್ಯಕ್ಷ ಅಜಯ್ ಬಂಗಾ ಅವರು, ಭಾರತ್ ಮಂಟಪದ ಸ್ಥಳಕ್ಕೆ ಆಗಮಿಸಿದ ಮೊದಲ ಕೆಲವು ನಾಯಕರು.
ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಇರುವ ಭಿನ್ನಾಭಿಪ್ರಾಯಗಳ ನಡುವೆ ಭಾರತವು ತನ್ನ ಅಧ್ಯಕ್ಷತೆಯಲ್ಲಿ ಇಂದು ಮತ್ತು ನಾಳೆ ನಡೆಯಲಿರುವ G20 ಶೃಂಗಸಭೆಯನ್ನು ಆಯೋಜಿಸುತ್ತಿದೆ. ನಿನ್ನೆ ರಾಷ್ಟ್ರ ರಾಜಧಾನಿಗೆ ಆಗಮಿಸಿದ ನಾಯಕರಲ್ಲಿ ಯುಎಸ್ ಅಧ್ಯಕ್ಷ ಜೋ ಬೈಡನ್, ಯುಕೆ ಪ್ರಧಾನಿ ರಿಷಿ ಸುನಕ್, ಜಪಾನ್ ಪಿಎಂ ಫ್ಯೂಮಿಯೊ ಕಿಶಿಡಾ, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಮತ್ತು ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಸೇರಿದಂತೆ ವಿಶ್ವ ನಾಯಕರು ಸೇರಿದ್ದಾರೆ.
ಇದನ್ನೂ ಓದಿ: G20 Summit: ಜಿ-20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಆಸನದ ಮುಂದೆ 'ಭಾರತ' ಕಾರ್ಡ್