ETV Bharat / bharat

₹530 ಕೋಟಿ ವೆಚ್ಚದ ಚಿತ್ತರಂಜನ್​ ರಾಷ್ಟ್ರೀಯ ಕ್ಯಾನ್ಸರ್​​​ ಸಂಸ್ಥೆ ಕ್ಯಾಂಪನ್​ ಉದ್ಘಾಟಿಸಿದ ಮೋದಿ - PM Modi to inaugurate CNCI

ಪಶ್ಚಿಮ ಬಂಗಾಳದಲ್ಲಿ ನೂತನವಾಗಿ ನಿರ್ಮಾಣಗೊಂಡ ಚಿತ್ತರಂಜನ್​ ರಾಷ್ಟ್ರೀಯ ಕ್ಯಾನ್ಸರ್​​ ಸಂಸ್ಥೆಯ ಎರಡನೇ ಕ್ಯಾಂಪಸ್​​ ಉದ್ಘಾಟನೆಯನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಿದರು.

Prime Minister Modi inaugurates CNCI Campus

author img

By

Published : Jan 7, 2022, 3:51 PM IST

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಕೋಲ್ಕತ್ತಾದಲ್ಲಿನ ಚಿತ್ತರಂಜನ್​ ರಾಷ್ಟ್ರೀಯ ಕ್ಯಾನ್ಸರ್​​ ಸಂಸ್ಥೆಯ ಎರಡನೇ ಕ್ಯಾಂಪಸ್​​ ಅನ್ನು ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸ್​​ ಮೂಲಕ ಉದ್ಘಾಟಿಸಿದ್ದಾರೆ. ಈ ವೇಳೆ ಸಿಎಂ ಮಮತಾ ಬ್ಯಾನರ್ಜಿ ಉಪಸ್ಥಿತರಿದ್ದರು.

ಸುಮಾರು 530 ಕೋಟಿ ರೂ. ವೆಚ್ಚದಲ್ಲಿ ಸಿಎನ್​ಸಿಐ ಕ್ಯಾಂಪನ್​ ನಿರ್ಮಿಸಲಾಗಿದ್ದು, ಕೇಂದ್ರ ಸರ್ಕಾರದಿಂದ 400 ಕೋಟಿ ರೂ. ಅನುದಾನ ಸಿಕ್ಕಿದೆ. 460 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಲ್ಲಿ ನ್ಯೂಕ್ಲಿಯರ್ ಮೆಡಿಸಿನ್​​, ಟೆಸ್ಲಾ ಎಂಆರ್​ಐ, ಸಿಟಿ ಸ್ಕ್ಯಾನರ್​ ಸೇರಿದಂತೆ ಎಲ್ಲ ರೀತಿಯ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ.

ಕ್ಯಾನ್ಸರ್​ ಆಸ್ಪತ್ರೆ ಕ್ಯಾಂಪನ್​ ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ಪಶ್ಚಿಮ ಬಂಗಾಳಕ್ಕೆ ಕೇಂದ್ರ ಸರ್ಕಾರ ಇಲ್ಲಿಯವರೆಗೆ 11 ಕೋಟಿ ಕೋವಿಡ್​​ ವ್ಯಾಕ್ಸಿನ್​ ನೀಡಿದೆ. ಜೊತೆಗೆ, 1,500 ವೆಂಟಿಲೇಟರ್ಸ್​, 9 ಸಾವಿರ ಆಕ್ಸಿಜನ್​ ಸಿಲಿಂಡರ್​, 49 ಪಿಎಸ್​ಎ ಆಕ್ಸಿಜನ್​ ಪ್ಲಾಟ್​​ ನೀಡಲಾಗಿದ್ದು, ಕೋವಿಡ್​ ವಿರುದ್ಧ ಹೋರಾಡಲು ಎಲ್ಲ ರೀತಿಯ ಸಹಕಾರ ನೀಡಲಾಗಿದೆ ಎಂದರು.

ಇದನ್ನೂ ಓದಿ: ಆ್ಯಷಸ್​ ಕ್ರಿಕೆಟ್‌ ಟೆಸ್ಟ್‌​​: ಮುಳುಗುತ್ತಿದ್ದ ಆಂಗ್ಲರ​ ತಂಡಕ್ಕೆ ಬೈರ್​ಸ್ಟೋ ಶತಕದಾಸರೆ

150 ಕೋಟಿ ಡೋಸ್‌ ಲಸಿಕೆ ವಿತರಣೆ

ದೇಶದಲ್ಲಿ ಇಲ್ಲಿಯವರೆಗೆ 150 ಕೋಟಿ ಕೋವಿಡ್ ಡೋಸ್​ ನೀಡಲಾಗಿದೆ. ಈ ಮೂಲಕ ಐತಿಹಾಸಿಕ ಮೈಲಿಗಲ್ಲು ನಿರ್ಮಾಣವಾಗಿದೆ. ಇದೀಗ 15-18 ವರ್ಷದೊಳಗಿನ ಮಕ್ಕಳಿಗೆ ವ್ಯಾಕ್ಸಿನೇಷನ್​ ನೀಡಲು ಕಾರ್ಯಾರಂಭಿಸಿದ್ದು, ಕೇವಲ 5 ದಿನಗಳಲ್ಲಿ 1.5 ಕೋಟಿಗೂ ಅಧಿಕ ಮಕ್ಕಳಿಗೆ ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.